Thursday 28th, March 2024
canara news

ಬಂಟರ ಸಂಘ ; ಶ್ರೀ ಮಹಾವಿಷ್ಣು ದೇವರ-ಪರಿವಾರ ಸಾನಿಧ್ಯಗಳ ಅಷ್ಟಬಂಧ ಬ್ರಹ್ಮಕಲಶೋತ್ಸವ

Published On : 10 Mar 2023   |  Reported By : Rons Bantwal


ಬ್ರಹ್ಮಕಲಶೋತ್ಸವ ಅನುಭವಿಗಳ ಭಾಗ್ಯವಾಗಿದೆ : ಪಲಿಮಾರು ವಿದ್ಯಾಧೀಶಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.18: ಪ್ರಥಿü್ವಯಲ್ಲಿ ಅಧಿಕಾರ ಯಾರಿಗೂ ಶಾಶ್ವ್ವತವಲ್ಲ. ಆದ್ದರಿಂದ ನಾವೆಲ್ಲರೂ ನಿರ್ವಿಕಾರರಾಗಿ ಬಾಳÀಬೇಕು. ಸಮಾಜದಲ್ಲಿ ಸದಾ ಸಮಾನತರಾಗಿ ಬಾಳುವುದು ಸರ್ವೋತ್ತಮವಾಗಿದೆ. ಇದನ್ನು ನಮ್ಮ ಹಿರಿಯರು ಬೋಧಿಸಿದ್ದು ಅವರ ದೊಡ್ಡಸ್ಥಿಕೆಯಾಗಿದೆ. ಪೂರ್ವಜರ ಪಾಠವನ್ನು ಪರಿಪಾಲಿಸಿ ಬಾಳಿದಾಗಲೇ ಸಂಪನ್ಭರಿತ ಬಾಳು ಪ್ರಾಪ್ತಿಸುವುದು. ಬಂಟರ ಸಂಘವು ಶತಾಬ್ದಿಯತ್ತ ಸಾಗುತ್ತಿದ್ದು ಈ ಪರ್ವಕಾಲದಲ್ಲಿ ಮಂದಿರದ ಬ್ರಹ್ಮಕಲಶೋತ್ಸವ ಅನುಭವಿಗಳ ಭಾಗ್ಯವಾಗಿದೆ. ಸಂಸ್ಥೆಗಳ ಶತಮಾನ ಯೌವನತ್ವದ ಸಂಕೇತವಾಗಿರುವಂತೆ ಈ ಸಂಘವು ಇನ್ನಷ್ಟು ಶತಮಾನಗಳ ಸೇವೆಯಲ್ಲಿ ಮುನ್ನಡೆಯುವಂತಾಗಲಿ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದರು.

ಬಂಟರ ಸಂಘ ಮುಂಬಯಿ ಇದರ ಶ್ರೀ ಮಹಾವಿಷ್ಣು ದೇವಸ್ಥಾನದ (ಜ್ಞಾನ ಮಂದಿರ) ಅಷ್ಟಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಇಂದಿಲ್ಲಿ ಗುರುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನೆರವೇರಿಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿ ಪಲಿಮಾರುಶ್ರೀ ತಿಳಿಸಿದರು.

ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ಇವರ ದಿವ್ಯೋಪಸ್ಥಿತಿ ಹಾಗೂ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿüಗಳಾಗಿ ಬಂಟರ ಸಂಘದ ಬೋರಿವಿಲಿ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಡಾ| ಪಿ.ವಿ ಶೆಟ್ಟಿ, ಪುಣೆ ಬಂಟ್ಸ್ ಸಂಘ ಅಧ್ಯಕ್ಷ ಇನ್ನ ಕುರ್ಕಿಲಬೆಟ್ಟು ಸಂತೋಷ್ ವಿ.ಶೆಟ್ಟಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಆಥಿರ್üಕ ಸಮಿತಿ ಪ್ರಧಾನ ಸಂಚಾಲಕ ಉದಯ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್) ಹಾಜರಿದ್ದರು. ಚಂದ್ರಹಾಸ ಕೆ.ಶೆಟ್ಟಿ ಮತ್ತು ಶುಭಲಕ್ಷ್ಮೀ ಶೆಟ್ಟಿ ಹಾಗೂ ಜ್ಞಾನ ಮಂದಿರ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ವಿ.ಶೆಟ್ಟಿ ಮತ್ತು ಕಲ್ಪನಾ ಶೆಟ್ಟಿÀ ದಂಪತಿಗಳು ಶ್ರೀಪಾದರುಗಳನ್ನು ಸಾಂಪ್ರದಾಯಿಕವಾಗಿ ಗೌರವಿಸಿದರು.

