Thursday 25th, April 2024
canara news

ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ

Published On : 04 Dec 2022   |  Reported By : Rons Bantwal


ಶೈಕ್ಷಣಿಕ ಸಂಸ್ಥೆಗಳಿಗೆ ಹಳೆವಿದ್ಯಾಥಿರ್üಗಳೇ ಶಕ್ತಿ : ಡಾ| ವಿನ್ಸೆಂಟ್ ಆಳ್ವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.04: ಶೈಕ್ಷಣಿಕ ಸಂಸ್ಥೆಗಳಿಗೆ ಹಳೆ ವಿದ್ಯಾಥಿರ್üಗಳು ತಾಯಿಬೇರು ಇದ್ದಂತೆ. ಹಳೆಬೇರು ಹೊಸ ಚಿಗುರುಗಳು ಒಂದಾಗಿರುವಂತೆ ಮರವೇ ಫಲಪ್ರದವಾಗಿರುವಂತೆ ಹಳೆ ವಿದ್ಯಾಥಿರ್üಗಳು ಪ್ರಸಕ್ತ ವಿದ್ಯಾಥಿರ್üಗಳಿಗೆ ಪ್ರೇರೆಪಿಸಿದಾಗ ಒಟ್ಟಾರೆ ಸಂಸ್ಥೆಯು ಬೆಳಗುತ್ತದೆ. ಇವಕ್ಕೆಲ್ಲವೂ ಪೂರಕವೆಂಬಂತೆ ಮಿಲಾಗ್ರಿಸ್ ಕಾಲೇಜ್‍ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಹಳೆ ವಿದ್ಯಾಥಿರ್sಗಳ ಸಹಮಿಲನ ನಡೆಯುತ್ತಿರುವುದು ಸಂತೋಷವಾಗುತ್ತಿದೆ ಎಂದು ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಇದರ ಪ್ರಾಂಶುಪಾಲ ಡಾ| ವಿನ್ಸೆಂಟ್ ಆಳ್ವ ನುಡಿದರು.

ಕರ್ನಾಟಕ ಕರಾವಳಿಯ ಉಡುಪಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮಿಲಾಗ್ರಿಸ್ ಕಾಲೇಜ್ ಇದರ ಹಳೆ ವಿದ್ಯಾಥಿರ್ü ಸಂಘವು ಇಂದಿಲ್ಲಿ ಆದಿತ್ಯವಾರ ಥಾಣೆ ಘೋಡ್‍ಬಂದರ್ ರೋಡ್‍ನ ವಾಘ್‍ಬಿಲ್ ಇಲ್ಲಿನ ಶ್ರೀ ಸಾಯಿ ಆನೇಕ್ಸ್ ಬಾಂಕ್ವೇಟ್ ಹಾಲ್‍ನಲ್ಲಿ ಆಯೋಜಿಸಿದ್ದ ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಹಳೆ ವಿದ್ಯಾಥಿರ್sಗಳ ಸ್ನೇಹಮಿಲನ (ಮಿಲಾಗ್ರಿಸ್ ಅಲ್ಯೂಮ್ನಿ ಮೀಟ್) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸ್ನೇಹಕೂಟ ಉದ್ಘಾಟಿಸಿ ಡಾ| ವಿನ್ಸೆಂಟ್ ಆಳ್ವ ಮಾತನಾಡಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಎಂಸಿಕೆ ಹಳೆಯ ವಿದ್ಯಾಥಿರ್üಗಳು ನಿಜವಾಗಿಯೂ ಧನ್ಯರು. ಇದೊಂದು ಹಿಂದೆಂದೂ ನಡೆಯದ ಚರಿತ್ರೆಯೇ ಸರಿ. ಸುಮಾರು 56 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿ ಕಾಲೇಜ್‍ನ ಪ್ರಸಕ್ತ ಪರಿಸ್ಥಿತಿ ವಿವರಿಸಿ ಹಳೆ ವಿದ್ಯಾಥಿರ್üಗಳಾದ ಜಯಪ್ರಕಾಶ ಶೆಟ್ಟಿ, ಸತ್ಯಜಿತ್ ಶೆಟ್ಟಿ ಮತ್ತು ರಮೇಶ ಶೆಟ್ಟಿ ಅವರು ಕೂಟದ ಆಯೋಜನೆಯಲ್ಲಿ ಮುಂದಾಳತ್ವ ವಹಿಸಿದವರಿಗೆ ಅಭಿವಂದಿಸಿದರು.

ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ್ ಅಲ್ಯೂಮ್ನಿ ಅಸೋಸಿಯೇಶನ್ (ರಿ.) ಅಧ್ಯಕ್ಷ ಶೇಖರ ಗುಜ್ಜರಬೆಟ್ಟು ಅಧ್ಯಕ್ಷತೆಯಲ್ಲಿ ಜರುಗಿದÀ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜ್‍ನ ನಿವೃತ್ತ ಪ್ರಾಧ್ಯಾಪಾರಾದ ಪೆÇ್ರ| ಹಿಲ್ಡಾ ರೋಡ್ರಿಗಸ್ ಮತ್ತು ಪೆÇ್ರ| ಮೇರಿ ಮಾಮ್ಮೆನ್, ಕಾರ್ಯಕ್ರಮದ ಸಂಘಟಕರೂ, ಜಲಜಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಕ ಜಯಪ್ರಕಾಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ವಾಲಿಬಾಲ್ ತಂಡದ ಮಾಜಿ ನಾಯಕ ಸತ್ಯಜಿತ್ ಶೆಟ್ಟಿ ಅಂಬಲಪಾಡಿ, ರಮೇಶ್ ಶೆಟ್ಟಿ ಪೆರ್ಡೂರು, ಮಹೇಶ್ ಶೆಟ್ಟಿ ಕಲ್ಯಾಣ್ಪುರ ವೇದಿಕೆಯನ್ನಲಂಕರಿಸಿ ಮಾಜಿ ಪ್ರಾಚಾರ್ಯರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ನಮ್ಮಲ್ಲಿನ ಹೆಚ್ಚಿನವರು ಹಳ್ಳಿಯ ಹಿನ್ನೆಲೆವುಳ್ಳವರು. ಗುರುಶಿಷ್ಯರಿಗೆ ಬಹಳ ಮುಖ್ಯವಾದದ್ದು ಹೃದಯವೇ ಹೊರತು ಮೆದುಳುವಲ್ಲ. ನಮ್ಮ ವೃತ್ತಿಜೀವನವನ್ನು ನಿರ್ಮಿಸುವ ಕಾಲೇಜುನ್ನು ನಾವು ಮರೆಯಬಾರದು. ಕಾಲೇಜು ಅಥವಾ ಶಾಲೆಗೆ ಅಗತ್ಯವಿದ್ದಾಗ ನಾವು ಆಥಿರ್sಕವಾಗಿ ಮಾತ್ರವಲ್ಲದೆ ನೈತಿಕವಾಗಿಯೂ ಸಹಾಯ ಮಾಡಲು ಪ್ರಯತ್ನಿಸಬೇಕು. ನಿಸ್ತೇಜ ಮಕ್ಕಳನ್ನು ಮೇಧಾವಿಗಳನ್ನಾಗಿಸುವುದೇ ಶಿಕ್ಷಕರ ಧ್ಯೇಯವಾದಾಗ ಇಂತಹ ಶಿಷ್ಯವರ್ಗವನ್ನು ಪಡೆಯಲು ಸಾಧ್ಯವಾಗುವುದು. ವಿದ್ಯಾಥಿರ್üಗಳ ಸಫಲತೆಯೇ ಗುರುವರ್ಯರ ಸಾರ್ಥಕತೆ ಆಗಿದೆ. ವಿದ್ಯಾಥಿರ್üಗಳ ಸೌಖ್ಯವೇ ಗುರುಗಳ ಹೂಡಿಕೆಯಾಗಿದೆ. ಇಂತಹ ವಿದ್ಯಾಥಿರ್üಗಳನ್ನು ಪಡೆದ ನಾನು ಏಳು ಜನ್ಮಗಳಲ್ಲೂ ಶಿಕ್ಷಕಿಯಾಗಿಯೇ ಹಟ್ಟುಪಡೆಯಲು ಬಯಸುವೆ ಎಂದÀು ಪೆÇ್ರ| ಹಿಲ್ಡಾ ತಿಳಿಸಿದರು.

