Thursday 8th, May 2025
canara news

ಮೂಡುಬಿದಿರೆ ಶ್ರೀ ಚಂದ್ರಶೇಖರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ, ಸಂಮಾನ ಸಮಾರಂಭ

Published On : 19 Feb 2023   |  Reported By : Rayee Rajkumar


ಮೂಡುಬಿದಿರೆಯ ಪುರಾಣ ಪ್ರಸಿದ್ಧ ಐತಿಹಾಸಿಕ ಅತ್ಯಂತ ಪ್ರಮುಖ ಹಾಗೂ ಎಲ್ಲಾ ಕಡೆಯೂ ಸ್ಥಳ ಪ್ರಶ್ನೆಗಳಲ್ಲಿ ಪ್ರಮುಖವಾಗಿ ಆರಾಧಿಸಿಕೊಂಡು ಬರಬೇಕು ಎಂದು ಹೇಳಲ್ಪಡುವ ದೊಡ್ಡ ಮನೆ ಶ್ರೀ ಚಂದ್ರಶೇಖರ ದೇವಾಲಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಫೆಬ್ರವರಿ 18 ರಂದು ಬೆಳಿಗ್ಗೆಯಿಂದ ಆರಂಭವಾಗಿ ರಾತ್ರಿ ಇಡೀ ಗಣಯಾಗ, ನವಕ ಕಲಶಾಭಿಷೇಕ, ರುದ್ರಾಭಿಷೇಕ,ಅನ್ನ ಪ್ರಸಾದ ವಿತರಣೆ, ಹರಿನಾಮ ಸಂಕೀರ್ತನೆ, ಸ್ಥಳೀಯ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಸೇವೆ, ರಂಗಪೂಜೆ,ಬಂಡಿ ರಥದಲ್ಲಿ ಶ್ರೀ ದೇವರ ಉತ್ಸವ, ದರ್ಶನ ಬಲಿ, ಅರ್ಘ್ಯ ಪ್ರದಾನ,ಜಾಮ ಪೂಜೆ ಗಳು ನೆರವೇರಿದವು.

ಇದೇ ಸಂದರ್ಭದಲ್ಲಿ ದೇವಾಯದಲ್ಲಿ ಹಲವಾರು ವರ್ಷಗಳಿಂದ ಪೌರೋಹಿತ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ವೇದಮೂರ್ತಿ ಪಾವಂಜೆ ಜಗದೀಶ ಉಪಾಧ್ಯಾಯ ಹಾಗೂ ಪಾಕಶಾಸ್ತ್ರ ಪ್ರವೀಣ ಮುಂಡ್ಕೂರು ಯೋಗೀಶ್ ರಾವ್ ರನ್ನು ಶಾಲು ಹೊದಿಸಿ,ಬೆಲೆ ಮಂತ್ರಾಕ್ಷತೆ, ಹಣ್ಣು ಹಂಪಲು, ದೇವರ ಪ್ರಸಾದ ಗಳಿತ್ಯಾದಿ ಸಕಲ ಸಂಭ್ರಮಗಳೊಂದಿಗೆ ಭಕ್ತ್ಯಾದಿಗಳ ಎದುರು ದೇವಾಲಯದ ಅನುವಂಶಿಕ ಅರ್ಚಕ ರತ್ನಾಕರ್ ಭಟ್ ದಂಪತಿ ಮಕ್ಕಳು ಸಂಮಾನಿಸಿದರು. ರಾಯೀ ರಾಜಕುಮಾರ್ ಮೂಡುಬಿದಿರೆ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here