Friday 19th, April 2024
canara news

ಗೋಕುಲ ಮಂದಿರಕ್ಕೆ ಪುರಾತನ ತಳಿಯ ಹೋಲಿಗಿರ್ ಆಕಳು-ಕರು ಆಗಮನ

Published On : 26 Oct 2022   |  Reported By : Rons Bantwal


ಗೋದಾನಿಗಳ ಸಮ್ಮುಖದಲ್ಲಿ ನೆರವೇರಿದ ವಿಶೇಷ ಗೋಪೂಜೆ

ಮುಂ¨ಯಿ (ಆರ್‍ಬಿಐ), ಅ.26: ಬಿಎಸ್‍ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳೊಂದಿಗೆ ಪುನರಾಭಿವೃದ್ಧಿಯಾದ ನವೀಕೃತ ಗೋಕುಲ ಮಂದಿರದಲ್ಲಿ ಕಳೆದ ಮಂಗಳವಾರ ವಿಶೇಷವಾಗಿ ಗೋವು ಪೂಜೆ ನೆರೆವೇರಿಸಲಾಯಿತು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಟ್ರಸ್ಟಿ ಮಧುಸೂದನ್ ಅಗರ್ವಾಲ್ ಮತ್ತು ಮಮತಾ ಮಧುಸೂದನ್ ಹಾಗೂ ಟ್ರಸ್ಟಿ ಅನಿಲ್ ಗುಪ್ತಾ ಅವರು ಗೋಕುಲ ಮಂದಿರಕ್ಕೆ ಕೊಡಮಾಡಿದ ರಾಷ್ಟ್ರದಲ್ಲಿನ ವೈಶಿಷ್ಟ ್ಯಮಯ ತಳಿಯ ಹೋಲಿಗಿರ್ ಹಸು (ಆಕಳು ಮತ್ತು ಕರು)ವನ್ನು ಗೋವತ್ಸದ್ವಾದಶಿ ದಿನ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಬಿಎಸ್‍ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಬರಮಾಡಿ ಕೊಂಡರು.

ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ಶಾಸ್ತ್ರೋಕ್ತವಾಗಿ ಪೂಜಾಧಿಗಗಳನ್ನು ನೆರವೇರಿಸಿ ಆಕಳು ಮತ್ತು ಕರುವನ್ನು ಆಶೀರ್ವದಿಸಿದರು. ಆರ್ಚಕ ಗೋಪಾಲ ಭಟ್ ಕಿದಿಯೂರು ಗೋಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಎಸ್‍ಕೆಬಿಎ ಮತ್ತು ಜಿಪಿಟಿ ವತಿಯಿಂದ ಗೋದಾನಗೈದ ಮಧುಸೂದನ್ ಮತ್ತು ಗುಪ್ತಾ ದಂಪತಿಯನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜಿಪಿಟಿ ಕಾರ್ಯದರ್ಶಿ (ಟ್ರಸ್ಟಿ) ಎಸ್. ರಾಮವಿಟ್ಠಲ ಕಲ್ಲೂರಾಯ, ಟ್ರಸ್ಟಿ ಬಿ.ರಮಾನಂದ ರಾವ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ವಿನೋದಿನಿ ರಾವ್, ಕೆ.ರಾಜಾರಾಮ ಆಚಾರ್ಯ, ಕೃಷ್ಣ ಮಂಜರಬೆಟ್ಟು ಸೇರಿದಂತೆ ಬಿಎಸ್‍ಕೆಬಿಎ ಸದಸ್ಯರನೇಕರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here