Thursday 8th, May 2025
canara news

ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಆಯೋಜಿತ ಪ್ರತಿಭಾ ಸ್ಪರ್ಧೆ

Published On : 27 Nov 2022   |  Reported By : Rons Bantwal


ಪ್ರತಿಭೆಗಳ ಅನಾವರಣದಿಂದ ಸಂಸ್ಕೃತಿಯ ಜೀವಾಳ ಸಾಧ್ಯ : ಫಾ| ನೆಲ್ಸನ್ ಸಲ್ಡನಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ನ.27: ಪ್ರತಿಭೆಗಳ ಅನಾವರಣಗೊಂಡಗಲೇ ನಮ್ಮ ಮೂಲ ಸಂಸ್ಕೃತಿ ಜೀವಾಳವಾಗಿ ಉಳಿಯ ಬಲ್ಲದು. ಪ್ರಸ್ತುತ ಯುವಜನತೆ ಅತ್ಯಂತ ಪ್ರತಿಭಾ ಸಂಪನ್ನರಾಗಿದ್ದು ಇವರಿಗೆ ಅವಕಾಶಗಳ ಅಗತ್ಯವಿದೆ. ಪ್ರತಿಭಾನ್ವಿತರನ್ನು ಪೆÇ್ರೀತ್ಸಾಹಿಸಲು ಇಂತಹ ಇನ್ನಷ್ಟು ವೇದಿಕೆಗಳು ಸಿದ್ಧವಾಗಬೇಕು. ಈ ಮೂಲಕ ಸಹಜ ಸಾಮರ್ಥ್ಯವುಳ್ಳ ಪ್ರತಿಭೆಗಳ ಪ್ರದರ್ಶನ ಪ್ರಕಾಶಮಾನ ಗೊಳ್ಳಲಿ ಎಂದು ಮಲಾಡ್ ಪೂರ್ವದ ಸಂತ ಥೋಮಸ್ ಇಗರ್ಜಿ ಇದರ ಪ್ರಧಾನ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡನಾ ತಿಳಿಸಿದರು.

ಇಂದಿಲ್ಲಿ ಭಾನುವಾರ ಅಪರಾಹ್ನ ಕುರ್ಲಾ ಪಶ್ಚಿಮದ ಜೆರಿಮೆರಿಯಲ್ಲಿನ ಸಂತ ಜೂಡ್ ಇಗರ್ಜಿಯ ಸಭಾಗೃಹದಲ್ಲಿ ಕೊಂಕಣಿ ಸಭಾ (ರಿ.) ಮುಲುಂಡ್ ಸಹಯೋಗದಲ್ಲಿ ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಸಂಗೀತ-ನೃತ್ಯ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಫಾ| ಸಲ್ಡನಾ ಮಾತನಾಡಿದರು.

ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸಾರಥ್ಯದಲ್ಲಿ ಜರುಗಿದ ಕೊಂಕಣಿ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಜಾಗೃತಿ ಕೇಂದ್ರದ ಮುಖ್ಯಸ್ಥೆ ಭಗಿನಿ ಸಿ| ಸೀಮಾ ಥೋಮಸ್, ಹಿರಿಯ ಸಂಗೀತಕರ್ತರಾದ ಲಾರೇನ್ಸ್ ಸಲ್ಡಾನ್ಹಾ, ಕೆನ್ನಿ ಝಜ್ಹಾರ್ತ್, ಜೆರಿ ಡಿಸೋಜಾ ಬೊಂದೆಲ್ ಹಾಗೂ ಕೊಂಕಣ್ ಚಾರಿಟೇಬಲ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪೀಟರ್ ಪಿ.ರೆಬೇರೊ, ಕೋಶಾಧಿಕಾರಿ ಪ್ರಿತೇಶ್ ಕಾಸ್ತೆಲಿನೋ, ಜೊತೆ ಕೋಶಾಧಿಕಾರಿ ಸ್ಟೇಫನ್ ಲೋಬೊ, ಕೊಂಕಣಿ ಸಭಾ ಕಾರ್ಯದರ್ಶಿ ಪಾಸ್ಕಲ್ ಲೋಬೊ, ಕೋಶಾಧಿಕಾರಿ ಗಿಲ್ಬರ್ಟ್ ಫುರ್ಟಾಡೊ, ಜೊತೆ ಕಾರ್ಯದರ್ಶಿ ಫಿದೆಲೇಸ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದು ಪಾಲ್ಗೊಂಡ ಸ್ಪರ್ಧಿಗಳೆಲ್ಲರಿಗೂ ಶುಭಕೋರಿದರು.

ಕಿರಿಯರಿಂದ ಹಿರಿಯರ ವರೆಗೆ ವಿವಿಧ ವಿಭಾಗಗಳೊಂದಿಗೆ ಏಕವ್ಯಕ್ತಿ ಗಾಯನ, ದ್ವಂದ್ವ ಗಾಯನ, ಸಮೂಹ ಗಾಯನ, ಸಮೂಹ ನೃತ್ಯ, ಏಕವ್ಯಕ್ತಿ ನೃತ್ಯ ಇತ್ಯಾದಿಗಳ ಸ್ಪರ್ಧೆಯನ್ನು ಉಭಯ ಸಂಸ್ಥೆಗಳು ಏರ್ಪಾಡಿಸಿದ್ದವು.

ಕೊಂಕಣಿ ಸಭಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೆನ್ರಿ ಡಿಸೋಜಾ, ಪಾಸ್ಕಲ್ ಫೆರ್ನಾಂಡಿಸ್, ಫೆÇ್ಲೀರಿನ್ ಡಿಮೆಲ್ಲೊ, ಜುಲಿಯಾ ಚೆನ್, ಸೈಮನ್ ಗೋಮ್ಸ್, ಬೆನೆಡಿಕ್ಟಾ ಡಿಸೋಜಾ, ರುಜಾಯ್ ಫೆರ್ನಾಂಡಿಸ್, ಮೆಲ್ವಿನ್ ಫೆರ್ನಾಂಡಿಸ್, ಕೊಂಕಣ್ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರುಗಳಾದ ಬೆನಿಡಿಕ್ಟಾ ಬಿ.ರೆಬೆಲ್ಲೋ, ಡಾ| ಜೋಯ್ ಡಿಸೋಜಾ, ಗ್ರೆಗೋರಿ ಮೊನಿಸ್, ಮ್ಯಾನುವೆಲ್ ಪೆದ್ರು ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಪೀಟರ್ ರೆಬೇರೊ ಸ್ವಾಗತಿಸಿದರು. ಉಭಯ ಸಂಸ್ಥೆಗಳ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚವನ್ನು ನೀಡಿ ಗೌರವಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ರೆಜಿನಲ್ಡ್ ಸಾಂತುಮಯಾರ್, ಸಿಲ್ವಿಯಾ ಫೆರ್ನಾಡಿಂಸ್, ಫೆÇ್ಲೀರಾ ಡಿಸೋಜಾ ಕಲ್ಮಾಡಿ (ಜೆರಿಮೆರಿ), ಫೆÇ್ಲೀರಿನ್ ಡಿಮೆಲ್ಲೋ ಇವರನ್ನು ಗೌರವಿಸಲಾಯಿತು. ಲಿಯೋ ಫೆರ್ನಾಂಡಿಸ್ ಜೆರಿಮೆರಿ ಕಾರ್ಯಕ್ರಮ ನಿರೂಪಿಸಿದರು. ಸ್ಟೇಫನ್ ಲೋಬೊ ಕೃತಜ್ಞತೆ ಸಮರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here