Friday 14th, June 2024
canara news

ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರ ದಿವ್ಯೋಪಸ್ಥಿತಿ

Published On : 21 Jan 2023   |  Reported By : Rons Bantwal


ಜ.23-27: ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠÀದ ಶ್ರೀ ನಾಗ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.20: ಚೈತನ್ಯದ ಸಮೃದ್ಧಿಯಾಗಿ ಬ್ರಹ್ಮಕಲಶಾಭಿಷೇಕ ಪೂರಕ. ಧಾರ್ಮಿಕ ಶ್ರದ್ಧೆಯಿಂದ ಇದನ್ನು ಅಣಿಗೊಳಿಸಲು ಸಾಧ್ಯ. ನಮ್ಮ ಯುವ, ಭಾವೀ ಪೀಳಿಗೆಯು ದುಷ್ಟ ಪ್ರಭಾವದಿಂದ ಮುಕ್ತವಾಗಿ ಸಾತ್ವಿಕ ಪ್ರಭಾವಕ್ಕೆ ಸನ್ನದ್ಧರಾಗಲು ಶ್ರೀನಾಗದೇವರ ಕೃಪೆ ಅವಶ್ಯಕ. ಶ್ರದ್ಧಾ ಸಂಪತ್ತು ಬಯಸುವ ಭಕ್ತರಿಗೆ ಸುಬ್ರಹ್ಮಣ್ಯ ಕ್ಷೇತ್ರವು ಆಶ್ರಯವಾಗಿದ್ದು ಇದು ಭಾರತೀಯ ಸಂಸ್ಕಾರದ ಸನಾತನ ಧರ್ಮದಿಂದ ಮುನ್ನಡೆಸಲು ಅವಕಾಶವಾಗಿದೆ. ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿಯ ಶ್ರೀ ಸುಬ್ರಹ್ಮಣ್ಯ ಮಠÀದಲ್ಲಿ ಇದೇ ಜ.23 ಸೋಮವಾರ ದಿಂದ ಜ.27ರ ಶುಕ್ರವಾರ ತನಕ ಬ್ರಹ್ಮಕಲಶಾಭಿಷೇಕ ನೆರವೇರಲಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಆಯೋಜಿಸಿಲಾ ಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾಪ್ರಸನ್ನರು ಮಾಹಿತಿಯನ್ನಿತ್ತು ಕಲಿಯುಗದಲ್ಲಿ ತುಂಬಾ ಮಹತ್ವ ಪಡೆಯುವ ಸನ್ನಿಧಾನಗಳೆಂದರೆ ನಾಗದೇವರು ಮತ್ತು ಸುಬ್ರಹ್ಮಣ್ಯ ದೇವರು. ದೇವಸೇನೆಗೆ ಮತ್ತು ಆಸಲು ಸೇನೆಗೆ ಸಂಘರ್ಷ ಉಂಟಾದಾಗ ದೇವಸೇನೆಗೆ ನಾಯಕನಾಗಿ ಭೂಮಿಗೆ ಬಂದವರು ಸುಬ್ರಹ್ಮಣ್ಯ. ಈ ದೇವರ ಆರಾಧನೆ ಆಗಬೇಕೆಂದರೆ ಬುದ್ಧಿವೃತ್ತವಾದ ದೇವತೆ ಮತ್ತು ಶಾಂತಿಧೂತವಾದ ದೇವತೆಗಳ ಆರಾಧನೆ ಅಗತ್ಯ. ನಮ್ಮಲ್ಲಿ ಕೂಡಾ ನಿತ್ಯ ಭಾವನಾತ್ಮಕ ಸಂಘರ್ಷಗಳು ಆಗುತ್ತವೆ. ಆಗ ಆಷಢ ಸ್ವಾಭಾವದ ನಾಶವಾಗಿ ದೇವಿ ಸ್ವಾಭಾವ ಪಡೆಯಬೇಕೆಂದಾಗ ಸುಬ್ರಹ್ಮಣ್ಯ ದೇವರ ಅನುಗ್ರಹಬೇಕು. ಆಗ ಬುದ್ಧಿಗೆ ಮತ್ತು ಮತಿಗೆ ಶಾಂತಿ ಕೊಡುವಂತಹ ಸುಬ್ರಹ್ಮಣ್ಯ ದೇವರನ್ನು ವಿಶೇಷವಾಗಿ ಆರಾಧನೆ ಮಾಡಬೇಕು. ನಾಗದೇವರನ್ನು ಸಂತತಿ, ಸಂಪತ್ತು, ಆರೋಗ್ಯದ ಅತೀ ದೇವತೆ ಎಂಬ ಕಾರಣಕ್ಕಾಗಿ ಕಲಿಯುಗದಲ್ಲಿ ಯಾವುದೇ ಹಾನಿಗಳಿಗೆ ಬಲಿ ಆಗುವ ಸಂದರ್ಭವಿರುತ್ತೆ. ಆಗಾಗಿ ಈ ಭೂಮಿಯಲ್ಲಿ ನಾಗರಾಧನೆ ಮತ್ತು ಸುಬ್ರಹ್ಮಣ್ಯ ದೇವರ ಆರಾಧನೆ ನಡೆಯುತ್ತದೆ. ಇಂತಹ ದೇವರುಗಳಿಗೆ ಬ್ರಹ್ಮಕಲಶಾಭಿಷೇಕಗಳು ನೆರವೇರಿಸಿದಾಗ ಬದುಕು ಹಸನಾಗುವುದು. ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಪಂಚ ದಿನಗಳಲ್ಲಿ ಪ್ರಾತ: ಕಾಲದಿಂದ ಸೂರ್ಯೋಸ್ತಮದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಉಪನ್ಯಾಸ ಹಾಗೂ ಮಧ್ಯಾಹ್ನ ತನ್ನ ವೈಧಿಕತ್ವದಲ್ಲಿ ಸಂಸ್ಥಾನ ಪೂಜೆ ನೆರವೇರಿಸಲಾಗುವುದು. ಅಂತೆಯೇ ಪ್ರತಿದಿನಾ ಸಂಜೆ ನಾಡಿನ ದಿಗ್ಗಜ ಗಣ್ಯರ, ರಾಜಕಾರಣಿಗಳು, ಧಾರ್ಮಿಕ ಧುರೀಣರು, ಸಾಮಾಜಿಕ ಮುಂದಾಳುಗಳ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ, ಸತ್ಕಾರ ಕಾರ್ಯಕ್ರಮಗಳೂ ನಡೆಸಲಾಗುವುದು ಎಂದರು.

