Thursday 28th, March 2024
canara news

ಕಾಶೀ ಪ್ಯಾಲೇಸ್‍ನ ದಿ ಓಷ್ಯನ್ ಪರ್ಲ್‍ನಲ್ಲಿ ನೆರವೇರಿದ ಪ್ರಪ್ರಥಮ ಶುಭ ಸಮಾರಂಭ

Published On : 02 Oct 2022   |  Reported By : Rons Bantwal


ಹೆಗ್ಗಡೆ ಪರಿವಾರದೊಂದಿಗೆ ಹುಟ್ಟುಹಬ್ಬ ಸಂಭ್ರಮಿಸಿದ ಹರ್ಷೇಂದ್ರ ಕುಮಾರ್

ಮಂಗಳೂರು (ಆರ್‍ಬಿಐ), ಅ.02: ಬೆಳ್ತಂಗಡಿ ತಾಲೂಕು ಉಜಿರೆ ಇಲ್ಲಿನ ಕಾಶಿ ಪ್ಯಾಲೇಸ್‍ನಲ್ಲಿ ಕಳೆದ ಶುಕ್ರವಾರವಷ್ಟೇ ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್‍ನಲ್ಲಿ ಧರ್ಮಸ್ಥಳ ಸಮೂಹದ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬವನ್ನು ಹೆಗ್ಗಡೆ ಪರಿವಾರ ಸದಸ್ಯರು ಸಂಭ್ರಮದಿಂದ ನೆರವೇರಿಸಿದರು.

ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ದಂಪತಿಯನ್ನು ಪ್ರತಿಷ್ಠಿತ ಹೊಟೇಲು ಉದ್ಯಮಿ, ಕಾಶಿ ಪ್ಯಾಲೇಸ್‍ನ (ನವಶಕ್ತಿ ಉಜಿರೆ) ಆಡಳಿತ ನಿರ್ದೇಶಕ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ (ಬರೋಡ) ಹಾಗೂ ಒಷ್ಯನ್ ಪರ್ಲ್ ಸಮೂಹದ ಉಪಾಧ್ಯಕ್ಷ ಬಿ.ಎನ್ ಗಿರೀಶ್ ಆತ್ಮೀಯವಾಗಿ ಸ್ವಾಗತಿಸಿ ಪುಷ್ಫಗುಪ್ಚ, ಸ್ಮರಣಿಕೆಗಳನ್ನಿತ್ತು ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿನಂದಿಸಿದರು. ಪ್ರಸಿದ್ಧ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ತಂಡ ಯಕ್ಷಗಾನ ನಾಟ್ಯ ವೈಭವದ ಮೂಲಕ ವಿಶೇಷವಾಗಿ ದಂಪತಿಗಳಿಗೆ ದೀಪಾರತಿ ಬೆಳಗುವ ಮೂಲಕ ಅಭಿನಂದಿಸಿದರು.

ಈ ಶುಭಾವಸರದಲ್ಲಿ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೈತ್ರಿ, ಮಾನ್ಯ, ಆರ್ಯಾಮಾನ್, ಕಿಯಾಂಶ್ ಹಾಗೂ ಹರ್ಷೇಂದ್ರ ಅವರ ಕುಟುಂಬ ಸದಸ್ಯರು ಪಾಲ್ಗೊಂಡು ಅತ್ಯಂತ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿ ಈ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ಓಷೀಯನ್ ಪರ್ಲ್ ಸಂಸ್ಥೆ ವಿಶೇಷವಾಗಿ ನಿರ್ಮಿಸಿದ ಡಿ. ಹರ್ಷೇಂದ್ರ ಕುಮಾರ್ ಅವರ ಜೀವನದ ಹಲವು ಮಜಲುಗಳನ್ನು ಪರಿಚಯಿಸುವ ಕಿರು ಚಿತ್ರವನ್ನು ಪ್ರದರ್ಶಿಸಲಾಗಿದ್ದು, ಅತಿಥಿü ಸತ್ಕಾರ, ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಬಗ್ಗೆ ಹೆಗ್ಗಡೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here