Saturday 27th, April 2024
canara news

ಬೃಹನ್ಮುಂಬಯಿಯಲ್ಲಿ ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಉದ್ಘಾಟನೆ-ಪ್ರಶಸ್ತಿ ಪ್ರದಾನ

Published On : 25 Dec 2022   |  Reported By : Rons Bantwal


ಅಭದ್ರತೆ ಸೃಜನಶೀಲತೆಯ ಹೆಬ್ಬಾಲು ಆಗಿದೆ : ಕಾಳೇಗೌಡ ನಾಗವಾರ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.24: ಹಲವಾರು ಭಾಷೆಗಳನ್ನು ಕಲಿತು ಬಹಳ ಕಷ್ಟದ ದಿನಗಳಲ್ಲೂ ಮನಪೂರ್ವಕ ಹಾಗೂ ಪ್ರೀತಿಪೂರ್ವಕವಾಗಿ ಗ್ರಂಥದ ರಚನೆ ಮಾಡುವಲ್ಲಿ ಶ್ರಮಿಸಿದ ಡಾ| ಕಾರ್ನಾಡ್ ಅವರ ಜೀವನಶೈಲಿ ಎಲ್ಲರಿಗೂ ಆದರ್ಶವಾದುದು. ಅಭದ್ರತೆ ಸೃಜನಶೀಲತೆಯ ಹೆಬ್ಬಾಲು ಆಗಿದೆ ಅನ್ನುವುದನ್ನು ಡಾ| ಕಾರ್ನಾಡ್ ತೋರಿಸಿಕೊಟ್ಟಿದ್ದಾರೆ. ಅಪರಿಮಿತವಾದ ಪ್ರೇಮ, ಸೃಜನಶೀಲತೆಯಿಂದ ಇವರು ಸಾವಿರಾರು ಮಂದಿಯ ಸ್ನೇಹವನ್ನು ಬೆಳೆಸಿ ಕೊಂಡಿದ್ದು ಎಂದೂ ಸಂಪತ್ತುವಿನ ಹಿಂದೆ ಓಡಾಡದೆ ಅಪತ್ತುಗಳನ್ನೆಲ್ಲಾ ಎದುರಿಸಿ ಬರವಣಿಗೆಯಲೇ ಜೀವನ ಕಟ್ಟಿಕೊಂಡವರು. ನೆಂಟಸ್ತಿಕೆಯ ಮೂಲಕವೇ ಬಹುದೊಡ್ಡ ಬಂಧು ಬಳಗವನ್ನು ಪಡೆದÀು ಯಶಸ್ಸು ಗಳಿಸಿದ ಸಾಧಕರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಾವುಗಳು ಪ್ರಜಾಸತ್ತಾತ್ಮಕವಾಗಿರಬೇಕು ಅನ್ನುವುದನ್ನು ತೋರಿಸಿದ ಮತ್ತು ನಿಜವಾದ ಕಾಳಜಿಯಿಂದ ಸಾಹಿತ್ಯವನ್ನು ಕೃತಿರೂಪವಾಗಿ ಬೆಳೆಸುವಲ್ಲಿ ಕಾರ್ನಾಡ್ ಪಾತ್ರ ಮಹತ್ತರವಾದುದು ಎಂದು ಹಿರಿಯ ಜಾನಪದ ತಜ್ಞ , ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ಕಾಳೇಗೌಡ ನಾಗವಾರ ತಿಳಿಸಿದರು.