ಜ.27ರ ಶುಕ್ರವಾರ ಪೂರ್ವಾಹ್ನ ಶ್ರೀ ವಿದ್ಯಾಪ್ರಸನ್ನತೀರ್ಥರ ದಿವ್ಯೋಪಸ್ಥಿತಿ ಹಾಗೂ ಆಶೀರ್ವಾಚನಗಳೊಂದಿಗೆ 10.05ರ ಮೀನಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಗ್ರಿ ಗೋಪಾಲಕೃಷ್ಣ ಸಾಮಗ ಅವರಿಂದ ನಾಗ ದರ್ಶನ ಸೇವೆ ನಡೆಸಲಿದ್ದಾರೆ. ಬಳಿಕ ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಗಂಟೆಗೆ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದÀರ ಪೀಠಾರೋಹಣದ ರಜಕವರ್ಷದ ಪ್ರಯುಕ್ತ ಗುರುವಂದನಂ ಕಾರ್ಯಕ್ರಮ ಮತ್ತು ತುಲಾಭಾರ ಸೇವೆ ನಡೆಸಲಾಗುವುದು ಎಂದು ಹರಿದಾಸ ಭಟ್ ತಿಳಿಸಿದರು.

ಭೂಮಿಗೆ ಅಧಿಪತಿ ಸುಬ್ರಹ್ಮಣ್ಯ ದೇವರು ಆದರೆ ಅವರ ಕುಕ್ಕೆ ಕ್ಷೇತ್ರದ ಪೀಠಾಧಿಪತಿ ವಿದ್ಯಾಪ್ರಸನ್ನರು ನಮ್ಮ ನಾಗರಾಜ ಆಗಿದ್ದಾರೆ. ಶ್ರೀನಾಗದೇವರ ಬ್ರಹ್ಮಕಲಶ, ವಿದ್ಯಾಪ್ರಸನ್ನರ ದೀಕ್ಷಾ ಸನ್ಯಾಸತತ್ವದ ರಜತ ಸಂಭ್ರಮ ಈ. ತ್ರಿವಳಿ ಸಂಭ್ರಮಗಳಲ್ಲಿ ಪಾಲ್ಗೊಂಡು ಪಾವನರಾಗೋಣ ಎಂದು ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಕೃಷ್ಣರಾಜ್ ತಂತ್ರಿ, ಹೆರ್ಗ ರವೀಂದ್ರ ಭಟ್, ವಿಷ್ಣು ಕಾರಂತ್, ಶ್ರೀಪ್ರಸಾದ್ ಭಟ್ ಉಪಸ್ಥಿತರಿದ್ದು, ಮಹಾನಗರದ ಸದ್ಭಕ್ತÀರು ಬಂಧು-ಬಾಂಧವರೊಡಗೂಡಿ ಆಗಮಿಸಿ, ತನು, ಮನ, ಧನಗಳ ಸಹಕರಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸುಬ್ರಹ್ಮಣ್ಯ ಮಠÀ ಮುಂಬಯಿ ಶಾಖೆಯ ವ್ಯವಸ್ಥಾಪಕರುಗಳಾದ ವಿಷ್ಣು ಕಾರಂತ್ ತಿಳಿಸಿದರು.

 
More News

ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Comment Here