Thursday 8th, May 2025
canara news

ನೆರುಲ್‍ನಲ್ಲಿನ ಬಿಎಸ್‍ಕೆಬಿಎ ಆಶ್ರಯ ನಿವಾಸದ ನವೀಕೃತ ಪ್ರಾರ್ಥನಾ ಮಂದಿರ ಉದ್ಘಾಟನೆ

Published On : 05 Mar 2023   |  Reported By : Rons Bantwal


ಭಕ್ತಿಯು ಬದುಕನ್ನು ಬದಲಾಯಿಸಬಲ್ಲದು : ವಾಮನ್ ಹೊಳ್ಳಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.05: ಗೋಕುಲದ ಶ್ರೀಕೃಷ್ಣಮಂದಿರದ ಶ್ರೀ ಗೋಪಾಲಕೃಷ್ಣ ದೇವರನ್ನು ಬಾಲಾಲಯವಾಗಿಸಿದ ಆಶ್ರಯ ಭಕ್ತರ ಪಾಲಿನ ಶ್ರದ್ಧಾಕೇಂದ್ರವಾಗಿದೆ. ಭಕ್ತಿಯು ಬದುಕನ್ನು ಬದಲಾಯಿಸಬಲ್ಲದು ಅನ್ನುವುದನ್ನು ಆಶ್ರಯ ತೋರಿಸಿದ್ದು, ಆಧ್ಯಾತ್ಮಿಕ ಪರಿವರ್ತನೆಗೆ ಪ್ರಾರ್ಥನಾ ಮಂದಿರಗಳು ಮತ್ತು ಯಜ್ಞ ವೇದಿಕೆಗಳು ಸದಾ ಪಾವಿತ್ರ ್ಯತಾವಾಗಿಸಿಕೊಳ್ಳಬೇಕು ಎಂದು ಬಿಎಸ್‍ಕೆಬಿಎ ಉಪಾಧ್ಯಕ್ಷÀ ವಾಮನ್ ಹೊಳ್ಳಾ ತಿಳಿಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ಗಳ ನವಿಮುಂಬಯಿ ನೆರುಲ್ ಪೂರ್ವದ ಸೀವುಡ್ಸ್ ಇಲ್ಲಿನ ಹಿರಿಯ ನಾಗರಿಕರ ಬಾಳಸಂಜೆಯ ಪ್ರಶಾಂತತಾ ತಾಣ ಆಶ್ರಯ ನಿವಾಸದಲ್ಲಿ ನವೀಕೃತ ಪ್ರಾರ್ಥನಾ ಮಂದಿರವನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಉದ್ಘಾಟಿಸಲಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾಮನ್ ಹೊಳ್ಳಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಎನ್‍ಎಂಎಂಸಿ ಮಾಜಿ ಮೇಯರ್, ಥಾಣೆ ಸಂಸದ ಡಾ| ಸಂಜೀವ್ ಜಿ.ನಾಯ್ಕ್ ದೀಪಹಚ್ಚಿ ಪ್ರಾರ್ಥನಾ ಮಂದಿರಕ್ಕೆ ಪುನಃರ್ ಚಾಲನೆಯನ್ನಿತ್ತರು. ಅತಿಥಿü ಅಭ್ಯಾಗತರುಗಳಾಗಿ ಬಿಜೆಪಿ ನವಿ ಮುಂಬಯಿ ಪ್ರದೇಶ ಉಪಾಧ್ಯಕ್ಷ ಡಾ| ಬಿಕ್ರಂ ಪರಾಜುಲಿ, ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ, ನೆರೂಲ್‍ನ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಎಂ.ಪೂಜಾರಿ, ಉದ್ಯಮಿ ಡಾ| ಜಿತೇಂದ್ರ ಖಾಂಡ್ಗೆ ವಾಸ್ತುಶಿಲ್ಪಿ ಆನಂದ್ ಸಂಹೋತ್ರಾ ಪ್ರಧಾನವಾಗಿ ಉಪಸ್ಥಿತರಿದ್ದರು.