ಇಂದಿಲ್ಲಿ ಶನಿವಾರ ಮಧ್ಯಾಹ್ನ ಅಂಧೇರಿ ಪೂರ್ವದ ಎಂಐಡಿಸಿ ಇಲ್ಲಿನ ತುಂಗಾ ಪ್ಯಾರಾಡೈಸ್ ಹೊಟೇಲು ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಮುಂಬಯಿಯಲ್ಲಿನ ಪ್ರಾಧ್ಯಾಪಕ, ಸಾಹಿತಿ, ಹಿರಿಯ ಸಂಘಟಕ ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ, ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ, ಗೌರವಾರ್ಪಣೆ ಕಾರ್ಯಕ್ರಮದಲ್ಲಿ `ವಿಶ್ವನಾಥ ಕಾರ್ನಾಡ್ ಪ್ರಶಸ್ತಿ' ಪ್ರದಾನಿಸಿ ಡಾ| ಕಾಳೇಗೌಡ ನುಡಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಕಾರ್ನಾಡ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಸ್ಥಾಪಕ ಕಾರ್ಯಾಧಕ್ಷ ವರದ ಉಳ್ಳಾಲ್ ಅವರು ಪ್ರತಿಷ್ಠಾನದ ಬ್ಯಾನರ್ ಅನಾವರಣಗೊಳಿಸಿ ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಉದ್ಘಾಟಿಸಿದರು. ಭಾರತ್ ಬ್ಯಾಂಕ್‍ನ ಕಾರ್ಯಧ್ಯಕ್ಷ ಶಿವಾಜಿ ಉಪ್ಪೂರು ಮುಖ್ಯ ಅತಿಥಿüಯಾಗಿದ್ದು ಡಾ| ವಿಶ್ವನಾಥ ಕಾರ್ನಾಡ್ ರಚಿತ ಪ್ರವಾಸಿಯ ಒಡಲು ಕೃತಿ ಬಿಡುಗಡೆ ಮಾಡಿದರು.

ಅಪಾರ ತೊಂದರೆ, ಅಭದ್ರತೆಗಳ ನಡೆವೆಯೂ ಜೀವನೋಪಾಯಕ್ಕೆ ದೊಡ್ಡ ಪಟ್ಟಣ ಬೃಹನ್ಮುಂಬಯಿಗೆ ಬಂದು ಹೇಗೆ ಕ್ರೀಯಾಶೀಲರಾಗಿ ¨ದುಕಬಹುದು ಎಂದು ತೋರಿಸಿದ ಮಹಾನುಭವರಲ್ಲಿ ಡಾ| ಕಾರ್ನಾಡ್ ಓರ್ವರು. ಭಾರತದ ಬೆಳವಣಿಗೆಗೆ ಶ್ರಮಪಟ್ಟವರಿಗೆ ಅತ್ಯುತ್ತಮವಾದ ಪ್ರಸಿದ್ಧಿ, ಕೀರ್ತಿ ಗಳಿಸಲು ಸಾಧ್ಯವಿದೆ ಎಂದು ತೋರ್ಪಡಿಸುವಲ್ಲಿ ಡಾ| ಕಾರ್ನಾಡ್ ಜ್ವಾಲಂತ ಸಾಕ್ಷಿಯಾಗಿದ್ದಾರೆ. ಇವರೋರ್ವ ಅಸೂಯೆವಿಲ್ಲದೆ ಸಹನೆಯಿಂದ ಸಂಬಂಧಗಳನ್ನು ಗಳಿಸಿದ ಪ್ರತಿಭಾನ್ವಿತರು. ತಮ್ಮನ್ನು ಅರಸಿಕೊಂಡವರಿಗೆ ಹೊಸ ಬದುಕನ್ನು ರೂಪಿಸಿರುವುದಕ್ಕೆ ಅತ್ಯುತ್ತಮವಾದ ಉದಾಹರಣೆ ಇವರಾಗಿದ್ದಾರೆ. ಡಾ| ಕಾರ್ನಾಡ್ ಮತ್ತು ಡಾ| ಉಪಾಧ್ಯಾಯ ಅವರ ಜೋಡಿ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಅಪರಿಮಿತವಾದುದು. ಕರ್ನಾಟಕದ ಮಂದಿ ಹೇಗೆ ಕೆಲಸಮಾಡಬೇಕು ಎಂಬುವುದಕ್ಕೆ ಇವರಿಬ್ಬರು ಮಾದರಿಯಾಗಿದ್ದಾರೆ ಎಂದೂ ಡಾ| ಕಾಳೇಗೌಡ ತಿಳಿಸಿದರು.