ಒಡಿಯೂರುಶ್ರೀ ಆಶೀರ್ವಚನಗೈದು ಮುಂಬಯಿಯಲ್ಲಿನ ಬಂಟರ ಸಂಘವು ಸಾಮಾಜಿಕ, ಧರ್ಮಶ್ರದ್ಧೆಯ ಕೇಂದ್ರವಾಗಿದೆ. ಅದರಲ್ಲೂ ಬಂಟರು ಪರೋಪಕಾರಕ್ಕೆ ಪ್ರಥಮರಾಗಿದ್ದಾರೆ. ಸಮಾಜದ ಜಾಗೃತಿ, ಆತ್ಮವಿಶ್ವಾಸ ಮೂಡಿಸುವಲ್ಲಿ ಬಂಟರು ಸರ್ವೋತ್ಕೃಷ್ಟರಾಗಿದ್ದು ದೇಹವನ್ನೇ ದೇವಾಯಲವಾಗಿಸಿ ಧರ್ಮಶ್ರದ್ಧೆವುಳ್ಳವರಾಗಿ ದ್ದಾರೆ. ಭವಿಷ್ಯಕ್ಕೂ ಭಾವೀ ಜನಾಂಗ, ಯುವಶಕ್ತಿಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಹುಟ್ಟುಹಾಕಿ ಭವ್ಯವಾದ ಬದುಕನ್ನು ಕಟ್ಟಲು ಪ್ರಯತ್ನ ಮುನ್ನಡೆಸಬೇಕು ಎಂದು ಕರೆಯಿತ್ತರು.

ನನ್ನ ಅಧ್ಯಕ್ಷ್ಷಾವಧಿಯಲ್ಲಿ ಈ ದೇವಸ್ಥಾನದ ಆವರಣವನ್ನು ವಾಸ್ತುಯುತವಾಗಿಸಿರುವುದು ಅಭಿಮಾನ ತರುತ್ತಿದೆ. ಇಲ್ಲಿನ ಮಂದಿರದ ದೇವರು ಭಾರೀ ಶಕ್ತಿಯುತರಾಗಿದ್ದು ಅವರೆಲ್ಲರ ಶಕ್ತಿದಾಯಕ ಆಶೀರ್ವಾದ ನಮ್ಮೆಲ್ಲರಿಗೂ ಫಲಿಸಲಿ. ಬರೇ ಮನಸ್ಸು ಮಾಡಿದರೇ ಬ್ರಹ್ಮಕಲಶ ಸಾಧ್ಯವಾಗದು, ಇದಕ್ಕೆ ದೇವರ ಮಹಿಮೆ ಅನುಗ್ರಹ ಪ್ರಧಾನವಾದುದು ಎಂದು ಐಕಳ ಹರೀಶ್ ತಿಳಿಸಿದರು.

ಶಶಿಧರ್ ಶೆಟ್ಟಿ ಮಾತನಾಡಿ ಪುಣ್ಯದ ಕೈಂಕರ್ಯದಲ್ಲಿ ಭಾಗವಹಿಸುವುದು ಯೋಗ ಮತ್ತು ಭಾಗ್ಯವಾಗಿರುತ್ತದೆ. ದೇವರ ಕೆಲಸಗಳನ್ನು ಶ್ರದ್ಧಾಪೂರ್ವಕವಾಗಿ ನಿವಾರಿಸಿದಾಗಲೇ ಸಮಸ್ಯೆಗಳು ತನ್ನಿಂತಾನೇ ಬಗೆಹರಿಯುವುದು. ಎಲ್ಲಿ ಓಂಕಾರ ಇರುತ್ತದೆಯೋ ಅಲ್ಲಿ ಅಹಾಂಕಾರ ಇರದು. ಇದನ್ನು ಅರ್ಥ ಮಾಡಿದಗಲೇ ಬದುಕು ಸಾರ್ಥಕಗೊಳ್ಳುವುದು.

ಸಂತೋಷ್ ಶೆಟ್ಟಿ ಮಾತನಾಡಿ ಯೋಗ, ಭಾಗ್ಯ ಯೋಗ್ಯತೆವುಳ್ಳವರಿಗೆ ಮಾತ್ರ ಇಂತಹ ಪುಣ್ಯಾಧಿ ಧಾರ್ಮಿಕ ಉತ್ಸವಗಳು ಅನುಭವಿಸಲಾಗುವುದು. ಧರ್ಮದ ರಕ್ಷಣೆ ಮಾಡಿದಾಗಲೇ ಧರ್ಮವೂ ನಮ್ಮ ರಕ್ಷಣೆ ಮಾಡುವಂತೆ ಇಂತಹ ಬ್ರಹ್ಮಕಲಶೋತ್ಸವ ಅಖಂಡ ಸಮಾಜಕ್ಕೆ ಶ್ರೀ ರಕ್ಷೆಯಾಗಲಿದೆ ಎಂದರು.

