Thursday 8th, May 2025
canara news

ಸಮಾಜಮುಖಿ ಕಾರ್ಯಗಳಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ : ಇಬ್ರಾಹಿಂ ಕಲ್ಲೂರು

Published On : 21 Jan 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.21: ಮಂಗಳೂರು ಉಳ್ಳಾಲ ಇಲ್ಲಿನ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಶಿಬಿರದ ಜೊತೆ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಜಾಗೃತಿ ನೀಡುತ್ತಿರುವ ಕಾರ್ಯದಿಂದ ಹಲವರು ಭರವಸೆಯಿಂದ ಬದುಕಲು ಟ್ರಸ್ಟ್ ಸಹಕಾರಿಯಾಗಿದೆ ಎಂದು ಕಲ್ಲೂರು ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಇಬ್ರಾಹೀಂ ಹಾಜಿ ಕಲ್ಲೂರು ಹೇಳಿದರು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ತಾಜುಲ್ ಉಲಮಾ ವುಮೆನ್ಸ್ ಕಾಲೇಜ್ ಮತ್ತು ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ (ರಿ.) ವತಿಯಿಂದ ಮುಡಿಪು ತಾಜುಲ್ ಉಲಮಾ ವುಮೆನ್ಸ್ ಕಾಲೇಜ್‍ನಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಉದ್ಘಾಟಿಸಿ ಇಬ್ರಾಹೀಂ ಕಲ್ಲೂರು ಮಾತನಾಡಿದರು.

ತಾಜುಲ್ ಉಲಮಾ ವುಮೆನ್ಸ್ ಕಾಲೇಜ್ ಅಧ್ಯಕ್ಷ ಅಲಿ ಫೈಝಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯರು ಉನ್ನತ ಶಿಕ್ಷಣ ಪಡೆಯ ಬೇಕೆಂಬ ಉದೇಶದಿಂದ ತಾಜುಲ್ ಉಲಮಾ ವುಮೆನ್ಸ್ ಕಾಲೇಜು ಹತ್ತು ವರ್ಷಗಳಿಂದ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದೆ. ಈ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕನ್ನು ನಿರ್ವಹಿಸಲು ಸಂಸ್ಥೆ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವರ್ಕಾಡಿ ಜಿ.ಪಂ ಸದಸ್ಯ ಕಮಲಾಕ್ಷಿ, ಕೆಎಂಸಿ ಆಸ್ಪತ್ರೆಯ ಪಿಆರ್‍ಒ ಹೇರಿರ್ಬೆಥ್ ಮಾರಿಯೋ ಪಿರೇರಾ, ಶಿಬಿರ ಸಂಘಟಕ ಅಝೀಝ್ ಕಲ್ಲೂರು, ಡಾ| ಸುರೇಖಾ, ಅಹಿಂದ ಜನ ಚಳುವಳಿಯ ಉಳ್ಳಾಲ ತಾಲೂಕು ಅಧ್ಯಕ್ಷ ಬಾದ್‍ಷಾ, ಸಮಾಣಿಗೆ ಮದನಿ, ಸಾಲಿ ಪೆÇಯ್ಯತ್ತಬೈಲ್ ಉಪಸ್ಥಿತರಿದ್ದರು.

ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ಉಚಿತ 300 ಕನ್ನಡಕ ಹಾಗೂ ತೆಂಗಿನ ಗಿಡಗಳನ್ನು ವಿತರಿಸಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here