Thursday 8th, May 2025
canara news

ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷರಾಗಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಆಯ್ಕೆ

Published On : 27 Nov 2022   |  Reported By : Rons Bantwal


ಮುಂಬಯಿ, ನ.27: ಬೃಹನ್ಮುಂಬಯಿ ಉಪನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಾಸ್ಥ್ಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಗಳೊಂದಿಗೆ ಸೇವಾ ನಿರತ ಕೊಂಕಣಿ ಸಭಾ (ರಿ.) ಮುಲುಂಡ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಮುಲುಂಡ್‍ನಲ್ಲಿ ಸಭಾದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾಗಿದ್ದು ಸಂಸ್ಥೆಯ ನೂತನ ಅಧ್ಯಕ್ಷ ಆಗಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ.

   

Leo Fernandes                    Felix Barnes Barkuru.

ಉಪಾಧ್ಯಕ್ಷರಾಗಿ ಫೆಲಿಕ್ಸ್ ಬಾರ್ನ್ಸ್‍ಸ್ ಬಾರ್ಕೂರು, ಕಾರ್ಯದರ್ಶಿ ಆಗಿ ಪಾಸ್ಕಲ್ ಲೋಬೊ, ಕೋಶಾಧಿಕಾರಿ ಗಿಲ್ಬರ್ಟ್ ಫುರ್ಟಾಡೊ, ಜೊತೆ ಕಾರ್ಯದರ್ಶಿ ಫಿಡಿಲೇಸ್ ಫೆರ್ನಾಂಡಿಸ್, ಜೊತೆ ಕೋಶಾಧಿಕಾರಿ ಫ್ರಾನ್ಸಿಸ್ ಡಿಸೋಜಾ ಆಯ್ಕೆ ಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹೆನ್ರಿ ಡಿಸೋಜಾ, ಪಾಸ್ಕಲ್ ಫೆರ್ನಾಂಡಿಸ್, ಫೆÇ್ಲೀರಿನ್ ಡಿಮೆಲ್ಲೊ, ಜುಲಿಯಾ ಚೆನ್, ಸೈಮನ್ ಗೋಮ್ಸ್, ರಿಚ್ಚರ್ಡ್ ಲುವಿಸ್, ಬೆನೆಡಿಕ್ಟಾ ಡಿಸೋಜಾ, ರುಜಾಯ್ ಫೆರ್ನಾಂಡಿಸ್, ಮೆಲ್ವಿನ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here