Friday 8th, December 2023
canara news

ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋ

Published On : 24 Feb 2023   |  Reported By : Rons Bantwal


ಮುಂಬಯಿ, ಫೆ.24: ಅಪ್ಪಾಜಿ ಬೀಡು ಫೌಂಡೇಶನ್(ರಿ) ಮತ್ತು ಐ ಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು 18-02-2022 ರಂದು ಲೋಕಾರ್ಪಣೆ ಮಾಡಲಾಯಿತು.

ಅಪ್ಪಾಜೀ ಬೀಡುವಿನ ಮಹಿಳಾ ವಿಭಾಗದವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು, ಮುಖ್ಯ ಅತಿಥಿಯಾಗಿ ಟೀಂ ಐಲೇ ಸಾದಕ ಸಾಹಿತಿ ಶಾಂತ ರಾಮ ಶೆಟ್ಟಿ ಅವರು, ಗೌರವ ಅತಿಥಿsಗಳಾಗಿ ಗೋಪಾಲ್ ಪಟ್ಟೆ ಮತ್ತು ಯುಕೆಯ ವಿವೇಕಾನಂದ ಮಂಡೆಕರ ಅವರ ಉಪಸ್ಥಿತಿಯ ಜೊತೆ ಮುಂಬಯಿಯ ಶ್ರೇಷ್ಠ ಗುರುಸ್ವಾಮಿಗಳಾದ ರಮೇಶ್ ಗುರುಸ್ವಾಮಿ, ಶಾಂಭವಿ ಗುರುಸ್ವಾಮಿ, ರಾಜಮಣಿ ಸ್ವಾಮಿ, ಚಂದ್ರಹಾಸ ಸ್ವಾಮಿ ಮತ್ತು ಸತೀಶ್ ಗುರುಸ್ವಾಮಿ ಅವರು ಮತ್ತು ಅಪ್ಪಾಜೀ ಬೀಡಿನ ಟ್ರಸ್ಟಿ ಇವರೆಲ್ಲರು ಸೇರಿ ದೀಪ ಬೆಳಗಿಸಿದರು. ಸ್ವಾಮೀಜಿಯವರು ಭಕ್ತಿಗೀತೆ ಲೋಕಾರ್ಪಣೆ ಮಾಡಿ, ಆಶಿರ್ವಾದ ಮಾಡಿದರು, ಸ್ವಾಮೀಜಿ ವರ್ಯರಿಗೆ ಗುರುಕಾಣಿಕೆ ನೀಡಿ ಗೌರವಿಸಲಾಯಿತು. ಈ ಭಕ್ತಿಗೀತೆ ಹಾಡಿದವರಿಗೆ ಮತ್ತು ತಾಂತ್ರಿಕ ವರ್ಗದವರಿU ಪಲಕ ನೀಡಿ ಗೌರವಿಸಲಾಯಿತು. ಶಕುಂತಲಾ ಶೆಟ್ಟಿ ಅವರು ಹಸಿರು ಬೆಟ್ಟದ ಸಾಹಿತ್ಯ, ಸಂಗೀತ, ಹಾಡುಗಾರರ ಬಗ್ಗೆ ಸುವಿಸ್ತಾರವಾಗಿ ತಮ್ಮ ಮಾತುಗಳನ್ನು ಪ್ರಸ್ತುತಪಡಿಸಿದರು.

ಭಕ್ತಿಗೀತೆಯ ಸಾಹಿತ್ಯ ಬರೆದ ಸೂರಿ ಮತ್ತು ಅವರ ಪರಿವಾರವನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಾರಣಿ ಭೂತರಾದ ಸುರೇಶ್ ಕೇದಗೆ ಅವರನ್ನು ಗೌರವಿಸಲಾಯಿತು. ಅಪ್ಪಾಜಿ ಬೀಡಿನ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮತ್ತು ಮಹಿಳಾ ವಿಭಾಗ ಕವಿತಾ ಶೆಟ್ಟಿಯವರನ್ನು ಗೌರವಿಸಲಾಯಿತು. ಜೊತೆಗೆ ರಮೇಶ್ ಗುರುಸ್ವಾಮಿಯ ಅವಳಿ ಮಕ್ಕಳು ಹಾಡಿದ ಅಪ್ಪಾಜಿ ಬೀಡಿನ ಹಾಡನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಅಪ್ಪಾಜಿ ಬೀಡಿನ ಎಲ್ಲಾ ಕಾರ್ಯಕರ್ತರು ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು ,ಕರ್ನಾಟಕ ಸಂಘದ ಭರತ್ ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ಕವಿ ವಿಶ್ವನಾಥ್ ಪೇತ್ರಿ, ರಂಗ ನಟರಾದ ಮೋಹನ್ ಮಾರ್ನಾಡ್, ಅಹಲ್ಯ ಬಲ್ಲಾಳ್, ಮನೋಹರ ನಂದಳಿಕೆ, ಅವಿನಾಶ್ ಕಾಮತ್ ಮತ್ತು ರಮೇಶ್ ಶಿವಪುರ್ ನಮನ ಫ್ರೆಂಡ್ಸನ ಪ್ರಭಾಕರ್ ದಿವಾಕರ್, ಬಂಟರ ಸಂಘ ಸಿಟಿ ರೀಜನ್ ಅಧ್ಯಕ್ಷರಾದ ಶಿವರಾಮ್ ಶೆಟ್ಟಿ, ಆಶೋಕ್ ಪಕ್ಕಳ, ವಿಶ್ವನಾಥ್ ಶೆಟ್ಟಿ, ಸುಚಿತ್ರಾ ಶೆಟ್ಟಿ ಐಲೇಸಾದ ಹಾಡುಗಾರರಾz ಡಾ| ಪಲ್ಲವಿ, ರಾಶಿ, ರಮೇಶ್ ನಾರಯಣ, ವಿಜಯ ರಾಘವನ್, ಸುವಿದ್ ಸೂರಿ ಮಾರ್ನಾಡ್ ಇನ್ನಿತರರು ಭಾಗಿಯಾಗಿದ್ದರು, ರಘುನಾಥ್ ಶೆಟ್ಟಿ ಕಾಂದಿವಲಿ ಇವರು ಪೂರ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಪ್ಪಾಜೀ ಬೀಡಿನ ಸದಸ್ಯರು ಸಹಕಾರ ನೀಡಿದರು, ಅಪ್ಪಾಜೀ ಬೀಡಿನ ಅಧ್ಯಕ್ಷರನ್ನು ಸದಸ್ಯರನ್ನು ಐಲೇಸಾದ ಪರವಾಗಿ ಗೌರವಿಸಲಾಯ್ತು.

 
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here