Saturday 20th, April 2024
canara news

ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಶ್ರೀರಾಮ ಮಂದಿರದಲ್ಲಿ 68ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಶ್ರದ್ಧಾಪೂರ್ವಕ ಚಾಲನೆ

Published On : 31 Aug 2022   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ,ಆ.31: ಕರ್ನಾಟಕ ಕರಾವಳಿಯಿಂದ ಮುಂಬಯಿ ಆಗಮಿಸಿ ಧಾರ್ಮಿಕ ಸೇವೆಯಲ್ಲಿ ತೊಡಗಿಸಿ ಸುಮಾರು 63 ವರ್ಷಗಳಿಂದ ಸಾರ್ವಜನಿಕ ಶ್ರೀ ಗಣಪತಿ ಉತ್ಸವ ನಡೆಸುತ್ತಾ ಜಾಗತಿಕವಾಗಿ ಹೆಸರಾಂತ ರಾಷ್ಟ್ರದ ಹಾಗೂ ಮಹಾರಾಷ್ಟ್ರ ರಾಜ್ಯದ ಶ್ರೀಮಂತ ಗಣೇಶ ಪ್ರಸಿದ್ಧಿಯ ಮಹಾರಾಷ್ಟ್ರದ ಅಯೋಧ್ಯನಗರಿ ಹೆಸರಾಂತ ಜಿ.ಎಸ್.ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.) ವಡಾಲ ಈ ಬಾರಿ 68ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆಯನ್ನೀಡಿತು.

ವಡಾಲ ಕತ್ರಾಕ್ ರಸ್ತೆ ಇಲ್ಲಿನ ಶ್ರೀ ರಾಮ ಮಂದಿರ ವಡಲಾ ಹೆಸರಾಂತ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದ ಸಭಾಗೃಹದಲ್ಲಿ ಇಂದಿಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಮಠಾಧೀಶ ಮಹಾನಿರ್ವಾಣ್ (ದೈವೈಕ್ಯ) ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ಇಂದಿಲ್ಲಿ ಬುಧವಾರ ಪ್ರಾತಃಕಾಲ ವರ್ಷಾವಧಿ ಗಣೇಶೋತ್ಸವಕ್ಕೆ ಚಾಲನೆ ನೀಡಿತು.

ಇಂದಿಲ್ಲಿ ವಿಜಯನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯ ಮುಂಜಾನೆ ಪುರೋಹಿತರರು ವೈಧಿಕವಾಗಿ ಗಣೇಶ ಚತುಥಿರ್üೀ ಸಡಗರಕ್ಕೆ ಚಾಲನೆಯಿತ್ತರು. ಆ ಪ್ರಯುಕ್ತ ಪೂರ್ವಾಹ್ನ ಅರ್ಚಕ ವೇ| ಮೂ| ಸುಧಾಮ ಅನಂತ ಭಟ್ ಮತ್ತು ಸಹ ವಿದ್ವಾನರುಗಳ ಪೌರೋಹಿತ್ಯದಲ್ಲಿ ವಿಶೇಷವಾದ ಅಷ್ಠೋತ್ತರ ಗಣಯಾಗ, ನಿತ್ಯ ವಿನಾಯಕ ಪೂಜೆ ನೆರವೇರಿತು.

ಈ ಶುಭಾವಸರದಲ್ಲಿ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ವಿಶ್ವಸ್ಥ ಕಾರ್ಯಾಧ್ಯಕ್ಷ ರಾಜನ್ ಸಿ.ಭಟ್, ವಿಶ್ವಸ್ಥ ಉಪ ಕಾರ್ಯಾಧ್ಯಕ್ಷ ಮುಕುಂದ್ ವೈ.ಕಾಮತ್, ವಿಶ್ವಸ್ಥ ಕಾರ್ಯಾದರ್ಶಿ ಅನಂತ್ ಪಿ.ಪೈ, ಆಚರಣಾ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಕೋಶಾಧಿಕಾರಿ ರಾಜೀವ್ ಡಿ.ಶೆನ್ವಿ, ವಿಶ್ವಸ್ಥರುಗಳಾದ ಗಿರೀಶ್ ಎಸ್.ಪಿಕ್ಳೆ, ಪ್ರಮೋದ್ ಹೆಚ್.ಪೈ, ಸಚಿನ್ ಎಸ್.ಕಾಮತ್ ಸೇರಿದಂತೆ ನೂರಾರು ಸೇವಾಕರ್ತರು, ಭಕ್ತರು ಉಪಸ್ಥಿತದ್ದು ಗಜಮುಖ ದೇವರನ್ನು ಪೂಜಿಸಿ ವಿಘ್ನವಿನಾಯಕನನ್ನು ಸ್ತುತಿಸಿದರು.

ಈ ಬಾರಿಯ ವಾರ್ಷಿಕ ಗಣೇಶೋತ್ಸವವು ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಗಲೊಂದಿಗೆ ಇದೇ ಸೆ.09ನೇ ಶುಕ್ರÀವಾರ ಅನಂತ ಚತುರ್ಧಶಿ ದಿನ ಸಮಾಪ್ತಿ ಕಾಣಲಿದೆ ಎಂದು ಕಾರ್ಯಾದರ್ಶಿ ಅನಂತ್ ಪಿ.ಪೈ ತಿಳಿಸಿದರು.

ಮುಂಬಯಿಯಲ್ಲಿನ ಗೌಡ ಸಾರಸ್ವತ ಬ್ರಾಹ್ಮಣರಲ್ಲಿ (ಜಿಎಸ್‍ಬಿ) ಪ್ರಥಮವಾಗಿ 1955ನೇ ಇಸವಿಯಲ್ಲಿ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚಿಸಿ ಚಿಕ್ಕ ಪ್ರಮಾಣದಲ್ಲಿ ಪೂಜಿಸಿ ಆರಂಭಿಸಿದ್ದ ಈ ಸಮಿತಿ 2014ರಲ್ಲಿ ವಜ್ರಮಹೋತ್ಸವ ಸಂಭ್ರಮಿಸಿತ್ತು. ಇದೀಗ ಸುಮಾರು ಏಳು ದಶಕಗಳ ಮುನ್ನಡೆಯಲ್ಲಿದ್ದು ಗಣೇಶೋತ್ಸವ ಆಚರಣೆಯೊಂದಿಗೆ ಸಾರ್ವಜನಿಕ ಶ್ರೀ ಗಣಪತಿ ಮಂಡಲಗಳಲ್ಲೇ ಬಂಗಾರದ ಗಣಪತಿ ಎಂದೇ ಸಂಬೋದಿಸಲ್ಪಡುವ `ಸ್ವರ್ಣಮಯ ಗಜಮುಖ' ಜಗತ್ಪಸಿದ್ಧಿ ಪಡೆದಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here