Saturday 27th, July 2024
canara news

ಟಿಎಂಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿತ ಮಂಗಳೂರು ಲಿಟ್ ಫೆಸ್ಟ್-2023

Published On : 19 Feb 2023   |  Reported By : Rons Bantwal


ಪೆÇ್ರ| ತುಕಾರಾಮ ಪೂಜಾರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಮುಂಬಯಿ (ಆರ್‍ಬಿಐ), ಫೆ.18: ಭಾರತ್ ಫೌಂಡೇಶನ್ ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯಡಿ ತನ್ನ ಐದನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್‍ನ್ನು ಇಂದಿಲ್ಲಿ ಶನಿವಾರ ಮಂಗಳೂರು ನಗರದ ಟಿಎಂಎ ಪೈ ಇಂಟರ್‍ನ್ಯಾಶನಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸಿತು.

ಸಮಾರಂಭದಲ್ಲಿ ನಿಟ್ಟೆ ವಿದ್ಯಾನಿಲಯದ ಕುಲಪತಿ ಡಾ| ಎನ್. ವಿನಯ ಹೆಗ್ಡೆ, ಮೈಥಿüಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ಸ್ವರಾಜ್ಯ ಮಾಧ್ಯಮದ ಸಂಪಾದಕೀಯ ನಿರ್ದೇಶಕ ಆರ್. ಜಗನ್ನಾಥನ್ ಅತಿಥಿü ಅಭ್ಯಾಗತರಾಗಿ ಉಪಸ್ಥಿತರಿದ್ದು ಸಂಸ್ಕೃತಿ ಪರಂಪರೆ, ತುಳು ಭಾಷೆ ಮತ್ತು ಸಾಹಿತ್ಯ ಮತ್ತು ಇತಿಹಾಸದ ಸಂರಕ್ಷಣಾ ಕೊಡುಗೆಗಾಗಿ ಬಂಟ್ವಾಳ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಕೇಂದ್ರದ ಅಧ್ಯಕ್ಷ ಪೆÇ್ರ| ಡಾ| ತುಕಾರಾಮ ಪೂಜಾರಿ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಿ ಅವರಿಗೆ ವಾರ್ಷಿಕ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಉತ್ಸವದ ಅಂಗವಾಗಿ 16 ಪುಸ್ತಕ ಮಳಿಗೆಗಳಿದ್ದು ತುಳು ಅಕ್ಷರ ಕಲಿಕಾ ಕಾರ್ಯಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಲೇಖಕರೊಂದಿಗೆ ವಿವಿಧ ವಿಷಯಗಳಲ್ಲಿ ಗೋಷ್ಠಿ, ಸಂವಾದಗಳು ನಡೆಸಲ್ಪಟ್ಟವು. ಅನೇಕ ಸಂಶೋಧಕರು, ವಾಗ್ಮಿಗಳು, ವಿಷಯ ಪರಿಣತರು, ಸಾಹಿತಿಗಳು ಆಗಮಿಸಿ ಸಂವಾದಗಳನ್ನು ನಡೆಸಿದರು. ಪ್ರತಿ ವಿಚಾರಗೋಷ್ಠಿಗಳ ಕೊನೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿತ ರಸಪ್ರೆಶ್ನೆ ನಡೆಸಲಾಗಿದ್ದು ಮಧ್ಯಾಂತರದಲ್ಲಿ ಎರಡು ಸಿನೆಮಾಗಳನ್ನೂ ಪ್ರದರ್ಶಿಸಲಾಯಿತು. ಹರಟೆ ಕಟ್ಟೆ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮದ ವಿಶೇಷವಾಗಿತ್ತು.

ಫೌಂಡೇಶನ್‍ನ ಟ್ರಸ್ಟಿ ಸುನೀಲ್ ಕುಲ್ಕರ್ಣಿ, ಆಯೋಜಕ ಸಮಿತಿ ಸದಸ್ಯರಾದ ಸುಜಿತ್ ಪ್ರತಾಪ್, ಶ್ರೀರಾಜ್ ಗುಡಿ, ಸಂಜಯ್ ಪ್ರಭು ಈಶ್ವರ್ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here