Saturday 4th, February 2023
canara news

ಥಾಣೆ ವಾಗ್ಲೇ ಎಸ್ಟೇಟ್‍ನ ಆರ್‍ನೆಸ್ಟ್ ಬಾಂಕ್ವೇಟ್ ಸಭಾಗೃಹದಲ್ಲ್ಲಿ ಚಿತ್ರಕಲಾ ಪ್ರದರ್ಶನ

Published On : 02 Oct 2022   |  Reported By : Rons Bantwal


ಕಲಾವಿದನ ಕೈಚಳಕದಿಂದ ಜಗತ್ತು ಜೀವಾಳವಾಗಿಸಬಹುದು : ದೇವದಾಸ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಅ.02: ಜಗತ್ತಿನಲ್ಲಿ ಲೆಕ್ಕಹಾಕಲಾಗದಷ್ಟು ಕಲೆಗಳಿವೆ ಆದರೆ ಅದನ್ನು ಹೆಚ್ಚಿನವರು ಪರಿಗಣಿಸದಿರು ವುದು ಶೋಚನೀಯ. ನಾನು ಮಾನವೀಯತೆಯ ವಿಶ್ವಾಸವನ್ನು ಪಡೆಯುವ ಪ್ರಯತ್ನವಾಗಿಸಿ ಚಿತ್ರಕಲೆಯನ್ನು ರೂಢಿಸಿಕೊಂಡಿದ್ದು, ಕಲಾ ಪ್ರಪಂಚದ ಅಂಕುಡೊಂಕು ಹಾದಿಯಲ್ಲೇ ಬದುಕು ಕಟ್ಟಿಕೊಂಡಿರುವೆ. ನೋವುವಿಲ್ಲದೆ ಕಲಾವಿದನಾಗಲು ಸಾಧ್ಯವಿಲ್ಲ. ಇಂದಿಗೂ ಹಸಿರು, ನೀಲಿ, ಕೆಂಪು, ಹಳದಿ ಬಣ್ಣದ ಕುಂಚ ಬಿಡಿಸಿದ ಚಿತ್ರಗಳಲ್ಲೇ ಕಾಣಿಸಿಕೊಂಡಿರುವೆ. ಆ ಮೂಲಕ ಕಲಾವಿದನ ಕೈಚಳಕದಲ್ಲಿ ಜಗತ್ತನ್ನು ಜೀವಂತವಾಗಿರಿಸಬಹುದು ಅನ್ನುವುದ ನ್ನು ಸಾಬೀತು ಪಡಿಸಿರುವೆ ಎಂದು ಅಂತರಾಷ್ಟ್ರೀಯ ಪ್ರಸಿದ್ಧಿಯ ಚಿತ್ರಕಲಾವಿದ ದೇವದಾಸ ಶೆಟ್ಟಿ ತಿಳಿಸಿದರು.


ಇಂದಿಲ್ಲಿ ಭಾನುವಾರ ಪೂರ್ವಾಹ್ನ ಉಪನಗರ ಥಾಣೆ ವಾಗ್ಲೇ ಎಸ್ಟೇಟ್‍ನಲ್ಲಿನ ಆರ್‍ನೆಸ್ಟ್ ಬಾಂಕ್ವೇಟ್ ಸಭಾಗೃಹ ದಲ್ಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದೊಂದಿಗೆ ತನ್ನ 77ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಪ್ರದರ್ಶಿಸಲ್ಪಟ್ಟಿದ್ದು ಪ್ರದರ್ಶನದ ಅವಕಾಶಕ್ಕಾಗಿ ವಂದಿಸಿ ದೇವದಾಸ ಶೆಟ್ಟಿ ಮಾತನಾಡಿದರು.

ಆಯೋಜಿಸಲ್ಪಟ್ಟ ಏಕದಿನದ ಪ್ರದರ್ಶನವನ್ನು ಪ್ರಾಯೋಜಕರೂ, ಥಾಣೆ ಗೋಪಾಲ್ ಆಶ್ರಮ್ ಹೊಟೇಲು ಮಾಲೀಕ ರಾಘವ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾರೈಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸರಳ ಸಭಾಕಾರ್ಯಕ್ರಮದಲ್ಲಿ ದೇವದಾಸ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಒಬ್ಬ ಕಲಾವಿದನಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ಆದ್ದರಿಂದ ಕಲೆಯನ್ನು ಪೆÇ್ರೀತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದೆ. ಅದೂ ಪ್ರಕೃತಿಯ ಬಗ್ಗೆ ವಿಶೇಷ ವ್ಯಾಮೋಹವುಳ್ಳ ಬಣ್ಣಗಳ ಮಾಂತ್ರಿಕ ದೇವದಾಸ ಶೆಟ್ಟಿ ಅವರಲ್ಲಿನ ಕಲಾ ಉಪಾಸನೆ ಅತ್ಯದ್ಭುತವಾದುದು ಎಂದು ಡಾ| ಉಪಾಧ್ಯ ತಿಳಿಸಿದರು.

