Friday 29th, March 2024
canara news

ಸೈಂಟ್ ಜೋನ್ ದಿ ಇವ್ಹಾಂಜೆಲಿಸ್ಟ್ ಚರ್ಚ್ ಪಾಂಗ್ಳಾ ಶತಮಾನೋತ್ಸವ ಸ್ನೇಹಮಿಲನ

Published On : 20 Nov 2022   |  Reported By : Rons Bantwal


ಮಲ್ಲಿಗೆನಾಡು ಪಾಂಗ್ಳಾ ವಿಶ್ವದ ಹೆಗ್ಗಳಿಕೆಯಾಗಿದೆ : ಫಾ| ಫರ್ಡಿನಂಡ್ ಗೊನ್ಸಾಲ್ವಿಸ್
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)


ಮುಂಬಯಿ, ನ.19: ಕರ್ನಾಟಕ ಕರಾವಳಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು ಮಲ್ಲಿಗೆನಾಡು ಪಾಂಗ್ಳಾವು ಈ ನಾಡಿನ ಹೆಗ್ಗಳಿಕೆಯಾಗಿದೆ. ಪಾಂಗ್ಳಾದ ಸೈಂಟ್ ಜೋನ್ ಇಗರ್ಜಿಯ ಶೈಕ್ಷಣಿಕ ಸಂಸ್ಥೆಗಳು ಶಿಸ್ತಿನ ಬದುಕು ಮತ್ತು ಮೌಲಿಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಈ ಮೂಲಕವೂ ಪಾಂಗ್ಳಾವು ವಿಶ್ವವ್ಯಾಪಿ ಉತ್ಕೃಷ್ಟ ಸ್ಥಾನವನ್ನಲಂಕರಿಸಿದೆ. ಇವೆಲ್ಲಾ ಸಾಧೆನೆಗೆ ಇಲ್ಲಿನ ಜನತೆಯ ಸಾಧನೆ, ನಮ್ಮಲ್ಲಿನ ಹಳೆವಿದ್ಯಾಥಿರ್üಗಳ ಕೊಡುಗೆ ಕಾರಣವಾಗಿದೆ. ಇಂತಹ ಸರ್ವೋತ್ಕೃಷ್ಟ ಸೇವೆಗೈದ ಸೈಂಟ್ ಜೋನ್ ಇಗರ್ಜಿಯ ಶತಮಾನೋತ್ಸವ ಸಂಭ್ರಮ ನಾಡಿನ ಹಿರಿಮೆಯಾಗಿದೆ ಎಂದು ಸೈಂಟ್ ಜೋನ್ ಸುವಾರ್ತಾಬೋಧಕ ಇಗರ್ಜಿ ಪಾಂಗ್ಳಾ (ಶಂಕರಪುರ) ಉಡುಪಿ ಇದರ ಪ್ರಧಾನ ಧರ್ಮಗುರು ರೆ| ಫಾ| ಫರ್ಡಿನಂಡ್ ಗೊನ್ಸಾಲ್ವಿಸ್ ನುಡಿದರು.

ಸೈಂಟ್ ಜೋನ್ ದಿ ಇವ್ಹಾಂಜೆಲಿಸ್ಟ್ ಚರ್ಚ್ ಪಾಂಗ್ಳಾ ಇದರ ಶತಮಾನೋತ್ಸವ ಸಂಭ್ರಮದ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸ್ನೇಹಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಫಾ| ಗೊನ್ಸಾಲ್ವಿಸ್ ಮಾತನಾಡಿದರು.

ಸೈಂಟ್ ಲೂಯಿಸ್ ಇಗರ್ಜಿ ದಹಿಸರ್ ಇದರ ಪ್ರಧಾನ ಧರ್ಮಗುರು ರೆ| ಫಾ| ರೋನಿ ಫೆರ್ನಾಂಡಿಸ್ ಪಾಂಗ್ಳಾ, ರಾಯನ್ ಇಂಟರ್‍ನ್ಯಾಶನಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್‍ನ ಆಡಳಿತ ನಿರ್ದೇಶಕಿ ಮೇಡಂ ಡಾ| ಗ್ರೇಸ್ ಪಿಂಟೋ, ಪಾಂಗ್ಳಾ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ರೋಡ್ರಿಗಸ್, ಸದಸ್ಯ ಗಾಬ್ರಿಯಲ್ ಮಾರ್ಟಿಸ್, ಸೈಂಟ್ ಜೋನ್ ಕಾಥೋಲಿಕ್ ಅಸೋಸಿಯೇಶನ್ ಪಾಂಗ್ಳಾ ಮುಂಬಯಿ ಅಧ್ಯಕ್ಷ ರಫಾಯಲ್ ನೊರೋನ್ಹಾ, ಸಿಸಿಸಿಐ ಮಾಜಿ ಅಧ್ಯಕ್ಷ ಹೆನ್ರಿ ಲೊಬೋ, ಕಾರ್ಯಕ್ರಮದ ಸಹ ಸಂಘಟಕ ಜೋರ್ಜ್ ಕಾಸ್ತೆಲಿನೋ ವೇದಿಕೆಯಲ್ಲಿ ಆಸೀನರಾಗಿದ್ದರು.

