Saturday 20th, April 2024
canara news

ಬಂಟರ ಸಂಘ ಮುಂಬಯಿ ಜ್ಞಾನ ಮಂದಿರ ಸಮಿತಿಯಿಂದ ಶ್ರದ್ಧಾಪೂರ್ವಕವಾಗಿ ನೆರವೇರಿದ ವರ್ಷಾವಧಿ ಗಣೇಶ ಚತುಥಿರ್ü ಮಹೋತ್ಸವ

Published On : 31 Aug 2022   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.31: ಬಂಟರ ಸಂಘ ಮುಂಬಯಿ ಜ್ಞಾನ ಮಂದಿರ ಸಮಿತಿ ಸಂಘದ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅವರ ಮಾರ್ಗದರ್ಶನ ಮತ್ತು ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ.ಶೆಟ್ಟಿ ಅವರ ನೇತೃತ್ವದಲ್ಲಿ ವರ್ಷಂಪ್ರತಿಯಂತೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುಥಿರ್üಯ ಬುಧವಾರ ಇಂದಿಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವರ್ಷಾವಧಿ ಗಣೇಶ ಚತುಥಿರ್ü ಮಹೋತ್ಸವ ಆಚರಿಸಿತು.

ಚೌತಿ ಹಬ್ಬದ ಪ್ರಯುಕ್ತ ಬಂಟರ ಸಂಘದ ಮಂದಿರದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಅವರು ಬೆಳಿಗ್ಗೆ ದೇವಸ್ಥಾನದ ಸನ್ನಿಧಿಯಲ್ಲಿನ ಶ್ರೀ ಮಹಾಗಣಪತಿ ದೇವರಿಗೆ ಆರಾಧಿಸಿದರು. ಯುವ ವಿಭಾಗದ ಕೊಡುಗೆಯ ಗಣಪತಿ ದೇವರ ವಿಗ್ರಹವನ್ನು ಹರೀಶ್ ವಾಸು ಶೆಟ್ಟಿ ಅಲಂಕರಿಸಲ್ಪಟ್ಟಿದ್ದು ಆರ್ಚಕರು ಪ್ರತಿಷ್ಠಾಪನೆಗೈದು 24 ತೆಂಗಿನಕಾಯಿಯ ಗಣಹೋಮ, ಮಹಾ ಮಂಗಳಾರತಿ ನೆರವೇರಿಸಿದರು. ಒಂಬತ್ತು ಪ್ರಾದೇಶಿಕ ಸಮಿತಿಗಳ ಪಾರೋಜಕತ್ವದಲ್ಲಿ ನೆರವೇರಿದ ಗಣಹೋಮದ ಯಜಮಾನಿಕೆ ಸಿಟಿ ಪ್ರಾದೇಶಿಕ ಸಮಿತಿಯ ಪದ್ಮನಾಭ ಶೆಟ್ಟಿ ಬಂಟ್ವಾಳ ಮತ್ತು ದಿವ್ಯಾ ಪಿ.ಶೆಟ್ಟಿ ದಂಪತಿ ವಹಿಸಿದ್ದರು. ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯೆಯರು ಭಜನೆಗೈದರು.

ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಜ್ಞಾನ ಮಂದಿರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಜಗನ್ನಾಥ್ ಶೆಟ್ಟಿ, ಹಾಲಿ ಉಪ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಕುರ್ಲಾ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿಬರೂರು, ಕೋಶಾಧಿಕಾರಿ ಅಶೋಕ್ ಪಕ್ಕಳ, ರವೀಂದ್ರನಾಥ ಎಂ.ಭಂಡಾರಿ, ಬಂಟರ ಭನದ ವ್ಯವಸ್ಥಾಪಕ ಪ್ರವೀಣ್ ಶೆಟ್ಟಿ ವಾರಂಗ ಸೇರಿದಂತೆ ಬಂಟರ ಸಂಘದ ವಿಶ್ವಸ್ಥ ಸದಸ್ಯರು, ಮತ್ತಿತರ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸಮನ್ವಯಕರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರನೇಕರು ಉಪಸ್ಥಿತರಿದ್ದು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಸಂಭ್ರಮಿಸಿದರು.

ಸಂಜೆ ಗೀತಾಜ್ಞಾನ, ಯಜ್ಞ, ರಂಗಪೂಜೆ ನೆರವೇರಿಸಿ ಸೂರ್ಯೋಸ್ತಮದ ವೇಳೆಗೆ ವಿಘ್ನವಿನಾಯಕನ ವಿಸರ್ಜನಾ ಪೂಜೆ ಸಂಪನ್ನ ಗೊಳಿಸಿ ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದ ನೀಡಿ ಅನುಗ್ರಹಿಸಿದರು. ರಾತ್ರಿ ಬಂಟ್ಸ್ ಸಂಘ ಹಾಸ್ಟೇಲ್ ಹುಡುಗರ ಡಿಜೆಯ ನೀನಾದದಲ್ಲಿ ಶೋಭಾಯಾತ್ರೆಯೊಂದಿಗೆ ಶ್ರೀ ವಿಶ್ವಂಭರ ಗಣಪತಿ ವಿಸರ್ಜನೆ ಗೊಳಿಸಲಾಯಿತು. ಕೊನೆಯಲ್ಲಿ ಮನೋರಮ ಎನ್.ಬಿ ಶೆಟ್ಟಿ, ಲತಾ ಜಯರಾಮ ಶೆಟ್ಟಿ, ಕಲ್ಪನಾ ಕೃಷ್ಣ ಶೆಟ್ಟಿ, ಚೈತ್ರಾ ಪ್ರವೀಣ್ ಶೆಟ್ಟಿ ಸೇವಾರ್ಥ ಅನ್ನಸಂತರ್ಪಣೆ ನೆರವೇರಿಸಿ ಏಕದಿನದ ವಾರ್ಷಿಕ ಗಣಪತಿ ಉತ್ಸವಕ್ಕೆ ವಿರಮಿಸಲಾಯಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here