ಪೆÇ್ರ| ಮೇರಿ ಮಾತನಾಡಿ ಭಾಷಾ ಬಾಂಧವ್ಯವೂ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಗುರುಶಿಷ್ಯರೊಳಗಿನ ನಡೆನುಡಿಗಳು ನನ್ನಲ್ಲಿ ಇಂದಿಗೂ ಚಿರಾಯುವಾಗಿದ್ದು ಒಳಿತು ಕೆಡುಕುಗಳಿನ ಹಳೆ ನೆನಪುಗಳೇ ಬಾಳನ್ನು ಸುಂದರಗೊಳಿಸುತ್ತಿವೆ. ಮಕ್ಕಳಲ್ಲಿ ಬದಲಾವಣೆ ತರುವುದೇ ಶಿಕ್ಷಕರ ಉದ್ದೇಶವಾದಾಗ ಬದಲಾದ ಸನ್ನಿವೇಶಗಳು ಇಂತಹ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಆ ದಿನಗಳಲ್ಲಿನ ಕಲಿಕೆಯಲ್ಲಿ ಮುಂದಿದ್ದ ಕೆಲವರು ಇಂದು ಗೃಹಿಣಿಗಳಾಗಿದ್ದರೆ ದಡ್ಡರಾಗಿದ್ದು ಪೆÇೀಕ್ರಿ ಎಂದೆಣಿಸಿದವರು ಸಾಧಕರಾಗಿ ಮೆರೆಯುತ್ತಿರುವುದು ನಮ್ಮನ್ನು ನಾಚುವಂತೆ ಮಾಡುತ್ತಿದ್ದರೂ ಇವರೆಲ್ಲರೂ ನಮ್ಮವರೇ ಅನ್ನೋದು ಸಂತಸ ತರುತ್ತಿದೆ ಎಂದರು.

