Thursday 8th, May 2025
canara news

ಮುಂಬಯಿ ಸ್ಕೂಲ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್‍ನ ಅಂತರ್ ಶಾಲಾ ಅಥ್ಲೆಟಿಕ್

Published On : 15 Jan 2023   |  Reported By : Rons Bantwal


ವೇಗದ ಓಟಗಾರನಾಗಿ ಮಿಂಚಿದ ಉಡುಪಿ ಕಲ್ಯಾಣ್ಪುರದ ಆದಿ ರವಿ ಪೂಜಾರಿ

ಮುಂಬಯಿ, ಜ.13: ಮುಂಬಯಿ ಸ್ಕೂಲ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸಿದ್ದ ಅಂತರ್ ರಾಜ್ಯ ಶಾಲಾ ಅಥ್ಲೆಟಿಕ್ 2022-23ರಲ್ಲಿ ಉಡುಪಿ ಕಲ್ಯಾಣ್ಪುರ ಮೂಲತಃ ಯುವ ಪ್ರತಿಭೆ, ಸಾಕಿನಾಕಾ ನಿವಾಸಿ ಪೆÇವಾಯಿ ಅಲ್ಲಿನ ಪವಾರ್ ಪಬ್ಲಿಕ್ ಸ್ಕೂಲ್‍ನ (ಚಾಂದಿವಲಿ) ವಿದ್ಯಾಥಿರ್ü, ಓಟಗಾರ ಆದಿ ರವಿ ಪೂಜಾರಿ ಎರಡು ಸ್ವರ್ಣ ಪದಕಗಳನ್ನು ಪ್ರಾಪ್ತಿಸಿ ಸರ್ವೋತ್ಕೃಷ್ಟ ಕ್ರೀಡಾಪಟು ಎಂದೆಣಿಸಿರುವನು.

ಮರೇನ್‍ಲೈನ್ ಅಲ್ಲಿನ ಮುಂಬಯಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಕಳೆದ ಸೋಮವಾರ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ಪವಾರ್ ಪಬ್ಲಿಕ್ ಸ್ಕೂಲ್‍ನ್ನು ಪ್ರತಿನಿಧಿಸಿದ 15ರ ಹರೆಯದ ಆದಿ ಪೂಜಾರಿ ಕ್ರೀಡಾ ತುಪಾಕಿಯನ್ನಿಡಿದು ಓಡಿ11.45 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ಎರಡು ಚಿನ್ನ ಪದಕಗಳನ್ನು ತನ್ನದಾಗಿಸಿ ವಿಜೇತನಾದನು.

ಎಂಎಸ್‍ಎಸ್‍ಎ128ನೇ ವಾರ್ಷಿಕ ಅಂತರ-ಶಾಲಾ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2022-2023ರ 16 ವರ್ಷದೊಳಗಿನವರ ಸ್ಪರ್ಧೆಗಳಲ್ಲಿ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ (ಫೆÇೀರ್ಟ್) ಅತ್ಯಂತ ವೇಗದ ಹುಡುಗ ಮತ್ತು ಹುಡುಗಿಯಾಗಿ ಹೊರಹೊಮ್ಮಿದ್ದು ಸ್ಪರ್ಧೆಯಲ್ಲಿ ಮುನ್ನಡೆದ ಆದಿ "ನಾನು ತುಪಾಕಿನಿಂದ ಮುನ್ನಡೆ ಸಾಧಿಸಿದರೂ, ನಾನು ಉತ್ತಮ ಸಮಯದಲ್ಲಿ ಸ್ಪರ್ಧೆ ಪೂರೈಸಲು ಮತ್ತು ನಂತರ 200 ಓಟಕ್ಕೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಯಸಿದ್ದರಿಂದ ನಾನು ಶಕ್ತಿಶಾಲಿಯಾಗಿ ಮುನ್ನಡೆದೆ" ಎಂದರು. ನಾನು ಉಸೇನ್ ಬೋಲ್ಟ್ ಅವರ ಕ್ರೀಡಾಭಿಮಾನಿ ಎಂದೂ ಆದಿ ಅವರು ತಿಳಿಸಿದರು.

ಪ್ರತಿಭಾನ್ವಿತ ಆದಿ ಪೂಜಾರಿ ಉಡುಪಿ ಕಲ್ಯಾಣ್ಪುರ ಇಲ್ಲಿನ ತೋನ್ಸೆ ಇಲ್ಲಿನ ಇವರು ಗ್ರಾಮದಲ್ಲಿ ಕಾಂತು ಪೂಜಾರಿ ಮನೆ ನಿವಾಸಿ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸಕ್ರೀಯ ಸದಸ್ಯ ರವಿ ಪೂಜಾರಿ ಮತ್ತು ಸಂಧ್ಯಾ ಆರ್.ಪೂಜಾರಿ ಇನ್ನಂಜೆ ಇವರ ಸುಪುತ್ರ ಹಾಗೂ ಗರೋಡಿ ಸೇವಾ ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಇವರ ಸೋದರಪುತ್ರ ಆಗಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here