ಪಾಂಗ್ಳಾದಲ್ಲಿ ಇಗರ್ಜಿ ನಿರ್ಮಾಣದಿಂದ ಸ್ಥಳಿಯ ಬೆಳವಣಿಗೆ ಮತ್ತು ಸುಧಾರಣೆ ಅನನ್ಯವಾದದ್ದು. ಇಲ್ಲಿನÀ ಇಗರ್ಜಿಯ ಸಮುದಾಯದ ಸಹಯೋಗ ಬಹುತೇಕರನ್ನು ಸುಶಿಕ್ಷಿತರನ್ನಾಗಿಸಿದ್ದು ಇಂದು ಜಾಗತಿಕವಾಗಿ ಪಸರಿಸಿದ ಪರಿಣಾಮ ಈ ನಾಡಿನ ಅಭಿವೃದ್ಧಿಗೆ ಕಾರಣವಾಗಿದೆ. ಇಂತಹ ಕೊಡುಗೆ ಅನುಪಮವಾದುದು. ಪಾಂಗ್ಳಾದ ಮಲ್ಲಿಗೆಯೂ ಇಂದು ಜಾಗತಿಕ ಮನ್ನಣೆ ಪಡೆಯುವಲ್ಲೂ ಇದು ಪೂರಕವಾಗಿದೆ ಎಂದು ಫಾ| ರೋನಿ ಫೆರ್ನಾಂಡಿಸ್ ತಿಳಿಸಿದರು.

ಕಾರ್ಯಕ್ರಮದ ಪ್ರಧಾನ ಆಯೋಜಕ, ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಮುಂಬಯಿ ಹಾಗೂ ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಸ್ವಾಗತಿಸಿ ಪಾಂಗ್ಳಾ ಇಗರ್ಜಿಯ ನೂರರ ಸೇವೆ ಮತ್ತು ಸ್ಥಾನೀಯ ಅಭಿವೃದ್ಧಿಯನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಕಾರ್ಯಾಧ್ಯಕ್ಷ ಜೋನ್ ಮಾಥ್ಯು, ಜೋನ್ ಡಿಸಿಲ್ವಾ, ವಿನ್ಸೆಂಟ್ ಮಥಾಯಸ್, ನ್ಯಾ| ಪಿಯೂಸ್ ವಾಸ್, ಲಾರೇನ್ಸ್ ಡಿಸೋಜಾ ಮುಲುಂಡ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಫೆಡ್ರಿಕ್ ಮಾರ್ಟಿಸ್, ಎಲ್ವಿನಾ ಡಿಸೋಜ, ಎಲೈಯ್ನಾ ಬುಥೆಲ್ಲೋ, ಡಾ| ಆಲ್ಡ್ರಿಡ್ಜ್ ಡಿಸೋಜಾ, ಆಲ್ಡ್ರಿಡ್ಜ್ ಡಿಸೋಜಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಜೋರ್ಜ್ ಕಾಸ್ತೆಲಿನೋ ಮತ್ತು ಹೆನ್ರಿ ಲೊಬೋ ಸಾಂದರ್ಭಿಕವಾಗಿ ಮಾತನಾಡಿ ಚರ್ಚ್‍ನ ಶತಮಾನದ ಸೇವೆ ಮತ್ತು ತಾವು ಬೆಳೆದುಬಂದ ಬಂದ ಬಗ್ಗೆ ತಿಳಿಸಿ ಶುಭಾರೈಸಿದರು.

ಅಬ್ರಹಾಂ ಕ್ಲೆಮೆಂಟ್ ಲೊಬೋ ಮತ್ತು ಡಾ| ರೂಬೆನ್ ಡಬ್ಲ್ಯೂ. ಬುಥೆಲ್ಲೋ ಕಾರ್ಯಕ್ರಮ ನಿರೂಪಿಸಿದರು. ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಮತ್ತಿತರ ಗಣ್ಯರು ಅತಿಥಿüಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿ ವಂದಿಸಿದರು.

 

 

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here