Saturday 2nd, December 2023
canara news

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ವಿಶೇಷ ಸಭೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

Published On : 19 Feb 2023   |  Reported By : media release


ಉಡುಪಿ ಸೌತ್ ಕೆನರಾ ಫೋಟೋಗ್ರಾಫ್ ಅಸೋಸಿಯೇಷನ್ ಉಡುಪಿ ವಲಯದ ವಿಶೇಷ ಸಭೆ ಉಡುಪಿ ಜಗನ್ನಾಥ ಸಭಾಭವನದಲ್ಲಿ ವಲಯ್ಯಾಧ್ಯಕ್ಷ ಜನಾರ್ದನ್ ಕೊಡುವೂರು ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಆನಂದ ಎನ್. ಕುಂಪಲರವರು ಜಿಲ್ಲಾ ಕಟ್ಟಡ ರಚನೆ ಬಗ್ಗೆ ಮಾಹಿತಿ ನೀಡಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದರು. ಸಭೆಯಲ್ಲಿ ಸಲಹಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ಚೌಟ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಕರ ಸಾಲಿಯಾನ್, ಜೊತೆ ಕಾರ್ಯದರ್ಶಿ ಅಜಯ್ ಮಂಗಳೂರು, ವಾಮನ ಪಡುಕೆರೆ, ಪತ್ರಿಕಾ ಪ್ರತಿನಿಧಿ ಉಮೇಶ್, ಮಾಜಿ ಕಾರ್ಯದರ್ಶಿ ಹರೀಶ್ ಅಡ್ಯಾರ್ ಆಗಮಿಸಿದ್ದರು.

ಉಪಾಧ್ಯಕ್ಷ ಪ್ರವೀಣ್ ಹೂಡೆ, ಕಟ್ಟಡ ಸಮಿತಿ ಸದಸ್ಯ ಸುಂದರ ಪೂಜಾರಿ ಕೊಳಲಗಿರಿ, ಉಡುಪಿ ವಲಯದ ಮಾಜಿ ಅಧ್ಯಕ್ಷರುಗಳು, ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ ಸ್ವಾಗತಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು. ದಿವಾಕರ್ ಹಿರಿಯಡ್ಕ ಪ್ರಾಸ್ತಾವಿಸಿದರು. ಸುರಭಿ ಸುಧೀರ್ ಶೆಟ್ಟಿ ಧನ್ಯವಾದವಿತ್ತರು.




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here