Saturday 20th, April 2024
canara news

ಟೆಂಡರ್ ಪ್ರೆಶ್ ಐಸ್‍ಕ್ರೀಂ ಸಂಸ್ಥೆಯಿಂದ ಶ್ರೀಕಂಡ್ ಖಾದ್ಯ ಮಾರುಕಟ್ಟೆಗೆ ಆರೋಗ್ಯ ಕಾಳಜಿಗೆ ಐಸ್‍ಕ್ರೀಂ ಕೂಡಾ ಅವಶ್ಯ : ಅಶೋಕ್ ಎನ್.ಶೆಟ್ಟಿ

Published On : 06 Oct 2022   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.06: ಟೆಂಡರ್ ಪ್ರೆಶ್ ಐಸ್‍ಕ್ರೀಂ ಸಂಸ್ಥೆಯು ತನ್ನ ನೂತನ ಉತ್ಪನ್ನ ಶ್ರೀಕಂಡ್ ಖಾದ್ಯವನ್ನು ಕಳೆದ ಬುಧವಾರ ವಿಜಯದಶಮಿಯ ದಸರಾ ಹಬ್ಬದ ದಿನ ಸಾಂತಾಕ್ರೂಜ್ ಪೂರ್ವದ ಸಿಎಸ್‍ಟಿ ರೋಡ್ ಕಲೀನಾದಲ್ಲಿರುವ ಟೆಂಡರ್ ಪ್ರೆಶ್ ಪಾರ್ಲರ್‍ನಲ್ಲಿ ಮುಖ್ಯ ಅತಿಥಿüಯಾಗಿದ್ದ ಹೋಟೆಲ್ ಉದ್ಯಮಿ ಬೇವಾಚ್ ಹೋಟೆಲ್ ಮಾಲಕ ಅಶೋಕ್ ಎನ್.ಶೆಟ್ಟಿ ಬಿಡುಗಡೆಗೊಳಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಕಲೀನಾ ಪರಿಸರದ ಉದ್ಯಮಿ, ಚಲನಚಿತ್ರ ನಿರ್ಮಾಪಕ ಗ್ರೆಗೋರಿ ಡಿಅಲ್ಮೇಡಾ, ಹೆಸರಾಂತ ಲೆಕ್ಕ ಪರಿಶೋಧಕ ಸಿಎ| ಸುನೀಲ್ ಕೆ.ಶೆಟ್ಟಿ ಅತಿಥಿüಗಳಾಗಿದ್ದರು. ಟೆಂಡರ್ ಪ್ರೆಶ್ ಸಂಸ್ಥೆಯ ಆಡಳಿತ ನಿರ್ದೇಶಕ ವಿಶ್ವನಾಥ ಕೆ.ಶೆಟ್ಟಿ (ವಿ.ಕೆ ಶೆಟ್ಟಿ), ನಿರ್ದೇಶಕ ಮತ್ತು ಉತ್ಪಾದನಾ ಘಟಕದ ಮುಖ್ಯಸ್ಥ ಜಗದೀಶ ಕಾಮತ್ ಉಪಸ್ಥಿತರಿದ್ದರು.

ಐಸ್‍ಕ್ರೀಂ ತಿನ್ನುವುದರಿಂದ ಜ್ವರವೂ ಮಾಯವಾಗುತ್ತದೆ ಎನ್ನುವುದೂ ಆರೋಗ್ಯ ಕಾಳಜಿವುಳ್ಳ ಬಲ್ಲವರ ತಿಳುವಳಿಕೆ. ದೇಹವನ್ನು ತಂಪಾಗಿಸಿದಾಗಲೂ ಆರೋಗ್ಯವು ಸುಸ್ಥಿರವಾಗಬಲ್ಲದು. ಇದಕ್ಕೆ ಉತ್ತಮವಾದ ತಿನಿಸುಯೆಂದರೆ ಅಚ್ಚುಮೆಚ್ಚಿನ ಇಷ್ಟವಾದ ಫ್ಲೇವರ್‍ನ ಐಸ್‍ಕ್ರೀಮ್ ತಿನ್ನಬೇಕಾನಿಸುವುದು ಸಹಜ. ಆದ್ದರಿಂದ ನಮ್ಮವರ ಉತ್ಪನ್ನದ ಟೆಂಡರ್ ಪ್ರೆಶ್ ಸವಿಯಲು ಸಿದ್ದರಾಗೋಣ ಎಂದು ಅಶೋಕ್ ಶೆಟ್ಟಿ ತಿಳಿಸಿದರು.

