Saturday 4th, February 2023
canara news

ಶ್ರೀನಿವಾಸ ವಿಶ್ವವಿದ್ಯಾಲಯ ಮಂಗಳೂರು ಮಾರ್ಗದರ್ಶಕ ಮಂಡಳಿ ಸದಸ್ಯರಾಗಿ ಡಾ| ವಿರಾರ್ ಬಿ.ಶಂಕರ್ ಶೆಟ್ಟಿ (ಮುಂಬಯಿ) ನೇಮಕ

Published On : 21 Jan 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.21: ಕರ್ನಾಟಕ ಕರಾವಳಿಯ ಮಂಗಳೂರು ಅಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀನಿವಾಸ ವಿಶ್ವವಿದ್ಯಾಲಯದ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿ ಮುಂಬಯಿಯಲ್ಲಿನ ಹಿರಿಯ ಉದ್ಯಮಿ ಡಾ| ವಿರಾರ್ ಬಿ.ಶಂಕರ್ ಶೆಟ್ಟಿ ನೇಮಕ ಗೊಂಡಿದ್ದಾರೆ.

ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‍ನಲ್ಲಿ ಇತ್ತೀಚೆಗೆ (ಜ.16) ಭೇಟಿಯನ್ನೀಡ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಅವರನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

 

ಜೀವನದಲ್ಲಿ ನನಗೆ ಎಷ್ಟು ಬೇಕು ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ಆದರೆ ಯಾರಿಗೆ ಶಿಕ್ಷಣವಿದೆಯೋ ಅವರು ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ನನಗೆ ಅನಿಸುತ್ತದೆ. ಹಾಗಾಗಿ ಶಿಕ್ಷಣ ಸಂಸ್ಥೆ ಆರಂಭಿಸಿ ಸಮಾಜ ಸೇವೆ ಮಾಡುತ್ತಿರುವುದು ಡಾ| ಸಿ.ಎ.ಎ.ರಾಘವೇಂದ್ರ ರಾವ್ ಕಾರ್ಯ ಶ್ಲಾಘನೀಯ ಎಂದು ವಿರಾರ್ ಶಂಕರ್ ಸನ್ಮಾನ ಸ್ವೀಕರಿಸಿ ಹೇಳಿದರು.

ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ| ಎ. ಶ್ರೀನಿವಾಸ್ ರಾವ್ ಸ್ವಾಗತಿಸಿ ವಿರಾರ್ ಶಂಕರ್ ಶೆಟ್ಟಿ ಅವರು ಯಶಸ್ವಿ ವೃತ್ತಿಜೀವನಕ್ಕೆ ಮಾದರಿ ಆಗಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಎ.ಎ.ರಾಘವೇಂದ್ರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಭಿವೃದ್ಧಿಗೆ ನಮಗೆ ಅನುಭವ ಬೇಕು. ಡಾ. ವಿರಾರ್ ಶಂಕರ್ ಬಿ. ಶೆಟ್ಟಿ ಅನುಭವವು ವಿದ್ಯಾರ್ಥಿಗಳ ಬೆಳವಣಿಗೆಗೆ ನಮಗೆ ಬೇಕು ಮತ್ತು ಆ ನಂಬಿಕೆ ನನ್ನಲ್ಲಿದೆ ಹಾಗೂ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಶ್ರೀನಿವಾಸ ಯೋಗ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಗೋಪಾಲ ಆಚಾರ್ ಮಾತನಾಡಿ, ಜೀವನದಲ್ಲಿ ವಿಕಸನಗೊಳ್ಳಲು ಸಾಹಿತ್ಯ ಓದಬೇಕು. ವಿಕಾಸಕ್ಕೆ ಅಡ್ಡಿಯಾಗುವ ಸಾಹಿತ್ಯದಿಂದ ದೂರವಿರಬೇಕು. ದೇವರು ಕೊಟ್ಟ ಶಕ್ತಿಯನ್ನು ಅಧ್ಯಯನಕ್ಕೆ ಪ್ರಾಮಾಣಿಕವಾಗಿ ಬಳಸಿದಾಗ, ದೇವರ ಶಕ್ತಿಯು ವ್ಯಕ್ತಿಯ ಬೆಳವಣಿಗೆಗೆ ನೆರವಾಗುತ್ತದೆ ಎಂದರು.

ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ವಿಭಾಗ ಮತ್ತು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಡೀನ್‍ಗಳು ಉಪಸ್ಥಿತರಿದ್ದು ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಪಿ.ಎಸ್.ಐತಾಳ್ ಸನ್ಮಾನಿತರ ಪ್ರಶಸ್ತಿಪತ್ರ ವಾಚಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ತ್ರಾರ್ ಡಾ| ಅಜಯ್ ಕುಮಾರ್ ಅವರು ಶ್ರೀನಿವಾಸ ವಿಶ್ವವಿದ್ಯಾಲಯವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಪೆÇ್ರ| ಶ್ರೀನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಡಾ| ಶ್ರೀನಿವಾಸ್ ಮಯ್ಯ ವಂದಿಸಿದರು.
More News

ಶ್ರೀ ಸುಬ್ರಹ್ಮಣ್ಯ ಮಠÀದ ಬ್ರಹ್ಮಕಲಶಾಭಿಷೇಕ ; ಸಂಸದ ರಾಹುಲ್ ಶೆವ್ಹಾಲೆ ಭೇಟಿ
ಶ್ರೀ ಸುಬ್ರಹ್ಮಣ್ಯ ಮಠÀದ ಬ್ರಹ್ಮಕಲಶಾಭಿಷೇಕ ; ಸಂಸದ ರಾಹುಲ್ ಶೆವ್ಹಾಲೆ ಭೇಟಿ
ಡಾ| ಸೈಯ್ಯದ್ ನಝೀರ್‍ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ
ಡಾ| ಸೈಯ್ಯದ್ ನಝೀರ್‍ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ

Comment Here