Saturday 2nd, December 2023
canara news

ಅರಸೀಕೆರೆ ಕುರುವಂಕದ ಶಾನಭೋಗ್ ಶ್ರೀ ದಾಸಪ್ಪ ದತ್ತಿ ವತಿಯಿಂದ ಸನ್ಮಾನ

Published On : 01 Jan 2023   |  Reported By : Rons Bantwal


ಡಾ| ಸುರೇಶ್ ರಾವ್ ಕಟೀಲು ಅವರಿಗೆ `ಧರ್ಮ ರತ್ನಾಕರ' ಬಿರುದು ಪ್ರದಾನ

ಮುಂಬಯಿ, (ಆರ್‍ಬಿಐ) ಡಿ.31: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜ್‍ನ ಸಭಾಂಗಣದಲ್ಲಿ ಇತ್ತೀಚೆಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು ನಾಡಿನ ಹೆಸರಾಂತ ವೈದ್ಯಾಧಿಕಾರಿ, ಸಮಾಜ ಸೇವಕ, ಕಟೀಲುನಲ್ಲಿ ಆಸ್ಪತ್ರೆ ನಿರ್ಮಿಸಿ ಸ್ವಸ್ಥ ್ಯ ಸಮಾಜಕ್ಕೆ ನೀಡಿದ ಸಾಧಕ ಡಾ| ಸುರೇಶ್ ಎಸ್.ರಾವ್ ಕಟೀಲು ಅವರನ್ನು (ಪತ್ನಿ ವಿಜಯಲಕ್ಷ್ಮೀ ಎಸ್.ರಾವ್ ಜೊತೆಗೂಡಿ) ಅರಸೀಕೆರೆ ತಾಲೂಕು ಕುರುವಂಕದ ಶಾನಭೋಗ್ ಶ್ರೀ ದಾಸಪ್ಪ ದತ್ತಿ ವತಿಯಿಂದ ಸನ್ಮಾನಿಸಿ ರಜಕ ಕಿರೀಟ ಸಹಿತ ಧರ್ಮ ರತ್ನಾಕರ ಬಿರುದು ನೀಡಿ ಅಭಿನಂದಿಸಲಾಯಿತು.

ಸರಳವಾಗಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಕಟೀಲು ದೇಗುಲದ ಮೊಕ್ತೇಸರ ಶ್ರೀ ವಾಸುದೇವ ಅಸ್ರಣ್ಣ, ಡಾ| ಸತ್ಯಕೃಷ್ಣ ಭಟ್, ಶ್ರೀ ಅನಂತ ಅಸ್ರಣ್ಣ, ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಅಸ್ರಣ್ಣ, ಶ್ರೀ ಸದಾನಂದ ಅಸ್ರಣ್ಣ ಉಪಸ್ಥಿತರಿದ್ದು ಅನುಗ್ರಹಿಸಿದರು.

ಸಮಾಜ ಸೇವಕರಾದ ಬಿಪಿನ್ ಚಂದ್ರ ಶೆಟ್ಟಿ, ಭುವನಾಭಿರಾಮ ಉಡುಪ, ಮೋಹನ್‍ರಾವ್ ಹಾಗೂ ದಾಸಪ್ಪ ದತ್ತಿಯ ಸಂಚಾಲಕ ಕೆ.ಪಿ.ವೆಂಕಟೇಶಮೂರ್ತಿ ಉಪಸ್ಥಿತರಿದ್ದು ಸನ್ಮಾನಿತರನ್ನು ಅಭಿನಂದಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here