Thursday 8th, May 2025
canara news

ಡಾ| ಸೈಯ್ಯದ್ ನಝೀರ್‍ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ

Published On : 29 Jan 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.26: ಪುತ್ತೂರು ನಿವಾಸಿ, ಮಂಗಳೂರು ಉದ್ಯಮಿ, ಒಳನಾಡು ಮೀನುಗಾರಿಕೆ, ಮೂನು ತಳಿ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ತಜ್ಞ, ಸುಗಂಧ ಮತ್ತು ಸುಗಂಧ ದ್ರವ್ಯಗಳ ಸಲಹೆಗಾರ ಹಾಗೂ ಹರ್ಮಲ್ ಬಖೂರ್ ವಿಜ್ಞಾನಿ ಡಾ| ಎಂ.ಸೈಯ್ಯದ್ ನಝೀರ್ ಅವರಿಗೆ ಇತ್ತೀಚೆಗೆ ದಿಲ್ಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಮ್ ಆರ್ಗನೈಜೇಶನ್ ಈ ಬಾರಿಯ ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.

ನವದೆಹಲಿಯ ಲೋಧಿ ರಸ್ತೆಯ ಚಿನ್ಮಯ ಮಿಷನ್ ಸಭಾಗೃಹದಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ನಝೀರ್ ಅವರಿಗೆ ಕೇಂದ್ರ ಸಚಿವರು, ಸಂಸದರು ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.

ಸಮಾರಂಭದಲ್ಲಿ ಕೇಂದ್ರ ಸಚಿವ ರಾಮದಾಸ ಅಠವಳೆ, ರಾಮೇಶ್ವರ ತೆಲಿ, ಫಗ್ಗನ್ ಸಿಂಗ್ ಕುಲಸ್ತೆ, ಕೈಲಾಸ್ ಚೌಧರಿ, ಜಮ್ಮು ಕಾಶ್ಮೀರ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ದರಕ್ಷಣ್ ಅಂದ್ರಾಬಿ. ಸಂಸದರಾದ ಎಸ್.ಪಿ ಸಿಂಗ್ ಬಗೇಲ್, ಸುನಿತಾ ರಾಜ್‍ಹನ್ಸ್, ಅರ್ಜುನ್‍ಲಾಲ್ ಮೀನಾ, ಚಂದ್ರ ಪ್ರಕಾಶ್ ಜೋಶಿ, ಗಿರೀಶ್‍ಚಂದ್ರ, ಪ್ರಿನ್ಸ್ ರಾಜ್, ಸುನಿಲ್ ಗಾಯಕ್ವಾಡ್, ಬಾಲಿವುಡ್ ನಟ ಆದಿಲ್ ಖಾನ್ ದುರಾನಿ ಸಹಿತ ಇತರರು ಉಪಸ್ಥಿತರಿದ್ದರು.

ಬಾಲಿವುಡ್, ಕ್ರೀಡೆ, ಸಮಾಜಸೇವೆ, ಮಾನವ ಕಲ್ಯಾಣ, ಪತ್ರಿಕೋದ್ಯಮ, ಮಹಿಳಾ ಸಬಲೀಕರಣ, ಆರೋಗ್ಯ, ಪರಿಸರ ಇತ್ಯಾದಿ ವಿಭಾಗಗಳಲ್ಲಿ ಈ ಪ್ರಶಸ್ತಿ ಸಂಘಟಿಸಲಾಗಿದೆ.

ಡಾ| ಎಂ.ಎಸ್ ನಝೀರ್ ಅವರು ಜೇಮ್ಸ್ ಗೇಟ್ ಜ್ಯುವೆಲ್ಲರ್ಸ್(ಆಸ್ಟ್ರೋ ಜೇಮ್ಸ್) ಮತ್ತು ಅಲ್ ಖಿಝಾರ್ ಪರ್ಫೂಮ್ ಬ್ರಾಂಡ್‍ನ ಮಾಲಕರಾಗಿದ್ದಾರೆ. ಕಳೆದ 45 ವರ್ಷಗಳಿಂದ ಪರಿಸರ, ಘನತ್ಯಾಜ್ಯ, ಮೀನುಗಾರಿಕೆ, ಬೋಟಿಂಗ್, ಪ್ಲಾಸ್ಟಿಕ್ ಮುಕ್ತ ಪರಿಸರ, ಮರಗಳು ಮತ್ತು ನೀರಿನ ಕಾಳಜಿ ವಹಿಸಿ, 100ಕ್ಕೂ ಹೆಚ್ಚು ಕೆರೆ ಕೊಳಗಳನ್ನು ಸ್ವಚ್ಛಗೊಳಿಸಿದ್ದಾರೆ. ಇವರ ಬಹುಮುಖ ಸೇವೆ ಪರಿಗಣಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here