ಹಿರಿಯ ಪರ್ತಕರ್ತ ಚಂದ್ರಶೇಖರ ಪಾಲೆತ್ತಾಡಿ, ಕರ್ನಾಟಕ ಸಂಘ ಗೋರೆಗಾಂವ್ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮದಲ್ಲಿ ಗೌರವ ಅತಿಥಿüಗಳಾಗಿದ್ದು ಡಾ| ಕಾಳೇಗೌಡ ಇವರು ರೂಪಾಯಿ 7,500/- ನಗದು, ಪ್ರಶಸ್ತಿಪತ್ರ, ಗೌರವ ಫಲಕ ಒಳಗೊಂಡಿರುವ `ವಿಶ್ವನಾಥ ಕಾರ್ನಾಡ್ ಪ್ರಶಸ್ತಿ'ಯನ್ನು ಹಿರಿಯ ಪತ್ರಕರ್ತ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ ಇವರಿಗೆ ಪ್ರದಾನಿಸಿ ಅಭಿನಂದಿಸಿದ ರು. ಹಾಗೂ ವಿಕಿಪೀಡಿಯಾ ಬರವಣಿಗೆಯ ಹೆಚ್.ಆರ್.ಲಕ್ಷಿ ್ಮೀ ವೆಂಕಟೇಶ್, ರಂಗಭೂಮಿ ಕಲಾವಿದ ಅವಿನಾಶ್ ಕಾಮತ್, ಬಿಎಸ್‍ಕೆಬಿಎ ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ಮತ್ತು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಇವರಿಗೆ ಗೌರವಾರ್ಪಣೆಗೈದÀು ಶುಭ ಕೋರಿದರು.

ವಿದ್ಯಾಥಿರ್üಗಳು ಮತ್ತು ಅಧ್ಯಾಪಕರು ಮಾನಸಿಕವಾಗಿ ಹತ್ತಿರವಾಗಿರಬೇಕು. ಇಂತಹ ಸಾಹಚರ್ಯ ಸಂಬಂಧಗಳ ಜೊತೆ ಮಾನವೀಯ ಮೌಲ್ಯಗಳಿಗೆ ಪೂರಕವಾಗಿರುತ್ತವೆ ಎಂದು ಡಾ| ಕರ್ನಾಡ್ ತಿಳಿಸಿದರು.

ನಾವು ಬಾಲ್ಯಮಿತ್ರರಾಗಿದ್ದು ಆಟದ ಮೈದಾನದಲ್ಲೇ ಆಟಪಾಠ ಕಲಿತು ಸಹೋದರತ್ವರೆಣಿಸಿ ಬೆಳೆದವರು. ಡಾ| ಕಾರ್ನಾಡ್ ಅವರಿಗೆ ಎಲ್ಲರೂ ಮಿತ್ರರಾಗಿದ್ದು ಅವರೋರ್ವ ಅಜಾತಶತ್ರು ಆಗಿದ್ದಾರೆ. ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡ ಸಹೃದಯಿ. ಇವರ ಅನುಪಮ ಸೇವೆಗೆ ಇಂತಹ ವೇದಿಕೆಗಳ ಹುಟ್ಟು ಅತ್ಯವಶ್ಯವಾಗಿದೆ ಎಂದು ವರದ ಉಳ್ಳಾಲ್ ತಿಳಿಸಿದರು.

ಶಿವಾಜಿ ಉಪ್ಪೂರು ಮಾತನಾಡಿ ನಮ್ಮಿಬ್ಬರದ್ದು ಸುಮಾರು ಮೂರು ದಶಕಗಳ ಕಾಲದ ನಂಟು. ಕನ್ನಡ ಭಾಷೆಯನ್ನು ಬಹಳಷ್ಟು ಪ್ರೀತಿಸುತ್ತಿದ್ದ ಡಾ| ಕರ್ನಾಡ್ ಓರ್ವ ಸಾಹಿತಿ ಎಂದೆಣಿಸಿ ವಿದ್ವಾಂಸರಾದರು. ಬಾಳ ಸಂಗಾತಿಯನ್ನು ಕಳಕೊಂಡ ಇವರು ಗತ ವರ್ಷಗಳಲ್ಲಿ ದುಃಖ ಮರೆಯಲು ಸಾಹಿತಿಕ ಸಾಂಗತ್ಯ ರೂಡಿಸಿಕೊಂಡ ಫಲವಾಗಿ ಇಂತಹ ಮಹತ್ತರ ಗ್ರಂಥ ರಚಿಸಿರುವುದು ಅಭಿನಂದನೀಯ ಎಂದರು.

