Saturday 2nd, December 2023
canara news

ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ನಿಯೋಗದಿಂದ ಮುಖ್ಯಮಂತ್ರಿ ಶಿಂಧೆ-ಅಬಕಾರಿ ಸಚಿವರ ಭೇಟಿ

Published On : 03 Feb 2023   |  Reported By : Rons Bantwal


ಮುಂಬಯಿ, ಫೆ.02: ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ನಿಯೋಗವು ಅಧ್ಯಕ್ಷ ಡಾ| ವಿರಾರ್ ಬಿ.ಶಂಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಮಂಗಳವಾರ (ಜ.31) ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಅಬಕಾರಿ ಸಚಿವ ಶಂಭುರಾಜ್ ಶಿವಾಜಿರಾವ್ ದೆಸಾಯಿ ಅವರನ್ನು ಭೇಟಿ ಮಾಡಿ ರಾಜ್ಯದ ಹೊಟೇಲು ಉದ್ಯಮದ ಸಮಸ್ಯೆಗಳ ಕುರಿತಂತೆ ಮಾಹಿತಿಯನ್ನಿತ್ತರು.

ವಿೂರಾ ಭಯಂದರ್ ಶಾಸಕಿ ಗೀತಾ ಭರತ್ ಜೈನ್ ಅವರ ಸಹಯೋಗ, ಪ್ರಯತ್ನದಿಂದ ಮಹಾರಾಷ್ಟ್ರದಲ್ಲಿನ ಹೋಟೆಲ್ ಉದ್ಯಮ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಗಿದ್ದು ಮಹಾರಾಷ್ಟ್ರದಲ್ಲಿನ ಹೊಟೇಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಫೆಡರೇಶನ್ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿತು.

ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಹೊಟೇಲು ಉದ್ಯಮವು ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ಲಾಕ್‍ಡೌನ್ ಸಮಯದಲ್ಲಿ ಹೊಟೇಲುಗಳು ಸಂಪೂರ್ಣವಾಗಿ ವ್ಯವಹಾರ ಮುಚ್ಚಿರುವ ಕಾರಣ ಭರಿಸಲಾಗದಷ್ಟು ನಷ್ಟ ಅನುಭವಿಸಿದೆ. ಈ ವರ್ಷ ಅಬಕಾರಿ ಪರವಾನಗಿ ಶುಲ್ಕದಲ್ಲಿ ಯಾವುದೇ ಹೆಚ್ಚುವರಿ ಹೊರೆಯನ್ನು ಹೊರಲು ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ಆದ್ದರಿಂದ 2023-24ರ ಅವಧಿಗೆ ಈ ವರ್ಷ ಅಬಕಾರಿ ಪರವಾನಗಿ ಶುಲ್ಕವನ್ನು ಏರಿಕೆ ಮಾಡದಂತೆ ರಾಜ್ಯ ಸರಕಾರವನ್ನು ವಿನಂತಿಸಿ ಮನವಿ ಸಲ್ಲಿಸಲಾಯಿತು ಎಂದು ಫೆಡರೇಶನ್ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ತಿಳಿಸಿದರು.

ಫೆಡರೇಶನ್‍ನ ಪ್ರ| ಕಾರ್ಯದರ್ಶಿ ದುರ್ಗಾಪ್ರಸಾದ್ ಸಿ.ಸಾಲಿಯಾನ್, ಉಪಾಧ್ಯಕ್ಷರುಗಳಾದ ದಯಾನಂದ ಶೆಟ್ಟಿ ಮತ್ತು ಆನಂದ್ ಬಾಕ್ಲೆ, ಜೊತೆ ಕಾರ್ಯದರ್ಶಿಗಳಾದ ಬಾಬು ಶೆಟ್ಟಿ ಪೆರಾರ ಮತ್ತು ಭಾಸ್ಕರ್ ಶೆಟ್ಟಿ, ಸಲಹೆಗಾರ ಕಳತ್ತೂರು ವಿಶ್ವನಾಥ ಶೆಟ್ಟಿ , ಕಲ್ಯಾಣ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ರಾಕೇಶ್ ಶೆಟ್ಟಿ, ವಿೂರಾ ಭಯಂದರ್ ಹೊಟೇಲ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಮಧುಕರ ಶೆಟ್ಟಿ, ಸೆಲ್ಲು ಹೋಟೆಲ್ಸ್ ಅಸೋಸಿಯೇಶನ್‍ನ ಬುಬುರಾವ್ ಸೊಹ್ನವಾನೆ, ಅಹ್ಮದಾಬಾದ್ ನಗರ ಹೊಟೇಲ್ ಅಸೋಸಿಯೇ ಶನ್‍ನ ಬಲ್ವಂತ್ ಸಿಂಗ್ ಬಾತ್ರಾ, ವಿನೋದ್ ಮೋರೆ ನಿಯೋಗದಲ್ಲಿ ಉಪಸ್ಥಿತರಿದ್ದರು.
More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here