Friday 26th, April 2024
canara news

ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗ ನೆರವೇರಿಸಿದ ಅರಸಿನ ಕುಂಕುಮ ಕಾರ್ಯಕ್ರಮ

Published On : 02 Feb 2023   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.31: ಭಂಡಾರಿ ಸಮುದಾಯ ದವರು ತುಂಬಾ ಉತ್ಸಾಹಿಗಳು, ಪ್ರತಿಭಾವಂತರು ಮತ್ತು ಸ್ನೇಹಮಯಿಗಳು ಎನ್ನಲು ಹೆಮ್ಮೆಯಾಗಿತ್ತಿದೆ. ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಪಾತ್ರ ವಹಿಸುದರಿಂದ ಸಮುದಾಯದ ಅಭಿವೃದ್ಧಿ ಕಾಣುವುದು. ಇಂದಿನ ಯುಗದಲ್ಲಿ ಮಹಿಳೆಯರು ಸರಿ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಜ್ವಲಿಸಿದ್ದಾರೆ ಎಂದು ಅನುರಾಧ ಕುಲಕರ್ಣಿ ನುಡಿದರು.

ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು ಕಳೆದ ಆದಿತ್ಯವಾರ ಮುಲುಂಡ್ ಪಶ್ಚಿಮದ ಸರಸ್ವತಿವಾಡಿಯಲ್ಲಿನ ಝೇವೆರ್ ಹಾಲ್‍ನ 2ನೇ ಮಹಡಿಯಲ್ಲಿರುವ ಶ್ರೀ ಕುಚ್ ದೇಶಿಯಾ ಸರಸ್ವತ್ ಸಭಾಗೃಹದಲಿ ಆಯೋಜಿಸಿದ್ದ 2023ನೇ ವಾರ್ಷಿಕ ಮಕರ ಸಂಕ್ರಮಣ, ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಅನುರಾಧ ಕುಲಕರ್ಣಿದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ರಮೇಶ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಪಿ.ಭಂಡಾರಿ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪ ಕಾರ್ಯಾಧ್ಯಕ್ಷೆ, ಜಯಸುಧಾ ಟಿ.ಭಂಡಾರಿ, ಕಾರ್ಯದರ್ಶಿ ರೇಖಾ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿüಗಳನ್ನು ಸತ್ಕರಿಸಿ ಗೌರವಿಸಿದರು.

ಸಂಗೀತ ಸ್ಪರ್ಧೆಯ ತೀರ್ಪುದಾರರಾಗಿ ಉಪಸ್ಥಿತರಿದ್ದ ಸುಮಿತ್ರ ಉಮೇಶ್ ಗೌಡ ಸಂಘ ಸಂಸ್ಥೆಗಳಲ್ಲಿ ಜನರ ಹುಮ್ಮಸು, ಬೆಳವಣಿಗೆ ಹಾಗೂ ಸಂಘಟನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ತ್ರೀಕುಲಕ್ಕೆ ಹೆಮ್ಮೆ ತರುವ ವಿಚಾರಧಾರೆಯನ್ನು ಸೃಷ್ಟಿಸಬೇಕು ಎಂದು ಶಾಲಿನಿ ಭಂಡಾರಿ ಕರೆಯಿತ್ತರು.

ಸಮಿತಿಯ ಗೌ| ಪ್ರ| ಕಾರ್ಯದರ್ಶಿ ರಮೇಶ್ ಭಂಡಾರಿ, ಗೌ| ಕೋಶಾಧಿಕಾರಿ ಶೀನ ಭಂಡಾರಿ ವಡಾಲ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ, ಮಾಜಿ ಅಧ್ಯಕ್ಷ ನ್ಯಾ| ಶೇಖರ್ ಭಂಡಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳೆಯರನೇಕರು ಉಪಸ್ಥಿತರಿದ್ದರು.

ಸಾಂಸೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಸ್ಪರ್ಧೆ, ಮಹಿಳೆಯರಿಗಾಗಿ ಗೇಮ್ಸ್‍ಗಳನ್ನು ನಡೆಸಿದರು. ಮಹಿಳಾ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಪಲ್ಲವಿ ರಂಜಿತ್ ಭಂಡಾರಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here