Thursday 8th, May 2025
canara news

ಹೋಪ್ ಫೌಂಡೇಶನ್ ಆಚರಿಸಿದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ

Published On : 21 Jan 2023   |  Reported By : Rons Bantwal


ಹಸಿದವರಿಗೆ ಅನ್ನ ನೀಡದ ಧರ್ಮಕರ್ಮ ವ್ಯರ್ಥ : ಗೋಪಾಲ ತ್ರಾಸಿ

ಮುಂಬಯಿ (ಆರ್‍ಬಿಐ), ಜ.21: ಮುಂಬಯಿ ಸಯಾನ್‍ನಲ್ಲಿನ ಹೋಪ್ ಫೌಂಡೇಷನ್ ಇತ್ತೀಚೆಗೆ (ಜ.12) ಧಾರಾವಿ ಇಲ್ಲಿನ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಮನಾಪ ಶಾಲಾ ವಠಾರದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ ನಿಮಿತ್ತ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಆಚರಿಸಿತು.

ಮುಖ್ಯ ಅತಿಥಿüಯಾಗಿ ಕವಿ, ಕಥೆಗಾರ, ರಂಗಕರ್ಮಿ ಗೋಪಾಲ ತ್ರಾಸಿ ಹಾಜರಿದ್ದು, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾಮಿ ವಿವೇಕಾನಂದರ ಸಂಸ್ಮರಣೆಯ ಅಗತ್ಯದ ಕುರಿತು ಹೇಳುತ್ತ, ಹಲವು ಜನ್ಮದಲಿ ಸಾಧಿಸುವಂತಹದ್ದನ್ನು ಕೇವಲ 39 ವರ್ಷ ಬಾಳಿದ ವಿವೇಕಾನಂದರು ಸಾಧಿಸಿ ತೋರಿಸಿದ್ದಾರೆ. ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇದ್ದವರು. ಈ ದೇಶದ ದೀನರು ಮತ್ತು ಮಹಿಳೆಯರ ಏಳಿಗೆಗೆ ವಿದ್ಯೆ ಅತೀ ಅಗತ್ಯ ಅಂದು ಭೋದಿಸಿದವರು. ಸನಾತನಿಗಳಿಗೆ ಕರ್ಮಠ ಆಚರಣೆ, ಗೊಡ್ಡು ಸಂಪ್ರದಾಯದಿಂದ ಹೊರಬರಲು ಕರೆ ನೀಡಿದ್ದಲ್ಲದೆ ಹಸಿದವರಿಗೆ ಅನ್ನ ನೀಡಲು ಅಸಕ್ತವಾದ ಧರ್ಮ ಕರ್ಮ ವ್ಯರ್ಥ ಎಂದು ಕಟುವಾಗಿ ಸಾರಿದವರು. ಸುಶಿಕ್ಷಿತರಾದ ವಿವೇಕಾನಂದರು ಮೊಟ್ಟ ಮೊದಲ ಬಾರಿಗೆ ವಿಶ್ವಕ್ಕೆ ಹಿಂದು ಧರ್ಮದ ನಿಜ ಸಾರವನ್ನು ಪ್ರಚಾರ ಪಡಿಸಿದವರು. ವಿವೇಕಾನಂದರ ಕುರಿತಾಗಿ ಓದು ಜೊತೆಗೆ ಅವರ ಆಲೋಚನೆಗಳನ್ನು ಅಗತ್ಯವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ? ಎಂದು ಗೋಪಾಲ ತ್ರಾಸಿಯವರು ಸ್ವಾರಸ್ಯಕರವಾಗಿ ಹೇಳಿದರು.

ಧಾರ್ಮಿಕ ಕಾರ್ಯಕರ್ತ ಜಹೋರಿಲಾಲ್ ತುಂಗಾರಿಯಾ ಅತಿಥಿü ಅಭ್ಯಾಗತರಾಗಿದ್ದು ಮಾತನಾಡಿ ಸ್ವಾಮಿ ವಿವೇಕಾನಂದರು ಅಪಾರ ಜ್ನಾಪಕಶಕ್ತಿ , ಸೂಕ್ಷ್ಮಮತಿ ಹಾಗೂ ಬುದ್ಧಿವಂತರಾಗಿದ್ದರು. ಅವರು ತಮಗೆ ಸರಿಕಂಡರೆ ದಿಟ್ಟತನ ತೋರಿ ಯಾವುದಕ್ಕೂ ಭಯ ಪಡುತ್ತಿರಲಿಲ್ಲ. ಎಂದೇಳಿ ವಿವೇಕಾನಂದರ ಜೀವನದಲ್ಲಿನ ಕುತೂಹಲಕಾರಿಯಾದ ಸನ್ನಿವೇಶ, ಘಟನೆಗಳನ್ನು ನೆರೆದವರೊಂದಿಗೆ ಹಂಚಿಕೊಂಡರು.

ಎನಲೈಟನ್ ಫೌಂಡೇಶನ್‍ನÀ ಸ್ಥಾಪಕ ರಾಜೇಶ್ ಕುಮಾರ್ ಅತಿಥಿüಯಾಗಿದ್ದು ಹಾಜರಿದ್ದು ಶುಭಾರೈಸಿ ಹೋಪ್ ಫೌಂಡೇಶನ್‍ನ ನಿಸ್ವಾರ್ಥ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಹೋಪ್ ಫೌಂಡೇಶನ್‍ನ ಯುವ ಅಧ್ಯಕ್ಷ ತಾಯಪ್ಪ ಅನಮೋಲ್ ಸ್ವಾಗತಿಸಿ ಫೌಂಡೇಶನ್‍ನ ಕಾರ್ಯ ಕಲಾಪಗಳನ್ನು ವಿವರಿಸಿದರು ಮತ್ತು ನೆರವಾದ ಹಿತೈಷಿಗಳಿಗೆ ಅಭಿವಂದಿಸಿದರು. ನೆರೆದ ಶಾಲಾ ಮಕ್ಕಳಿಗೆ ವಿವಿಧ ಧರ್ಮದ ಧಾರ್ಮಿಕ, ಸಾಮಾಜಿಕ ಸಂತ ಮಹಾತ್ಮರ ಜೀವನ ಚರಿತ್ರೆಯ ಕಿರು ಹೊತ್ತಿಗೆಗಳನ್ನು ನೀಡಲಾಯಿತು. ಫೌಂಡೇಶನ್‍ನ ಭೀಮರಾಯ ಚಿಲ್ಕ ಅತಿಥಿüಗಳನ್ನು ಪರಿಚಯಿಸಿದರು. ಯುವ ಕಾರ್ಯಕರ್ತೆ ನಿಲೋಫರ್ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಜೊಸೆಫ್ ಕಪ್ಪಲ್ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here