Saturday 2nd, December 2023
canara news

ಶ್ರೀ ಸುಬ್ರಹ್ಮಣ್ಯ ಮಠÀದ ಬ್ರಹ್ಮಕಲಶಾಭಿಷೇಕ ; ಸಂಸದ ರಾಹುಲ್ ಶೆವ್ಹಾಲೆ ಭೇಟಿ

Published On : 29 Jan 2023   |  Reported By : Rons Bantwal


`ಭಕ್ತಿ ಲಹರಿ' ಪ್ರಸ್ತುತ ಪಡಿಸಿದ ಪುತ್ತೂರು ನರಸಿಂಹ ನಾಯಕ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‍ಬಿಐ), ಜ.26: ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗ ಸುಬ್ರಹ್ಮಣ್ಯ ಪ್ರತಿಷ್ಠಾಪಿತ ಶ್ರೀ ಸುಬ್ರಹ್ಮಣ್ಯ ಮಠÀದಲ್ಲಿ ಜರುಗುತ್ತಿರುವ ಬ್ರಹ್ಮಕಲಶಾಭಿಷೇಕ ಉತ್ಸವದ ಚತುರ್ಥ ದಿನವಾದ ಇಂದಿಲ್ಲಿ ಶುಕ್ರವಾರ ದಕ್ಷಿಣ ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಶೆವ್ಹಾಲೆ ಭಾಗವಹಿಸಿದ್ದರು.

ರಾಹುಲ್ ಶೆವ್ಹಾಲೆ ಆಗಮಿಸುತ್ತಿದ್ದಂತೆಯೇ ಶ್ರೀ ನಾಗಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿತ ಶ್ರೀ ನಾಗದೇವರ ದರ್ಶನಗೈದು ಪ್ರಾರ್ಥನೆ ಸಲ್ಲಿಸಿದರು. ಪುರೋಹಿತರು ತೀರ್ಥ ಪ್ರಸಾದವನ್ನಿತ್ತು ಹರಸಿದರು. ಬಳಿಕ ಸಂಸದ ಶೆವ್ಹಾಲೆ ಅವರು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಭೇಟಿಗೈದರು. ಶ್ರೀಪಾದರು ರಾಹುಲ್ ಶೆವ್ಹಾಲೆ, ಉಪಸ್ಥಿತ ಎನ್‍ಸಿಪಿ ಯುವನಾಯಕ ಕಳತ್ತೂರು ವಿಶ್ವನಾಥ ಶೆಟ್ಟಿ, ನ್ಯಾಯವಾದಿ ರವಿ ಎಸ್.ಕೋಟ್ಯಾನ್, ಉದ್ಯಮಿಗಳಾ ದ ಡಾ| ಶಿವರಾಮ ಕೆ.ಭಂಡಾರಿ, ಅನುಶ್ರೀ ಎಸ್.ಭಂಡಾರಿ, ಡಾ| ವಿನೋದ್ ಛೋಪ್ರಾ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ನಾಗೇಶ್ ರಾವ್, ಕಾರ್ಯದರ್ಶಿ ರಮೇಶ್ ಎಂ.ರಾವ್, ಐಐಟಿಸಿ ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಳ್, ಶ್ರೀಧರ್ ರಾವ್ ಜೋಕಟ್ಟೆ, ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ, ಸುಭಾಶ್ ಶಿರಿಯಾ, ಮುರಳೀ ಭಟ್ ಡೊಬಿವಿಲಿ, ಪರೇಲ್ ಶ್ರೀನಿವಾಸ ಭಟ್ ಸೇರಿದಂತೆ ಗಣ್ಯಭಕ್ತಾಧಿಗಳಿಗೆ ಶಾಲು ಹೊದಿ ಸಿ ಮಂತ್ರಾಕ್ಷತೆಯನ್ನೀತ್ತು ಅನುಗ್ರಹಿಸಿದರು.

ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲಾ ಎಸ್.ಉರ್ವಾಳ್ ಹಾಗೂ ಹೊಟೇಲು ಉದ್ಯಮಿ ಬಿ.ಆರ್ ಶೆಟ್ಟಿ ಪರಿವಾರದ ಪ್ರಯೋಜಕತ್ವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪುರಂದರದಾಸ ಪ್ರಸಿದ್ಧಿಯ ಸಂಗೀತಕಾರ ಪುತ್ತೂರು ನರಸಿಂಹ ನಾಯಕ್ `ಭಕ್ತಿ ಲಹರಿ' ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಸುಬ್ರಹ್ಮಣ್ಯ ಮಠÀ ಮುಂಬಯಿ ಶಾಖೆಯ ವ್ಯವಸ್ಥಾಪಕ ವಿಷ್ಣು ಕಾರಂತ್ ಆಮಂತ್ರಣವನ್ನಿತ್ತು ಸಂಸದರನ್ನು ಬರಮಾಡಿ ಕೊಂಡರು. ವಿದ್ವಾನ್ ಹೆರ್ಗ ರವೀಂದ್ರ ಭಟ್ ಕಾರ್ಯಕ್ರಮದ ವಿವರವನ್ನಿತ್ತರು. ಶ್ರೀಪ್ರಸಾದ್ ಭಟ್ ಧನ್ಯವದಿಸಿದರು.

 
More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here