ಪ್ರತೀಯೊಂದು ಚಿತ್ರದಲ್ಲಿನ ಭಾವಚಿತ್ರಣ ಅಥವಾ ಅವರ ಮನಸ್ಸಿನೊಳಗಿನ ಆಶಯಗಳು ಅದು ನಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗದು. ಆದರೆ ಅವರೇ ಹೇಳಿದಾಗ ಅದು ಜೀವಂತವಾಗಿ ಭಾಸವಾಗುತ್ತದೆ. ಅತೀ ಶೀಘ್ರದಲ್ಲೇ ಶತಪ್ರಯತ್ನಗಳನ್ನು ನಡೆಸುವ ಭಾಗ್ಯ ದೇವದಾಸರ ಪಾಲಿಗೆ ಒದಗಲಿ ಎಂದು ಡಾ| ರಮಾ ಉಡುಪ ಕಲಾವಿದ ದೇವದಾಸÀರನ್ನು ಅಭಿನಂದಿಸಿದರು.

ಜಯ ಸಿ.ಸಾಲ್ಯಾನ್ ಮಾತನಾಡಿ ತುಳು-ಕನ್ನಡಿಗ ದೇವದಾಸ ಶೆಟ್ಟಿ ವಿಶ್ವದ ಹೆಸರಾಂತ ಚಿತ್ರಕಲಾವಿದರಾಗಿದ್ದು ಅವರು ತಮ್ಮ ರೇಖಾಚಿತ್ರ, ವರ್ಣಚಿತ್ರಗಳ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ನೂರಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿ ಪ್ರಸಿದ್ಧ ಕಲಾಕಾರರೆಣಿಸಿದ್ದಾರೆ. ಬದುಕು ಬಿಡಿಸಿದ ಚಿತ್ರಗಳು, ಬ್ಲೊಸಂ ಫ್ಲವರ್ಸ್ ಇತ್ಯಾದಿ ಕೃತಿಗಳ ಮೂಲಕ ಪ್ರಕಟಿಸಿದ ಖ್ಯಾತಿ ಇವರದ್ದಾಗಿದೆ. ಹಿರಿಯ ಕಲಾವಿದರ ವರ್ಣಚಿತ್ರಗಳನ್ನು ಅನುಸರಿಸಿದಾಗಲೇ ನಮ್ಮಲ್ಲೂ ಕಲಾಜ್ಞಾನ ಹೆಚ್ಚುವುದು. ದೇವದಾಸ ಶೆಟ್ಟಿ ಅವರ ಯುವಪೀಳಿಗೆಗೆ ಅತ್ಯುತ್ತಮ ಅವಕಾಶವಾಗಿದೆ. ಭಾರತೀಯ ಚಿತ್ರಕಲಾ ಕ್ಷೇತ್ರಕ್ಕೆ ದೇವದಾಸರ ಕೊಡುಗೆ ಮಹತ್ತರವಾದುದು. ಇದು ಭಾವೀ ಚಿತ್ರಕಲಾವಿದರಿಗೆ ವರದಾನವಾಗಿದೆ ಎಂದರು.

ಸಿಎ| ರಾಜಶ್ರೀ ಜಿ.ಶೆಟ್ಟಿ ಅವರು ದೇವದಾಸÀರ ಜೀವನಶೈಲಿಯನ್ನು ವಾಚಿಸಿ ಕಲೆ ಸಹಜ ಅಭಿವ್ಯಕ್ತಿ.ಯಾರಲ್ಲಿ ಈ ಕಲಾಭಿವ್ಯಕ್ತಿ ತೀವ್ರವಾಗಿರುತ್ತದೆಯೋ ಅವರೇ ಕಲಾವಿದರಾಗುತ್ತಾರೆ. ಅದೇ ಕಲಾವಿನ ಜೀವನ ಎಂದರು.

ಈ ಸಂದರ್ಭದಲ್ಲಿ ಸುಮಿತ್ರಾ ದೇವದಾಸ ಶೆಟ್ಟಿ, ಮಿಥುನ್ ಶೆಟ್ಟಿ, ಮನು ಶೆಟ್ಟಿ, ಜ್ಯೋತಿ ಎನ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಡಾ| ಜಿ.ಎನ್ ಉಪಾಧ್ಯ ಅತಿಥಿüಗಳಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಸುಷ್ಮಾ ಪ್ರವೀಣ್ ಶೆಟ್ಟಿ, ರೇಶ್ಮಾ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ತಂದೆಯ ಕಲಾನಿಷ್ಠೆಯನ್ನು ತಿಳಿಸಿದರು. ಕುಮುದಾ ಕೆ.ಆಳ್ವ ವಂದಿಸಿದರು.
More News

ಶ್ರೀ ಸುಬ್ರಹ್ಮಣ್ಯ ಮಠÀದ ಬ್ರಹ್ಮಕಲಶಾಭಿಷೇಕ ; ಸಂಸದ ರಾಹುಲ್ ಶೆವ್ಹಾಲೆ ಭೇಟಿ
ಶ್ರೀ ಸುಬ್ರಹ್ಮಣ್ಯ ಮಠÀದ ಬ್ರಹ್ಮಕಲಶಾಭಿಷೇಕ ; ಸಂಸದ ರಾಹುಲ್ ಶೆವ್ಹಾಲೆ ಭೇಟಿ
ಡಾ| ಸೈಯ್ಯದ್ ನಝೀರ್‍ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ
ಡಾ| ಸೈಯ್ಯದ್ ನಝೀರ್‍ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ

Comment Here