Thursday 8th, May 2025
canara news

ಉಪ್ಪಳ ಅಲ್ಲಿನ ಕೊಂಡೆವೂರುನಲ್ಲಿ ನಡೆಸಲ್ಪಟ್ಟ ಕೃಷಿ ಬದುಕಿನ ಪಾಠ ಶಿಬಿರ

Published On : 07 Mar 2023   |  Reported By : Rons Bantwal


ಮಕ್ಕಳಲ್ಲಿ ಧಾರ್ಮಿಕ-ಕೃಷಿ ಪ್ರಜ್ಞೆಯ ಮಾಹಿತಿ ಅವಶ್ಯ : ಕೊಂಡೆವೂರುಶ್ರೀ

ಮುಂಬಯಿ (ಆರ್‍ಬಿಐ), ಮಾ.07: ಜೈ ಜವಾನ್-ಜೈ ಕಿಸಾನ್ ಘೋಷವಾಕ್ಯದಂತೆ ಸೈನ್ಯ ಮತ್ತು ಕೃಷಿಕರನ್ನು ಬಲಿಷ್ಠ ಗೊಳಿಸುವುದರ ಮೂಲಕ ದೇಶವನ್ನು ಸಶಕ್ತಗೊಳಿಸೋಣ ಅದಕಾಗಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಕೃಷಿಯ ಮಾಹಿತಿ ನೀಡಿ ಬೆಳೆಸಬೇಕಿದೆ ಎಂದು ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಇಲ್ಲಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಮಂಗಳೂರು ಅಲ್ಲಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಶ್ರಯದಲ್ಲಿ ಕೊಂಡೆವೂರು ಮಠದಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ ದ್ವಿದಿನಗಳ ಕೃಷಿ ಬದುಕಿನ ಪಾಠ ಶಿಬಿರವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಆಶೀರ್ವಚನಗೈದು ಕೊಂಡೆವೂರುಶ್ರೀ ಮಾತನಾಡಿದರು.

ಮುಖ್ಯ ಅತಿಥಿüಯಾಗಿದ್ದ ಉದ್ಯಮಿ ಎಂ.ಮುರಳೀಧರ ಶೆಟ್ಟಿ ಮಾತತಾಡಿ ನಿಮ್ಮ ಆಹಾರ ನೀವು ಬೆಳೆದು ಆರೋಗ್ಯವಾಗಿರಿಸಲಿ ಎಂದರು.

ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್‍ನ ವಿಶ್ವಸ್ಥ ಶಶಿಧರ ಶೆಟ್ಟಿ ಗ್ರಾಮಚಾವಡಿ ಅತಿಥಿüಯಾಗಿ ಉಪಸ್ಥಿತರಿದ್ದರು.

ಸಾವಯವ ಕೃಷಿಕ ಗ್ರಾಹಕ ಬಳಗದ ಗೌರವ ಸಲಹೆಗಾರ, ಕ.ಸಾ.ಪ.ದ ದ.ಕ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಶಿಬಿರದ ಯಶಸ್ಸಿಗೆ ಶುಭ ಕೋರಿದರು.

ಬಳಗದ ಸದಸ್ಯ ಹರಿಕೃಷ್ಣ ಕಾಮತ್ ಉಪಸ್ಥಿತರಿದ್ದು ಕು| ಮಂಜುಳಾ ಮತ್ತು ಕು|ದೇವಿಕಾ ಪ್ರಾರ್ಥನೆ, ಶಿಬಿರ ಗೀತೆಯನ್ನು ಹಾಡಿದರು. ಸಾವಯವ ಬಳಗದ ಅಧ್ಯಕ್ಷ ಜಿ.ಆರ್ ಪ್ರಸಾದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಕುಳಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದನಾರ್ಪಣೆಗೈದರು. ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.

ಸಂಜೆವರೆಗೆ ನಡೆದ ಶಿಬಿರದಲ್ಲಿ ಶ್ರಮ ಜೀವನ, ತಿನ್ನುವ ಆಹಾರವೇ ಔಷಧವಾಗಿರಲಿ, ಆಹಾರದಲ್ಲಿ ವಿಷ, ಗೋವಿನಿಂದ ಆರೋಗ್ಯ ಹಾಗೂ ಸಣ್ಣ ಕೃಷಿಯಲ್ಲಿ ಉದ್ಯಮಶೀಲತೆ ಅವಕಾಶ ಮುಂತಾದ ವಿಷಯಗಳ ಕುರಿತು ಆಯಾಯ ಕ್ಷೇತ್ರ ತಜ್ಞರಿಂದ ಉಪನ್ಯಾಸ ಮತ್ತು ಸಂವಾದ ನಡೆಯುತ್ತಿದೆ. ಕೈತೋಟದ ಸಲಕರಣೆಗಳ ಮಾಹಿತಿ, ಸಾವಯವ ಆಹಾರ ಪದಾರ್ಥ ಗುರುತಿಸುವ, ಅಗ್ನಿಹೋತ್ರ, ಪ್ರಾತ್ಯಕ್ಷಿಕೆಗಳೂ ನಡೆಸಲ್ಪಟ್ಟವು. ಕಾಸರಗೋಡು ಜಿಲ್ಲೆ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ನೂರಾರು ಶಿಬಿರಾಥಿರ್üಗಳು ಶಿಬಿರದ ಫಲಾನುಭವ ಪಡೆದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here