Thursday 8th, May 2025
canara news

ಮೂಡಬಿದಿರೆಯಲ್ಲಿ ತಾಡಾ ಓಲೆ ಸಂರಕ್ಷಣಾ ರಾಷ್ಟ್ರೀಯ ಕಾರ್ಯಾಗಾರ

Published On : 17 Dec 2022   |  Reported By : Rons Bantwal


ತಾಡಾ ಓಲೆ ಕಾಪಾಡುವಿಕೆಯಿಂದ ಗ್ರಂಥ ಸಂರಕ್ಷಣೆ: ಸ್ವಸ್ತಿಶ್ರೀ ಭಟ್ಟಾರಕಶ್ರೀ

ಮುಂಬಯಿ (ಆರ್‍ಬಿಐ), ಡಿ.17: ಸುಮಾರು ನಾಲ್ಕು ಸಾವಿರ ತಾಡಾ ಓಲೆಗಳ ವೈವಿಧ್ಯಮಯ ವಿಷಯ ಗಳ ಸಂಗ್ರಹ ಇರುವ ಅಪರೂಪದ ಗ್ರಂಥಗಳ ಡಿಜಿಟಲಿ ಕರಣ ಶೀಘ್ರ ನಡೆಸಲು ಯೋಜನೆ ರೂಪಿಸಲಾಗಿದೆ ಸಂರಕ್ಷಣ ಕಾರ್ಯಾಗಾರದ ಪೂರ್ಣ ಲಾಭ ಭಾಗವಹಿಸಿದ ಸರ್ವರಿಗೂ ಸಿಗಲಿ ಈ ಕಾರ್ಯಗಾರಕ್ಕೆ ಸಹಕರಿಸಿದ ಚಿತ್ರಕಲಾ ಪರಿಷತ್ ಕಳೆದ 12 ವರ್ಷದಿಂದ ನಮ್ಮ ಗ್ರಂಥ ಸಂರಕ್ಷಣೆ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದು ಅಭಿನಂದನಿಯ ಎಂದು ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ತಿಳಿಸಿದರು.

ಕಳೆದ ಗುರುವಾರ ಮೂಡುಬಿದಿರೆ ಇಲ್ಲಿನ ಶ್ರೀ ಜೈನಮಠದ ರಮಾರಾಣಿ ನೂತನ ಸಭಾ ಭವನದಲ್ಲಿ ಏಳು ದಿನಗಳ ತಾಡ ಓಲೆ ಸಂರಕ್ಷಣಾ ಕಾರ್ಯಗಾರ ಉದ್ಘಾಟಿಸಿ ಆಶೀರ್ವಚನಗೈದು ಸ್ವಸ್ತಿಶ್ರೀ ಚಾರುಕೀರ್ತಿ ಮಾತನಾಡಿದರು.

ತಾಡಾ ಓಲೆ ಸಂರಕ್ಷಣೆಯಿಂದ ನಮ್ಮ ಪ್ರಾಚೀನ ತಾಡ ಪತ್ರ ಓಲೆ ಗರಿ ರಕ್ಷಣೆ ಆಗುತ್ತೆ ನಮ್ಮ ಪ್ರಾಚೀನ ಧರ್ಮ ಇತಿಹಾಸ ಸಾಹಿತ್ಯ ಸಂಸ್ಕೃತಿ ಯ ರಕ್ಷಣೆ ಮಾಡಿದ ಪುಣ್ಯ ಸಿಗುದು ಪ್ರಾಚೀನ ಉತ್ತಮ ವಿಷಯಗಳಿಂದ ಕೂಡಿದ ಓಲೆ ಗರಿ ದೇಶದ ಸಂಪತ್ತು ಇದನ್ನು ಜತನ ದಿಂದ ಕಾಪಾಡುವ ಜವಾಬ್ದಾರಿ ಎಲ್ಲರದ್ದು ಎಂದÀು ತಾಡಾ ಓಲೆ ಸಂರಕ್ಷಣಾ ರಾಷ್ಟ್ರೀಯ ಅಧ್ಯಯನ ಕಾರ್ಯಾಗಾರದ ಪ್ರಮುಖ ಸಂಪನ್ಮೂಲ ವ್ಯಕ್ತಿ, ಬೆಂಗಳೂರು ಚಿತ್ರ ಕಲಾ ಪರಿಷತ್ ನಿರ್ದೇಶಕಿ ಮೃಣಾಲಿನಿ ತಿಳಿಸಿದರು.

ಚಿತ್ರ ಕಲಾ ಪರಿಷತ್‍ನ ಹಿರಿಯ ಓಲೆ ಸಂರಕ್ಷಣೆ ತಜ್ಞ ಭಾನು ಪ್ರಕಾಶ್ ಬೆಂಗಳೂರು, ಡಾ| ಉಮಾನಾಥ್ ಶೆಣೈ, ವಿಕಾಸ ಸೌಧದ ಶೇಖರ್ ಜಾಯಿಂಟ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್ ಉಪಸ್ಥಿತರಿದ್ದು ಶ್ರೀಗಳು ಮೃಣಾಲಿನಿ ಅವರನ್ನು ಗೌರವಿಸಿ ಹರಸಿದರು.

ಶ್ರೀ ದಿಗಂಬರ ಜೈನ ಮಠ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ. ) ಜಂಟಿ ಸಹಕಾರದಿಂದ ರಮಾ ರಾಣಿ ಶೋದ ಸಂಸ್ಥಾನದಲ್ಲಿ ಸುಮಾರು 51ಜನ ಅಭ್ಯಥಿರ್üಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದು, ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ಮೂಡು ಬಿದಿರೆ ಪ್ರಾಂಶುಪಾಲೆ ಸೌಮ್ಯ ಶ್ರೀ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here