Monday 24th, June 2024
canara news

ಬಿಕರ್ಣಕಟ್ಟೆ ಬಾಲಯೇಸು ಪುಣ್ಯಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ

Published On : 07 Jan 2023

ಮುಂಬಯಿ (ಆರ್‍ಬಿಐ), ಜ.05: ಮಂಗಳೂರು ಬಿಕರ್ಣಕಟ್ಟೆ ಅಲ್ಲಿನ ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಇಂದಿಲ್ಲಿ ಗುರುವಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯನ್ನೀಡಿ ಬಾಲಯೇಸುವಿನ ಆಶೀರ್ವಾದಗಳನ್ನು ಪಡೆದುಕೊಂಡರು.

ಪುಣ್ಯಕ್ಷೇತ್ರವು ಆಚರಿಸುತ್ತಿರುವ 2023ನೇ ವಾರ್ಷಿಕ ಉತ್ಸವದ ಶುಭಾವಸರದ ಪ್ರಥಮ ದಿನದ ಸಂದರ್ಭ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ವಂ| ಫಾ| ಚಾರ್ಲ್ಸ್ ಸೆರಾವೊ ಸ್ವಾಗತಿಸಿದರು. ಕ್ಷೇತ್ರದ ನಿರ್ದೇಶಕ ವಂ| ಫಾ| ರೋವೆಲ್ ಡಿಸೋಜಾ ಪ್ರಾಥಿರ್üಸಿ ಹರಸಿದರು.

ಈ ಸಂದರ್ಭ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ ಖಾದರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಎಂಎಲ್‍ಸಿ ಐವನ್ ಡಿಸೋಜಾ ಮಾಜಿ ಶಾಸಕರಾದ ಜೆ.ಆರ್. ಲೋಬೊ. ಬಿ.ಎ ಮೊಯ್ಧೀನ್ ಬಾವಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ ಎ ಗಫೂರ್, ಮಂಗಳೂರುನ ಮಾಜಿ ಮೇಯರ್ ಕವಿತಾ ಸನಿಲ್ ಮತ್ತಿತರ ಗಣ್ಯರು ಹಾಜರಿದ್ದರು.
More News

ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Comment Here