Saturday 13th, April 2024
canara news

ನವದೆಹಲಿಯಲ್ಲಿ ಬ್ರಹ್ಮೋದ್ಯೋಗ-2023 ರಾಷ್ಟ್ರೀಯ ಸಮ್ಮೇಳನದಲ್ಲಿ

Published On : 05 Mar 2023   |  Reported By : Rons Bantwal


`ವೈದ್ಯ ಭೂಷಣ ಪುರಸ್ಕಾರ' ಮುಡಿಗೇರಿಸಿದ ಡಾ| ಸುರೇಶ್ ರಾವ್

ಮುಂಬಯಿ (ಆರ್‍ಬಿಐ), ಫೆ.28: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ದೆಹಲಿಯಲ್ಲಿ ಅಯೋಜಿಸಿದ ನಾಲ್ಕು ದಿನದ ಬ್ರಹ್ಮೋದ್ಯೋಗ-2023 ರಾಷ್ಟ್ರೀಯ ಸಮ್ಮೇಳನವು ಕಳೆದ ಶನಿವಾರ (ಫೆ.25) ಉದ್ಘಾಟನೆಗೊಂಡಿತು. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ| ಗೋವಿಂದ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನೇರವೇರಿದ ಸಮ್ಮೇಳನದಲ್ಲಿ ವೈದ್ಯಕೀಯ ಹಾಗೂ ಸಾಮಾಜಿಕ ಕೊಡುಗೆಯಾಗಿಸಿ ಅನುಪಮ ಸೇವೆಗೈದ ಮುಂಬಯಿ ಅಂಧೇರಿ ಪೂರ್ವದ ಸಂಜೀವಿಸಿ ಆಸ್ಪತ್ರೆಯ ಸಂಸ್ಥಾಪಕ, ಆಡಳಿತ ನಿರ್ದೇಶಕ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರಿಗೆ `ವೈದ್ಯ ಭೂಷಣ ಪುರಸ್ಕಾರ' ಪ್ರದಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿs ಅಭ್ಯಾಗತರುಗಳಾಗಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೋಬೆ, ಹರಿಯಾಣ ಸಂಸದ ರೋಹ್ಟಕ್ ಅರವಿಂದ್ ಕುಮಾರ್ ಶರ್ಮಾ, ದೆಹಲಿ ಸಂಸದ ಮನೋಜ್ ತಿವಾರಿ, ಆಲಿಗಡ್‍ಡ್ ಸಂಸದ ಸತೀಶ್ ಗೌತಮ್, ಚಿತ್ತೋಡಗಡ ರಾಜಸ್ಥಾನ ಸಂಸದ ಸಿ.ಪಿ.ಜೋಶಿ, ಮಾಜಿ ಆರೋಗ್ಯ ಸಚಿವ ಮತ್ತು ಸಂಸದ ಮಹೇಶ್ ಶರ್ಮಾ, ಬರೋಡಾ ಶಾಸಕ ಶೈಲೇಶ್ ಮೆಹ್ತಾ ಉಪಸ್ಥಿತರಿದ್ದು, ಡಾ| ಸುರೇಶ್ ರಾವ್ ಇವರಿಗೆ `ವೈದ್ಯ ಭೂಷಣ ಪುರಸ್ಕಾರ' ಪ್ರದಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಪುರಸ್ಕಾರದ ವೈದ್ಯರ ವಿಭಾಗದ ಅಧ್ಯಕ್ಷ ಪದ್ಮಶ್ರೀ ಡಾ| ಚಂದ್ರಕಾಂತ್ ಪಾಂಡವ್, ಡಾ| ಶ್ಯಾಮ್ ರಘುನಂದನ್, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here