ದೇವರಲ್ಲಿ ಮತ್ತು ಧರ್ಮದಲ್ಲಿ ಭಕ್ತಿ ಉಕ್ಕಲು ಧಾರ್ಮಿಕ ಪೂಜಾಧಿಗಳು ಶಕ್ತಿಯಾಗಿದೆ. ಭಕ್ತಿಯನ್ನು ಇನ್ನಷ್ಟು ಪಸರಿಸಲು ಭಾವೀ ಜನಾಂಗ ಇದರೊಂದಿಗೆ ಕೂಡಬೇಕು. ಮಕ್ಕಳಲ್ಲಿ ಧಾರ್ಮಿಕ ವಿಷಯದಲ್ಲಿ ಹೆಚ್ಚಿನ ಪ್ರೇರಣೆ ನೀಡುವಲ್ಲಿ ಪಾಲಕರು ಶ್ರಮಿಸಬೇಕು ಎಂದು ಉದಯ ಶೆಟ್ಟಿ ಕಿವಿಮಾತುಗಳನ್ನಾಡಿದರು.

ಬ್ರಹ್ಮಕಲಶೋತ್ಸವಕ್ಕೆ ದೇವರೇ ನಮಗೆ ಪ್ರೇರೆಪಿಸಿ ನಮ್ಮಿಂದ ಸೇವೆ ಮಾಡಿಸಿಕೊಳ್ಳುತ್ತಾರೆ. ಸಮಾಜಮುಖಿ ಸೇವೆಗೆ ದೇವರ ಅನುಗ್ರಹ ಇದ್ದೇ ಇರುತ್ತದೆ ಅನ್ನುವುದಕ್ಕೆ ನಮ್ಮ ಜ್ಞಾನ ಮಂದಿರದಲ್ಲಿ ಆರಾಧಿಸಲ್ಪಡುವ ದೇವರುಗಳೇ ಸಾಕ್ಷಿಯಾಗಿದ್ದಾರೆ. ಅಶಕ್ತರಿಗೆ ಮಂದಿರದ ಸಭಾಗೃಹ ಧರ್ಮರ್ಥವಾಗಿ ನೀಡುವ ಚಿಂತನೆ ನಡೆದಿದ್ದು ಬಂಟರಿಗೆ ಶ್ರೇಷ್ಠಣಿಸಿರುವ ನಿತ್ಯಾನಂದ ಸ್ವಾಮೀಜಿ ಅವರ ಪ್ರತಿಮೆಯನ್ನೂ ಮಂದಿರದಲ್ಲಿ ಶೀಘ್ರವಾಗಿ ಪ್ರತಿಷ್ಠಾಪಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಚಂದ್ರಹಾಸ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವೇ| ಮೂ| ಕೃಷ್ಣರಾಜ ತಂತ್ರಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ವಿವೇಕ್ ಶೆಟ್ಟಿ ಮತ್ತು ರಮಾ ವಿವೇಕ್, ಸುಧಾಕರ್ ಎಸ್.ಹೆಗ್ಡೆ ಮತ್ತು ರಂಜನಿ ಸುಧಾಕರ್, ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಲತಾ ವಿಶ್ವನಾಥ್, ಪ್ರಭಾಕರ ಎಲ್.ಶೆಟ್ಟಿ ಮತ್ತು ಲತಾ ಪ್ರಭಾಕರ್ ದಂಪತಿಗಳು, ಡಾ| ಪಿ.ವಿ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ ಹಾಗೂ ಜ್ಞಾನ ಮಂದಿರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರುಗಳಾದ ಜಯ ಎ.ಶೆಟ್ಟಿ, ಜಗನ್ನಾಥ್ ಎನ್.ರೈ, ಚಂದ್ರಹಾಸ ಎಂ.ರೈ ಚಂದ್ರಹಾಸ್ ಮತ್ತು ಶ್ವೇತಾ ಚಂದ್ರಹಾಸ್ ಇವರನ್ನು ಸನ್ಮಾನಿಸಿ ಅಭಿವಂದಿಸಲಾಯಿತು. ಹಾಗೂ ಸೇವಾಥಿರ್üಗಳಾದ ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ರಮೇಶ್ ಶೆಟ್ಟಿ (ಓರಿಯನ್), ಪ್ರಮೋದಾ ಶಿವಣ್ಣ ಶೆಟ್ಟಿ ಮತ್ತಿತರ ದಾನಿಗಳು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಸಂಘದ ವಿಶ್ವಸ್ಥ ಸದಸ್ಯರು, ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಸಮನ್ವಯಕರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳಿಗೆ ಅಧ್ಯಕ್ಷರು ಪೂಜಾ ಪರಿಕರಗಳನ್ನಿತ್ತು ಗೌರವಿಸಿದರು.

