Friday 9th, May 2025
canara news

ನವರಾತ್ರಿ ಹಬ್ಬ ಮುಗಿದ ಕೂಡಲೇ ತುಳು ಅಧಿಕೃತ ಬಗ್ಗೆ ಮೀಟಿಂಗ್: ವೇದವ್ಯಾಸ ಕಾಮತ್

Published On : 02 Oct 2022   |  Reported By : Rons Bantwal


ಮುಂಬಯಿ (ಆರ್‌ಬಿಐ), ಸೆ.29: ಮಂಗಳೂರುನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ವಿ. ಸುನೀಲ್ ಕುಮಾರ್‌ ಅವರು ಹೇಳಿಕೆ ನೀಡಿದ ವಿರುದ್ಧ ಸೆ. 29 ಗುರುವಾರ ದಂದು ಮಂಗಳೂರು ಕ್ಲಾಕ್ ಟವರ್ ಎದುರುಗಡೆ ತುಳು ಭಾಷೆ ಸಂರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿದರು.

ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಸಕ ಡಿ ವೇದವ್ಯಾಸ ಕಾಮತ್‌ ಭೇಟಿ ಕೊಟ್ಟು ತುಳು ಪರವಾಗಿ ಹೋರಾಟ ಮಾಡುವವರಿಗೆ ಸಾಂತ್ವಾನ ಹೇಳಿ ನವರಾತ್ರಿ ಉತ್ಸವ ಮುಗಿದ ಕೂಡಲೇ ತುಳು ಅಧಿಕೃತ ಹಾಗೂ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಂಘಟನೆಗಳನ್ನು ಒಟ್ಟು ಸೇರಿಸಿ ಮಹತ್ತರವಾದ ನಿರ್ಣಯವನ್ನು ತೆಗೆದು ಕೊಳ್ಳುವ ಹಾಗೆ ಸಚಿವ ಸುನೀಲ್ ಕುಮಾರ್ ಅವರಲ್ಲಿ ಮಾತನಾಡಿ, ಅವರು ಸಿಗುವ ದಿನಾಂಕವನ್ನು ನಿಗದಿ ಪಡಿಸಿ ತುರ್ತು ಭೇಟಿ ಮಾಡಿಸುವ ಬಗ್ಗೆ ಭರವಸೆ ನೀಡಿದರು. ಮಂಗಳೂರಿನಲ್ಲಿ ತುಳುಲಿಪಿ ಬೋರ್ಡು ಹಾಕುವ ಬಗ್ಗೆ ಯಾರು ಅಡ್ಡಿ ಮಾಡುವುದಿಲ್ಲ. ಬಸ್ಸಿಗೆ ಬೇಕಾದವರು ಹಾಕ ಬಹುದು. ನನ್ನ ಕಛೇರಿಯಲ್ಲಿ ಕೂಡ ತುಳುಲಿಪಿ ಬೋರ್ಡ್ ಇದೆ ಎಂದು ಹೇಳಿ ಹೋರಾಟಗಾರರನ್ನು ಸಮದಾನ ಮಾಡಿದರು. ಈ ಹೊತ್ತಿಗೆ ಇವರ ಜೊತೆ ರಾಜಕಾರಣಿ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಕಾರ್ಪೊರೇಟರ್ ಜಗದೀಶ್ ಅವರು ಭಾಗಿಯಾಗಿದ್ದರು. ಅದಾದ ಮೇಲೆ ತುಳು ಸಂರಕ್ಷಣಾ ಸಮಿತಿಯವರು ''ಒರಿಪುಲೆ ಒರಿಪುಲೆ ತುಳು ಭಾಷೆ ಒರಿಪುಲೆ'' ಪೋಷಣೆ ಕೂಗಿ ಬಸ್ಸಿಗೆ ತುಳು ಲಿಪಿ ಚಾರ್ಟ್ ಅಂಟಿಸದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here