Sunday 10th, December 2023
canara news

ಶಾಸಕ ಹರೀಶ್ ಪೂಂಜಾ ಜೀವ ಬೆದರಿಕೆ ಖಂಡನೀಯ ವಿಜಯ್ ಶೆಟ್ಟಿ ಪಣಕಜೆ

Published On : 16 Oct 2022   |  Reported By : Rons Bantwal


ಮುಂಬಯಿ, ಅ.14: ಕಳೆದ ರಾತ್ರಿ ಫರಂಗಿಪೇಟೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರು ತಡೆದು ತಲವಾರು ಹಿಡಿದು ಜೀವ ಬೆದರಿಕೆವೊಡ್ಡಿ ನಡೆಸಲ್ಪಟ್ಟ ಘಟನೆಯು ನಿಜಕ್ಕೂ ಖಂಡನೀಯ ಎಂದು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ತಿಳಿಸಿದ್ದಾರೆ.

ನಮ್ಮ ಪರಮಾಪ್ತರೂ, ಬಿಜೆಪಿ ಶಾಶಕರೂ ಆದ ಹರೀಶ್ ಪೂಂಜಾ ಅವರ ಮೇಲಿನ ಹಲ್ಲೆ, ಹತ್ಯೆಯತ್ನ ಅಖಾಂಡ ಸಮಾಜವೇ ತಲೆತಗ್ಗಿಸುವಂತಹದ್ದು. ಜೀವ ಬೆದರಿಕೆಗೈದ ಅಪರಿಚಿತ ವ್ಯಕ್ತಿಯ ಬಂಧನ ಶೀಘ್ರವಾಗಿ ನಡೆಸಿ ಸೂಕ್ತ ಶಿಕ್ಷೆ ಒದಗಿಸುವಲ್ಲಿ ಕರ್ನಾಟಕ ಪೆÇೀಲಿಸು ಇಲಾಖೆ ಕಾರ್ಯಪ್ರವೃತ್ತವಾಗಬೇಕು. ಕ್ಷೇತ್ರವೊಂದರ ಪ್ರಭಾವೀ ಶಾಸಕರ ಕಾರನ್ನೇ ಅಡ್ಡಗಟ್ಟಿ ಆಯುಧವನ್ನು ತೋರಿಸಿ ಜೀವ ಬೆದರಿಕೆವೊಡ್ಡಿ ಹತ್ಯೆಗೆ ಪ್ರಯತ್ನಿಸುವ ಮಟ್ಟಕ್ಕೆ ಇಳಿಯುವ ವ್ಯಕ್ತಿ, ಸಂಘಟಕರ ಮೇಲೆ ಇಲಾಖೆಯು ತೀವ್ರ ಕಾರ್ಯಾಚರಣೆ ನಡೆಸಿ ಸಮಾಜದಲ್ಲಿ ಆಶಾಂತಿಯ ವಾತಾವರಣ ಸೃಷ್ಟಿಸುವ ದೇಶದ್ರೋಹಿಗಳಿಗೆ ತಕ್ಕ ಪಾಠವನ್ನು ಕಲಿಸುವ ಅಗತ್ಯವಿದೆ ಎಂದು ವಿಜಯ್ ಶೆಟ್ಟಿ ಪಣಕಜೆ ತಿಳಿಸಿದ್ದಾರೆ.




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here