ಬಿಎಸ್‍ಕೆಬಿ ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮತ್ತಿತರ ಪದಾಧಿಕಾರಿಗಳು, ಚಂದ್ರಾವತಿ ರಾವ್, ಶಶಿಧರ ರಾವ್, ಚಂದ್ರಶೇಖರ ರಾವ್ ಸದಸ್ಯರನೇಕರು ಉಪಸ್ಥಿತರಿದ್ದು ಸ್ಮಿತಾ ಭಟ್, ಕು| ಹಂಸ ಭಾರದ್ವಾಜ ಮತ್ತು ಭೋಜ ದೇವಾಡಿಗ ಪ್ರಾರ್ಥನೆಯ ನ್ನಾಡಿದರು.

ಆಶ್ರಯ ಸಮಿತಿ ಕಾರ್ಯಧ್ಯಕ್ಷ ಕೆ.ರಾಜಾರಾಮ ಆಚಾರ್ಯ ಪ್ರಸ್ತಾವನೆಗೈದು ಹಿರಿಯ ನಾಗರಿಕರು ಬದುಕಿನ ವೃದ್ಧಾಪ್ಯ ದಿನಗಳನ್ನು ಸಂತಸಮಯವಾಗಿ ಕಳೆಯಲು ಆಶ್ರಯ ಸಮೃದ್ಧಿಯ ಕೇಂದ್ರವಾಗಿದೆ. ಹಿರಿಜೀವಗಳು ಬದುಕಿನ ಪವಿತ್ರ ಮೌಲ್ಯಗಳಾದ ಕರುಣೆ, ಘನತೆ, ಸುಖೋಷ್ಣತೆ ಮುಂತಾದ ಭಾವನೆಗಳೊಂದಿಗೆ ಇಲ್ಲಿ ಬಾಳುತ್ತಿರುವುದು ನಮ್ಮ ಸೇವೆಗೂ ನೆಮ್ಮದಿ ತರುತ್ತಿದೆ. ಹಿರಿಯ ನಾಗರಿಕರು ಮುಸ್ಸಂಜೆ ಬದುಕನ್ನು ಆನಂದಮಯ ಮತ್ತು ಆರಾಮದಾಯಕವನ್ನಾಗಿ ಮಾಡುವ ಎಲ್ಲಾ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಿರಿಯ ನಾಗರಿಕರ ಆಶ್ರಯದ ಪ್ರಸಕ್ತ ಕಾರ್ಯವೈಖರಿ ಹಾಗೂ ಭವಿಷ್ಯತ್ತಿನ ಯೋಜನೆಗಳ ಬಗ್ಗೆ ಮಾಹಿತಿಯನ್ನಿತ್ತÀರು.

ಗೋಕುಲದ ಆರ್ಚಕ ಗುರುಪ್ರಸಾದ್ ಭಟ್ ಅವರು ಪ್ರಾರ್ಥನಾ ಮಂದಿರದಲಿ ವಿಷ್ಣು ಸಹಸ್ರನಾಮ, ಪೂಜೆ ನೆರವೇರಿಸಿ ಆಶೀರ್ಚನನಗೈದರು. ಗೋಕುಲ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಶ್ರೀ ಶನೀಶ್ವರ ಭಜನಾ ಮಂಡಳಿ, ಜೈ ಅಂಬೆ ಭಜನಾ ಮಂಡಳಿ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀರಾಮ ಭಜನಾ ಮಂಡಳಿ, ಅಮರೇಶ್ವರಿ ಭಜನಾ ಮಂಡಳಿಗಳು ಭಜನೆಯನ್ನಾಡಿದರು.

ಆಶ್ರಯ ಸಮಿತಿ ಕಾರ್ಯಧ್ಯಕ್ಷ ಕೆ.ರಾಜಾರಾಮ ಆಚಾರ್ಯ ಪ್ರಸ್ತಾವನೆಗೈದು ಹಿರಿಯ ನಾಗರಿಕರ ಆಶ್ರಯದ ಪ್ರಸಕ್ತ ಕಾರ್ಯವೈಖರಿ ಹಾಗೂ ಭವಿಷ್ಯತ್ತಿನ ಯೋಜನೆಗಳ ಬಗ್ಗೆ ತಿಳಿಸಿದರು. ಬಿಎಸ್‍ಕೆಬಿ ಜೊತೆ ಕಾರ್ಯದರ್ಶಿ ಪ್ರಶಾಂತ್ ಹೆರ್ಲೆ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಾಮನ್ ಹೊಳ್ಳಾ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಬಿಎಸ್‍ಕೆಬಿ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here