Friday 8th, December 2023
canara news

34ನೇ ವಾರ್ಷಿಕ ಮಹಾಪೂಜೆಯಲ್ಲಿ ಆರಾಧಿಸಲ್ಪಟ್ಟ ಶಿರ್ಡಿ ಶ್ರೀ ಸಾಯಿಬಾಬಾ ಕೊಲಾಬಾದ ಜಾತ್ರೆ ಪೂರೈಸಿದ ಶ್ರೀ ಸಾಯಿನಾಥ ಮಿತ್ರ ಮಂಡಳಿ ಕಫ್‍ಪರೇಡ್

Published On : 21 Jan 2023


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.20: ದಕ್ಷಿಣ ಮುಂಬಯಿ ಇಲ್ಲಿನ ಕೊಲಾಬಾ ಕಫ್‍ಪರೇಡ್‍ನಲ್ಲಿ ಕಳೆದ ಸುಮಾರು ಮೂರುವರೆ ದಶಕಗಳಿಂದ ಸೇವಾ ನಿರತ ಶ್ರೀ ಸಾಯಿನಾಥ ಮಿತ್ರ ಮಂಡಳಿ (ರಿ.) ತನ್ನ 34ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆ ಹಾಗೂ ಸಾಯಿ ಭಂಡಾರವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಕಳೆದ ಗುರುವಾರ ಸಂಜೆ ಕಪ್‍ಪರೇಡ್‍ನ ಸಾಯಿ ಸದನ್‍ನಲ್ಲಿ ನೇರವೇರಿಸಿತು.

ಕೊಲಾಬಾ ನಗರದ ವಾರ್ಷಿಕ ಜಾತ್ರೆ ಎಂದೇ ಪ್ರಸಿದ್ಧಿಯ ವಾರ್ಷಿಕ ಕಾರ್ಯಕ್ರಮ ನಿಮಿತ್ತ ಇಂದಿಲ್ಲಿ ಶ್ರೀ ಸಾಯಿ ಅಭಿಷೇಕ, ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀ ಸಾಯಿಬಾಬಾ ಅವರ ಭಂಡಾರ ಜರುಗಿಸಲ್ಪಟ್ಟಿತು. ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಭಟ್ (ಭಾಂಡೂಪ್) ತಮ್ಮ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆಗಳನ್ನು ನೆರವೇರಿಸಿ ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ಧುರೀಣತ್ವದಲ್ಲಿ ಮೂರುವರೆ ದಶಕಗಳಿಂದ ನಿರಂತರವಾಗಿ ನೆರವೇರುತ್ತಿತಿವ ಜಾತ್ರೆಯಲ್ಲಿ ಈ ಬಾರಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್, ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕೃಪಾಶಂಕರ್ ಸಿಂಗ್, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಆರ್.ಎಂ ಭಂಡಾರಿ, ನ್ಯಾ| ಶೇಖರ ಎಸ್.ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಡಾ| ಶಿವರಾಮ ಕೆ.ಭಂಡಾರಿ (ಶಿವಾಸ್), ದಕ್ಷಿಣ ಮುಂಬಯಿ ಎಂಎನ್‍ಎಸ್ ಉಪಾಧ್ಯಕ್ಷ ಅರವಿಂದ್ ಗಾವ್ಡೆ, ಆರ್‍ಟಿಐ ಕಾರ್ಯಕರ್ತ ಅನಿಲ್ ಗಲ್‍ಗಲಗಿ, ಕಾಂಗ್ರೇಸ್ ಧುರೀಣರಾದ ಚಂದ್ರೇಶ್ ದುಭೆ ಅಸಲ್ಫಾ, ಗಣೇಶ್ ಕುಮಾರ್, ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಸಲ್ಫಾ ಇದರ ಸುರೇಶ್ ಪಿ.ಕೋಟ್ಯಾನ್, ಧರ್ಮಪಾಲ್ ಪಿ.ಕೋಟ್ಯಾನ್,ಸುನೀಲ್ ಅಮೀನ್ ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಭಕ್ತರು ಆಗಮಿಸಿ ಶ್ರೀ ಸಾಯಿಬಾಬಾರ ಕೃಪೆಗೆ ಪಾತ್ರರಾದರು.

ಶ್ರೀ ಸಾಯಿನಾಥ ಮಿತ್ರ ಮಂಡಳಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಮೇಘಾ ಸೌರಭ್ ಭಂಡಾರಿ ಮತ್ತು ಮಾ| ಆರ್ಯಮಾನ್ ಸೌರಭ್ ಭಂಡಾರಿ ಉಪಸ್ಥಿತರಿದ್ದು ಆಗಮಿಸಿದ್ದ ಸಾವಿರಾರು ಸಾಯಿಭಕ್ತರಿಗೆ ಸ್ವಾಗತಿಸಿದರು. ಸೌರಭ್ ಸುರೇಶ್ ಭಂಡಾರಿ ವಂದಿಸಿದರು.

 
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here