ಬಂಟರ ಸಂಘದ ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಮಹಿಳಾ ವಿಭಾಗಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಜ್ಞಾನ ಮಂದಿರ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ವಿ.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಕುರ್ಲಾ, ಕಾರ್ಯದರ್ಶಿ ಸುರೇಶ್ ಎಲ್.ಶೆಟ್ಟಿ ಶಿಬರೂರು, ಕೋಶಾಧಿಕಾರಿ ಅಶೋಕ್ ಪಕ್ಕಳ ವೇದಿಕೆಯನ್ನು ಅಲಂಕರಿಸಿದ್ದರು.

ಇಂದಿಲ್ಲಿ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ಸಿಎ| ಐ.ಆರ್ ಶೆಟ್ಟಿ ಮತ್ತು ಕವಿತಾ ಶೆಟ್ಟಿ ಸೇವೆಯಲ್ಲಿ ಲಕ್ಷ ತುಳಸೀ ಅರ್ಚನೆ, ಲತಾ ಜಯರಾಮ ಶೆಟ್ಟಿ ಸೇವೆಯಲ್ಲಿ ಅಶ್ಲೇಷ ಬಲಿ, ಮನೋರಮ ಎನ್.ಬಿ ಶೆಟ್ಟಿ ಸೇವೆಯಲ್ಲಿ ಮಹಾವಿಷ್ಣು ಯಾಗ, ಸುರೇಶ್ ಎಲ್.ಶೆಟ್ಟಿ ಸೇವೆಯಲ್ಲಿ ಬ್ರಹ್ಮಕಲಶಾಭಿಷೇಕ ರಂಗಪೂಜೆ ನೆರವೇರಿಸಲ್ಪಟ್ಟಿತು. ಬ್ರಹ್ಮಶ್ರೀ ಕೊಯ್ಯೂರು ಶ್ರೀ ನಂದಕುಮಾರ ತಂತ್ರಿ ಅವರ ವೈದಿಕತ್ವದಲ್ಲಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಇವರ ಸಹಭಾಗಿತ್ವದಲ್ಲಿ ಕಲಶಾಭಿಷೇಕ ಪ್ರಾರಂಭ ನಡೆಸಿ ಬೆಳಿಗ್ಗೆ ಶುಭ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾವಿಷ್ಣು ಯಾಗ, ಗಣಪತಿ ದುರ್ಗಾ ನಾಗದೇವರ ಸನ್ನಿಧಾನದಲ್ಲಿ ಕಲಶಾಭಿಷೇಕ, ಆಶ್ಲೇಷ ಬಲಿ ಹಾಗೂ ಮಧ್ಯಾಹ್ನ ಮಹಾಪೂಜೆ, ಸಂಜೆ ಚಂದ್ರಹಾಸ ಕೆ.ಶೆಟ್ಟಿ ಸೇವೆಯೊಂದಿಗೆ ರಂಗಪೂಜೆ ನೆರವೇರಿಸಿ ಶ್ರೀ ಮಹಾವಿಷ್ಣು ದೇವರ ಹಾಗೂ ಪರಿವಾರ ಸಾನಿಧ್ಯಗಳ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿ ಗೆ ವಾರ್ಷಿಕ ಜಾತ್ರಾಮಹೋತ್ಸವ ಸಂಪನ್ನ ಗೊಂಡಿತು.

ಬ್ರಹ್ಮಕಲಶೋತ್ಸವ ನಿಮಿತ್ತ ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳು ಸೇರಿದಂತೆ ನಗರದ 51 ಭಜನಾ ಮಂಡಳಿಗಳೊಂದಿಗೆ ಒಟ್ಟು ಅರ್ವತ್ತು ಭಜನಾ ಮಂಡಳಿಗಳು ಭಜನೆ ನಡೆಸಿತು. ಜ್ಞಾನ ಮಂದಿರ ಸಮಿತಿ ಉಪ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಕುರ್ಲಾ ವೇದಿಕೆಯಲ್ಲಿದ್ದು ಮಂದಿರ ಸಮಿತಿ ಕಾರ್ಯದರ್ಶಿ ಸುರೇಶ್ ಎಲ್.ಶೆಟ್ಟಿ ಶಿಬರೂರು ಪ್ರಾರ್ಥನೆಯನ್ನಾಡಿದರು. ಕಾರ್ಯಾಧ್ಯಕ್ಷ ಕೃಷ್ಣ ವಿ.ಶೆಟ್ಟಿ ಸ್ವಾಗತಿಸಿದರು.ಜ್ಞಾನ ಮಂದಿರ ಸಮಿತಿ ಕೋಶಾಧಿಕಾರಿ ಅಶೋಕ್ ಪಕ್ಕಳ ಪ್ರಸ್ತಾವಿಕ ನುಡಿಗಳನ್ನಾಡಿ ಮಂದಿರಹ ಐತಿಹ್ಯ ತಿಳಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here