Thursday 8th, May 2025
canara news

ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯಿಂದ ಆನಂದಿಸಲ್ಪಟ್ಟ ವಿಹಾರಕೂಟ

Published On : 03 Dec 2022   |  Reported By : Rons Bantwal


ಮುಂಬಯಿ, ಡಿ.03: ನಾಸಿಕ್ ಬಿಲ್ಲವರ ಸೇವಾ ಸಂಸ್ಥೆಯ ಸದಸ್ಯರು ಇತ್ತೀಚೆಗೆ (ನ.27) ನಾಸಿಕ್‍ನ ಗಂಗಾಪುರ ಅಣೆಕಟ್ಟಿನ ಬಳಿಯಿರುವ ಪಿಂಪಲಗಾಂವ್ ಗರುಡೇಶ್ವರದ ಅರುಣೋದಯ ಆಗ್ರೋ ಫಾರ್ಮ್‍ಗೆ ವನವಿಹಾರಕ್ಕೆ ತೆರಳಿದ್ದÀರು. ಹೆಚ್ಚಿನ ಸಂಖ್ಯೆಯ ಸದಸ್ಯರು ಮತ್ತು ಅವರ ಕುಟುಂಬಗಳು ವಿಹಾರದಲ್ಲಿ ಭಾಗವಹಿಸಿದ್ದರು.

ಗಂಗಾಪುರ ಅಣೆಕಟ್ಟಿನ ಜಲ, ಹಚ್ಚ ಹಸಿರಿನ ಹೊರಾಂಗಣಗಳು, ವಿವಿಧ ಮರಗಳು ಮತ್ತು ಪೆÇದೆಗಳಿಂದ ಆವೃತವಾದ ಸ್ಥಳ ಮತ್ತು ಸೈಟ್ ಅತ್ಯುತ್ತಮವಾಗಿತ್ತು. ಬೆಳ್ಳಂಬೆಳಗ್ಗೆ ಬೆಳ್ಳಕ್ಕಿ, ಸನ್ ಬರ್ಡ್, ಕಪ್ಪು ಡ್ರೊಂಗೊ, ಉದ್ದ ಬಾಲದ ಶಿರ್ಕೆ, ನೇರಳೆ-ರಂಪ್ಡ್ ಸನ್ ಬರ್ಡ್ ಇತ್ಯಾದಿ ವಿವಿಧ ಪಕ್ಷಿಗಳನ್ನು ಕಂಡು ಮಧ್ಯಾಹ್ನದ ವರೆಗೆ ವಿವಿಧ ಚಟುವಟಿಕೆಗಳನ್ನು ಆನಂದಿಸಿದರು.

ದಾಮೋದರ ಪೂಜಾರಿ ಅವರು ಸ್ವಾಗತಿಸಿ ಅನುಸರಿಸಬೇಕಾದ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿದರು. ನಂತರ ಕುದುರೆ ಸವಾರಿ, ಎತ್ತಿನ ಗಾಡಿಸವಾರಿ, ಟ್ರ್ಯಾಕ್ಟರ್ ಸವಾರಿ, ಕ್ರಿಕೆಟ್, ವಾಲಿಬಾಲ್ ಇತ್ಯಾದಿಗಳೊಂದಿಗೆ ಆನಂದಿಸಿದರು. ಶಿವಗಂಗಾ ಕ್ಯಾಟರರ್ಸ್‍ನವರ ಆತಿಥ್ಯದಲ್ಲಿ ವಿಹಾರವು ಮತ್ತಷ್ಟು ಮುದ ನೀಡಿತು. ಊಟದ ನಂತರ ಸದಸ್ಯರು ಮಳೆನೃತ್ಯ, ಸಂಗೀತ ಕುರ್ಚಿ, ಹೌಸಿಹೌಸಿ ಇತ್ಯಾದಿ ಚಟುವಟಿಕೆಗಳಿಂದ ಆನಂದಿಸಿದರು.

ಗಂಗಾಧರ ಕೆ.ಅಮೀನ್, ದಾಮೋದರ ಪೂಜಾರಿ, ïರಘುನಾಥ ಅಮೀನ್,ಬಾಲಚಂದ್ರ ಕೋಟ್ಯಾನ್, ಮೋಹನ್ ಕರ್ಕೇರ, ರಾಮಕೃಷ್ಣ ಪೂಜಾರಿ, ಭಾಸ್ಕರ್ ಪೂಜಾರಿ, ದೀಪಕ್ ಸಾಲಿಯಾನ್, ನಾಗೇಶ್ ಪೂಜಾರಿ, ಭಾಸ್ಕರ್ ಸಾಲಿಯಾನ್, ಲಕ್ಷ ್ಮಣ ಅಮೀನ್, ಪ್ರಮೀಳಾ ಅಮೀನ್, ಜಯಶ್ರೀ ಕರ್ಕೇರ, ಉಮೇಶ್ ಪೂಜಾರಿ, ಸುರೇಶ್ ಪೂಜಾರಿ, ಪ್ರವೇಶ ಅಮೀನ್ ಮತ್ತಿತರರು ಪಿಕ್ನಿಕ್ ಯಶಸ್ಸಿಗೆ ಸಹಕರಿಸಿದರು.

ದಾಮೋದರ ಪೂಜಾರಿ ಸ್ವಾಗತಿಸಿ ಅನುಸರಿಸಬೇಕಾದ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿ ಕೊನೆಯಲ್ಲಿ ವಿಹಾರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here