ಜಯಪ್ರಕಾಶ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ತನ್ನ ಜೀವನದಲ್ಲಿ ಆದಂತಹ ಬದಲಾವಣೆ ಹಾಗೂ ಪಡೆದ ಯಶಸ್ಸಿನ ಹಿಂದೆ ಮಿಲಾಗ್ರಿಸ್ ಮಾತೆಯ ಆಶಿರ್ವಾದವಿದೆ. ಇನ್ನು ಮುಂದೆಯೂ ನಾವೂ ಹೀಗೆಯೇ ಜೊತೆ ಸೇರಿ ಮಿಲಾಗ್ರಿಸ್ ಕಾಲೇಜ್‍ನ ಕೀರ್ತಿಯನ್ನು ಬೆಳಗಿಸಬೇಕಾಗಿದೆ ಎಂದು ಕಲಿತ ಕಾಲೇಜ್‍ನ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ನೆಲೆಸಿರುವ ಮಿಲಾಗ್ರಿಸ್ ಕಾಲೇಜ್‍ನ ಹಳೆ ವಿದ್ಯಾಥಿರ್sಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಹೆಮ್ಮೆಯೆನಿಸುತ್ತದೆ. ಆ ಮೂಲಕ ಮಿಲಾಗ್ರಿಸ್ ಕಾಲೇಜ್‍ನ ಹಳೆ ವಿದ್ಯಾಥಿರ್s ಸಂಘ ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಹೊರದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕಾಲೇಜ್‍ಗೆ ಈ ತನಕ ಒಂದುವರೆ ಕೋಟಿ ದೇಣಿಗೆಯನ್ನು ನೀಡಿದ್ದಾರೆ. ಬರುವ ಡಿ.22ರಂದು ಜರಗಲಿರುವ ಎಂಪಿಎಲ್ ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟದಲ್ಲೂ ಮುಂಬಯಿವಾಸಿ ಹಳೆ ವಿದ್ಯಾಥಿರ್sಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ರೀತಿಯ ಮಹಾರಾಷ್ಟ್ರ ಹಳೆ ವಿದ್ಯಾಥಿರ್sಗಳ ಸಮ್ಮಿಲನ ಸತತ ನಡೆಯಬೇಕೆಂದು ಶುಭಹಾರೈಸಿದರು ಎಂದÀು ಅಧ್ಯಕ್ಷೀಯ ಭಾಷ್ಣವನ್ನುದ್ದೇಶಿಸಿ ಶೇಖರ ಗುಜ್ಜರಬೆಟ್ಟು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾಥಿರ್ü ಸಂಘದ ಉಪಾಧ್ಯಕ್ಷರುಗಳಾದ ನವೀನ್ ಕುಮಾರ್, ಲವಿನಾ ಡೆಸಾ, ಜೊತೆ ಕಾರ್ಯದರ್ಶಿ ಜೋಯ್ಸ್ ಪಿಕಾರ್ಡೊ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿಧರ್ ಸಾಲ್ಯಾನ್ ನೇಜಾರ್ (ಅಧ್ಯಕ್ಷರು, ಪರ್ಸೀನ್ ಓನರ್ಸ್ ಅಸೋಸಿಯೇಶನ್), ವಾಸುದೇವ ಕೋಟ್ಯಾನ್, ಸತೀಶ್ ಕಲ್ಯಾಣ್ಪುರ, ಪ್ರಕಾಶ್ ಕುಮಾರ್, ಅಲ್ಲದೆ ಯಶೋಧಾ ಎಸ್.ಶೆಟ್ಟಿ, ಸದಾನಂದ ಆಚಾರ್ಯ ಕಲ್ಯಾಣ್ಪುರ, ಸಿಯಾನ್ ಡಿಸೋಜಾ ಸೇರಿದಂತೆ ಮಹಾರಾಷ್ಟ್ರದದ್ಯಾಂತದ ಸುಮಾರು ನೂರಾರು ಹಳೆ ವಿದ್ಯಾಥಿರ್sಗಳು ಸೇರಿದಂತೆ ಉಡುಪಿ ಕಲ್ಯಾಣಪುರ ಸ್ಥಳೀಯ ಸಂಸ್ಥೆಗಳಿಂದಲೂ ಹದಿನಾರು ಹಳೆಯ ವಿದ್ಯಾಥಿರ್üಗಳು ಭಾಗವಹಿಸಿದ್ದರು.

ಪ್ರಾಂಶುಪಾಲ ಡಾ| ವಿನ್ಸೆಂಟ್ ಆಳ್ವ, ಸಂಘಟಕರಾದ ಜಯಪ್ರಕಾಶ್ ಶೆಟ್ಟಿ ಮತ್ತು ಸತ್ಯಜಿತ್ ಶೆಟ್ಟಿ ಅಂಬಲಪಾಡಿ ಇವರನ್ನೂ ಹಳೆ ವಿದ್ಯಾಥಿರ್ü ಸಂಘದ ಪರವಾಗಿ ನಿವೃತ್ತ ಪ್ರಾಚಾರ್ಯರು ಸನ್ಮಾನಿಸಿದರು. ಡಾ| ವಿನ್ಸೆಂಟ್ ಆಳ್ವ ಅತಿಥಿüಗಳನ್ನು ಪರಿಚಯಿಸಿ ಅತಿಥಿüಗಳು ಮತ್ತು ಸಂಘಟಕರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಹಳೆ ವಿದ್ಯಾಥಿರ್ü ಸಂಘದ ಮಾಜಿ ಅಧ್ಯಕ್ಷ ಆಲೆನ್ ಲೆವಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸತ್ಯಜಿತ್ ಶೆಟ್ಟಿ ವಂದನಾರ್ಪಣೆಗೈದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here