Sunday 29th, January 2023
canara news

ಘಾಟ್ಕೋಪರ್ ಪಿಜ್ಜಾ ರೆಸ್ಟೊರೆಂಟ್‌ನಲ್ಲಿ ಬೆಂಕಿ; ಒಬ್ಬರು ಮೃತ್ಯು ಹಾಗೂ ಇಬ್ಬರಿಗೆ ಗಾಯ

Published On : 18 Dec 2022   |  Reported By : Rons Bantwal


ಮುಂಬಯಿ (ಆರ್‌ಬಿಐ), ಡಿ.17: ಉಪನಗರ ಘಾಟ್ಕೋಪರ್ ಇಲ್ಲಿನ ಪರೇಖ್‌ ಆಸ್ಪತ್ರೆ ಬಳಿಯಲ್ಲಿದ್ದ ಜುನೋಸ್‌ ಪಿಜ್ಜಾ ರೆಸ್ಟೊರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ, ಹಾಗೂ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ಮೃತವ್ಯಕ್ತಿಯನ್ನು ಖುರ್ಷಿ ದೇಧಿಯಾ ಎಂದು ಗುರುತಿಸಲಾಗಿದೆ.

ಮುಂಬಯಿನ ಘಾಟ್ಕೋಪರ್‌ ಪ್ರದೇಶದ ಪರೇಖ್‌ ಆಸ್ಪತ್ರೆ ಬಳಿಯಲ್ಲಿರುವ ರೆಸ್ಟೊರೆಂಟ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಬೆಂಕಿಯನ್ನು ನಿಯಂತ್ರಿಸಲು ಎಂಟು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.

ಬೃಹತ್‌ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕಾರಿಗಳ ಪ್ರಕಾರ, ಬೆಂಕಿಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಖುರ್ಷಿ ದೇಧಿಯಾ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಇದರ ಮಧ್ಯೆ ಬೆಂಕಿ ಅವಘಡದಿಂದಾಗಿ ಹೊಗೆಯ ಪ್ರಮಾಣ ಹೆಚ್ಚಾಗಿದ್ದು ಹಲವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಉಸಿರಾಟದ ತೊಂದರೆಗೆ ಒಳಗಾದ 22 ರೋಗಿಗಳನ್ನು ಪರೇಖ್‌ ಆಸ್ಪತ್ರೆಯಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆದರೆ ಬೆಂಕಿ ಅವಘಡ ಸಂಭವಿಸಲು ನಿಖರ ಕಾರಣಗಳು ತಿಳಿದುಬಂದಿಲ್ಲ. ಪೊಲೀಸ್‌ ಅಧಿಕಾರಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದು, ನಂತರದಲ್ಲಿ ಬೆಂಕಿ ಅವಘಡಕ್ಕೆ ಕಾರಣಗಳೇನು ಎಂಬುದು ತಿಳಿದು ಬರಲಿದೆ.
More News

ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಮಾಜಮುಖಿ ಕಾರ್ಯಗಳಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ : ಇಬ್ರಾಹಿಂ ಕಲ್ಲೂರು
ಸಮಾಜಮುಖಿ ಕಾರ್ಯಗಳಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ : ಇಬ್ರಾಹಿಂ ಕಲ್ಲೂರು
ಹೋಪ್ ಫೌಂಡೇಶನ್ ಆಚರಿಸಿದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ
ಹೋಪ್ ಫೌಂಡೇಶನ್ ಆಚರಿಸಿದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ

Comment Here