Saturday 3rd, December 2022
canara news

ಎ.ಸಿ ಭಂಡಾರಿ ಪತ್ನಿ ರಾಜೀವಿ ಎ.ಭಂಡಾರಿ ನಿಧನ

Published On : 08 Oct 2022   |  Reported By : Rons Bantwal


ಮುಂಬಯಿ, ಅ.08: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧಕ್ಷ, ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ, ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ, ಕಾಂಗ್ರೇಸ್ (ಐ) ಪಕ್ಷದ ಹಿರಿಯ ಮುತ್ಸದ್ಧಿ, ಕರ್ನಾಟಕ ಕರಾವಳಿಯ ಹೆಸರಾಂತ ಧುರೀಣ, ಸಜೀಪ ಮುನ್ನೂರು ನಿವಾಸಿ ಎ.ಸಿ ಭಂಡಾರಿ ಅವರ ಧರ್ಮಪತ್ನಿ ರಾಜೀವಿ ಎ.ಭಂಡಾರಿ (75.) ಒಂದೆರಡು ದಿನಗಳ ಅಸ್ವಸ್ಥತೆಯಿಂದ ಇಂದು ಬೆಳ್ಳಿಗೆ ವಿಧಿವಶರಾದರು.

ಮೃತರು ಇಬ್ಬರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಬಂಟ್ವಾಳ ಸಜೀಪ ಮುನ್ನೂರು ಇಲ್ಲಿನ ಅಂಬಡೆಬೈಲು ಸ್ವಗೃಹದ ವಿಜಯಾ ಫಾರ್ಮ್‍ನಲ್ಲಿ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್, ಬಂಟರ ಸಂಘ ಮುಂಬಯಿ ಇದರ ಬಂಟರವಾಣಿ ಮಾಸಿಕದ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಮುಲುಂಡ್ ಬಂಟ್ಸ್‍ನ ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಂಟರ ಸಂಘ ಪಿಂಪ್ರಿ ಚಿಂಚ್‍ವಾಡ್ ಪುಣೆ ಉಪಾಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
More News

ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ
ಕಾಪು ಕ್ಷೇತ್ರದಿಂದ ಸ್ಪರ್ಧೆಗೆ ಹಲವು ಆಕಾಂಕ್ಷಿಗಳು-ಮುಂಚೂಣಿಯಲ್ಲಿ ಸುರೇಶ್ ಶೆಟ್ಟಿ ಗುರ್ಮೆ
ಕಾಪು ಕ್ಷೇತ್ರದಿಂದ ಸ್ಪರ್ಧೆಗೆ ಹಲವು ಆಕಾಂಕ್ಷಿಗಳು-ಮುಂಚೂಣಿಯಲ್ಲಿ ಸುರೇಶ್ ಶೆಟ್ಟಿ ಗುರ್ಮೆ
ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯಿಂದ ಆನಂದಿಸಲ್ಪಟ್ಟ ವಿಹಾರಕೂಟ
ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯಿಂದ ಆನಂದಿಸಲ್ಪಟ್ಟ ವಿಹಾರಕೂಟ

Comment Here