ತುಳುಕನ್ನಡಿಗರ ಸಾರಥ್ಯದ ಟೆಂಡರ್ ಪ್ರೆಶ್ ಹೆಸರಾಂತ ಐಸ್‍ಕ್ರೀಮ್ ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದದ್ಯಂತ ಮಳಿಗೆಗಳನ್ನು ಹೊಂದಿರುವ ಟೆಂಡರ್ ಪ್ರೆಶ್ ಪಾರ್ಲರ್‍ಗಳÀು ತನ್ನ ಉತ್ಕಷ್ಟ ಗುಣಮಟ್ಟದಿಂದ ಪ್ರಸಿದ್ಧಿ ಪಡೆದಿದೆ. ಶುದ್ಧ ಹಾಲು, ಹಣ್ಣು ಹಂಪಲು, ಒಣ ಹಣ್ಣುಗಳಿಂದ ಪ್ರಾಕೃತಿಕವಾಗಿ ತಯಾರಿಸಲ್ಪಟ್ಟ ಐಸ್‍ಕ್ರೀಂ ಎಲ್ಲಾ ರೀತಿಯ ಗ್ರಾಹಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಜಗದೀಶ ಕಾಮತ್ ತಿಳಿಸಿದರು.

ಪ್ರಕೃತಿಪ್ರಿಯರಿಗೆ ತಾಜಾತನ ತುಂಬುವ ಮೆಣಸಿನಕಾಯಿ ಐಸ್‍ಕ್ರೀಂ ತಯಾರಿಸಿದ ಟೆಂಡರ್‍ಪ್ರೆಶ್ ಕ್ಯಾಪ್ಸಿಕಾನ್ ಹಸಿ ಮೆಣಸಿನಕಾಯಿ ಐಸ್‍ಕ್ರೀಂ ಸಿದ್ಧಪಡಿಸಿ ಭಾರೀ ಜನಪ್ರಿಯತೆ ಪಡೆದಿತ್ತು. ಜನರು ಇಂತಹ ಪ್ರಾಕೃತಿಕ ಐಸ್‍ಕ್ರೀಂ ಸವಿಯಲು ಇಷ್ಟ ಪಡುತ್ತಾರೆ. ತುಸು ಖಾರವಾದರೂ ನಾನೂ ಮೆಣಸಿಣಕಾಯಿ ತಿನ್ನಬ್ಬಲ್ಲೆ ಎಂದು ಸಾರಲೂ ಈ ಐಸ್‍ಕ್ರೀಂ ಪುಷ್ಟೀಕರಿಸುತ್ತದೆ. ಇದು ನೈಸರ್ಗಿಕ ಐಸ್‍ಕ್ರೀಮ್ ಫ್ಲೇವರ್‍ನ ಗುಟ್ಟಾಗಿದೆ. ಆಯಾಯ ಋತುಗಳಿಗೆ ತಕ್ಕಂತೆ ಕೊಡುವ ಹಣ್ಣುಗಳಾದ ಸೀತಾಫಲ್, ಕಲ್ಲಂಗಡಿ (ವಾಟರ್‍ಮೆಲನ್), ಸ್ಟ್ರಾವ್‍ಬರಿ, ಮಾವು, ಲಿಚ್ಚೀ, ಚಿಕ್ಕು, ಸೀಯಾಳ, ಪಪ್ಪಾಯಿ-ಪೈನ್‍ಆ್ಯಪಲ್, ಹಲಸು, ಕಪ್ಪು ದ್ರಾಕ್ಷಿಹಣ್ಣು, ನೇರಳೆ, ಕಿತ್ತಾಳೆ-ಅನಾನಸು ಇತ್ಯಾದಿ, ಬಾದಮ್-ಕೇಸರ್, ಕಾಜೂ-ದ್ರಾಕ್ಷೀ, ಕೇಸರ್ ಥಂಡೈ, ರೋಸ್ಟೆಡ್ ಅಲ್‍ಮೊಂಡ್, ಮಲಾಯಿ, ಕಾಜೂ-ಅಂಜೀರ್, ಕೇಸರ್ ಪಿಸ್ಟಾ ಇತ್ಯಾದಿ ಡ್ರೈಫ್ರುಟ್ಸ್ ಐಸ್‍ಕ್ರೀಮ್‍ಗಳೂ ತಾಜಾತನದಿಂದ ತಮ್ಮ ಮನಗಳನ್ನೇ ಕರಗಿಸುವಂತಿದೆ. ಐಸ್‍ಕ್ರೀಮ್ ತಯಾರಕರ ಪ್ರಕಾರ ರತ್ನಾಗಿರಿ ಅಲ್ಫನ್ಸೊ ಮಾರುಕಟ್ಟೆ ನಿಂತ ಬಳಿಕ ಇಂತಹ ಫ್ಲೇವರ್‍ಗಳಿಗೆ ಭಾರೀ ಬೇಡಿಕೆ ಇದೆÉ ಎಂದೂ ವಿ.ಕೆ ಶೆಟ್ಟಿ ತಿಳಿಸಿದರು. ಶಶಿಕಾಂತ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here