ಡಾ| ಉಪಾಧ್ಯ ಅಧ್ಯಕ್ಷೀಯ ಭಾಷಣಗೈದು ಜೀವನದಲ್ಲಿ ತೊಂದರೆಗಳು ತಾತ್ಕಾಲಿಕ ಎಂಬುವುದನ್ನು ತೋರಿಸಿದ ಮೇಧಾವಿ ಡಾ| ಕಾರ್ನಾಡ್. ಇವತ್ತಿನ ವೇದಿಕೆಯು ಸಾಹಿತ್ಯ ಸಂಗಮ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಬಲಾಬಲವಾಗಿ ನಡೆಯುತ್ತಿರುವುದು ಪ್ರಶಂಸನೀಯ. ಅಧ್ಯಾಪನದಲ್ಲಿ ನಿವೃತ್ತಿಯಾಗಿ ಸುಮಾರು ಎರಡುವರೆ ದಶಕಗಳು ಕಳೆದರೂ ಇವತ್ತಿಗೂ ಲವಲವಿಕೆಯಿಂದ ಮುಂಬಯಿ ವಿವಿಯಲ್ಲಿ ಪಾಠ, ಬೋಧನೆ, ಮೌಲ್ಯಮಾಪನ ಇತ್ಯಾದಿಗಳನ್ನು ನಡೆಸುತ್ತಿರುವ ಡಾ| ಕಾರ್ನಾಡ್ ಮೂಲಕ ಕನ್ನಡದ ಸಾಹಿತ್ಯ ಕೃಷಿ ಮಾಡುತ್ತಿರುವುದು ಅಭಿನಂದನೀಯ. ಇವರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಪ್ರತಿಷ್ಠಾನ ಹೆಚ್ಚು ಖುಷಿಯನ್ನು ತಂದಿದೆ. ಇದೊಂದು ಸಾಂಸ್ಕೃತಿಕ ಸಂಘಟನೆಯಾಗಿ ಮುನ್ನಡೆಯಲಿ. ಇವರ ಜೀವನ ಸಾಧನೆ ಹೊಸ ತಲೆಮಾರಿಗೆ ಮಾದರಿ ಆಗಲಿ ಎಂದು ಸ್ವರ್ಗೀಯ ನಳಿನಿ ಕಾರ್ನಾಡ್ ಅವರನ್ನೂ ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ದೇವದಾಸ್ ಶೆಟ್ಟಿ, ಕನ್ನಡ ವಿಭಾಗದ ವಿದ್ಯಾಥಿರ್üಗಳಾದ ಸುರೇಖಾ ಹೆಚ್.ದೇವಾಡಿಗ, ಅನಿತಾ ಪಿ.ಪೂಜಾರಿ, ಕಲಾ ಭಾಗ್ವತ್, ಸೋಮಶೇಖರ ಮಾಲಿ ಪಾಟೇಲ್ ಹಾಗೂ ಗ್ರಂಥ ಬೆರಳಚ್ಚು ಗೊಳಿಸಿದ ಸವಿತಾ ಎಸ್.ಶೆಟ್ಟಿ ಇವರನ್ನು ಗ್ರಂಥ ಗೌರವದೊಂದಿಗೆ ಗೌರವಿಸಲಾಯಿತು.

ಕಲಾ ಭಾಗ್ವತ್ ಪ್ರಾರ್ಥನೆಯನ್ನಾಡಿದರು. ಡಾ| ವಿಶ್ವನಾಥ ಕಾರ್ನಾಡ್ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದರು. ಕಾರ್ತಿಕ್ ಸನಿಲ್, ಡಾ| ಪಲ್ಲವಿ ಸನಿಲ್, ಸುಚಿತ್ರಾ ಪೂಜಾರಿ, ರೋಹಿತ್ ಕಾರ್ನಾಡ್, ಶರತ್ ಕಾರ್ನಾಡ್, ನಿಲೀಮಾ ಕಾರ್ನಾಡ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಶರತ್ ಕಾರ್ನಾಡ್ ವಂದಿಸಿದರು.

 

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here