Thursday 23rd, March 2023
canara news

ಮಯೂರವರ್ಮ ಪ್ರತಿಷ್ಠಾನÀ ಆಯೋಜಿತ `ತವರು ಮನೆಯ ಬಾಂಧವ್ಯ' ಮಹಿಳಾ ಸ್ನೇಹ ಸಮ್ಮಿಲನ

Published On : 05 Mar 2023   |  Reported By : Rons Bantwal


ಮಹಿಳೆ ಮೂಕವಾದರೆ ಲೋಕವೂ ಲೂಟಿ ಮಾಡಿತು : ನಳಿನಾ ಪ್ರಸಾದ್

ಮುಂಬಯಿ (ಆರ್‍ಬಿಐ), ಮಾ.05: ಪರಿಪೂರ್ಣ ಅರ್ಪಣೆಯ ಸಂಸ್ಕಾರಯುತ ಜೀವನ ಮಹಿಳೆಯದ್ದಾಗಿದೆ. ಸದಾ ಸಮರ್ಪಣಾ ಭಾವನೆಯ ಸ್ತ್ರೀಯರು ಮಾನವತೆಯ ಪರಿಪಾಠವಾಗಿದ್ದಾರೆ. ಇಂತಹ ನಾರಿಶಕ್ತಿಯ ಆತ್ಮಸ್ಥೆರ್ಯ ಸಾಂಪ್ರದಾಯಿಕವಾಗಬೇಕು. ಮಿತ್ಯವನ್ನು ಭಗ್ನಗೊಳಿಸಲು ಮತ್ತು ಸತ್ಯವನ್ನು ನಗ್ನಗೊಳಿಸಲು ಸ್ತ್ರೀಯರು ತಮ್ಮ ಆತ್ಮಧ್ಯೇಯ ಬಲವಾಗಿಸಬೇಕು. ಮಹಿಳೆಯರು ಮೂಕವಾದರೆ ಲೋಕವೂ ಲೂಟಿ ಮಾಡಿತು ಜೋಕೆ ಎಂದು ಬೃಹನ್ಮುಂಬಯಿಯಲ್ಲಿನ ಪ್ರತಿಭಾನ್ವಿತ ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ತಿಳಿಸಿದರು.

ಮಮೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನÀ (ರಿ.) ಮುಂಬಯಿ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಫಾಟ್ಕೋಪರ್ ಪೂರ್ವದ ಪಂತ್‍ನಗರ್‍ನಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಸಭಾಗೃಹದಲ್ಲಿ `ತವರು ಮನೆಯ ಬಾಂಧವ್ಯ' ಮಹಿಳಾ ಸ್ನೇಹ ಸಮ್ಮಿಲನ ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಳಿನಾ ಪ್ರಸಾದ್ ಮಾತನಾಡಿದರು.

ನಳಿನಾ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಸ್ತ್ರೀಶಕ್ತಿ ಫೌಂಡೇಶನ್ ವಿೂರಾ ಭಯಂದರ್ ಇದರ ಕಾರ್ಯಾಧ್ಯಕ್ಷೆ ಶಾಲಿನಿ ಶೆಟ್ಟಿ ಮತ್ತು ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗಧ್ಯಕ್ಷೆ ಸುಜಲಾ ಶೆಟ್ಟಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪೆÇ್ರ| ವೆಂಕಟೇಶ ಪೈ ಉಪಸ್ಥಿತರಿದ್ದು ಮಹಿಳಾ ಸಬಲೀಕರಣಕ್ಕೆ ಪ್ರೇರೆಪಿಸಿದರು.

ಕನ್ನಡ ವೆಲ್ಫೇರ್ ಸೊಸೈಟಿ ಸಹಕಾರದಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪುರಾಣ ಕಾಲದ ಮಹಿಳೆ ವಿಷದ ಕುರಿತು ಶೈಲಜಾ ಹೆಗಡೆ, ಇತಿಹಾಸ ಕಾಲದ ಮಹಿಳೆ ಕುರಿತು ವೇದಾವತಿ ಭಟ್, ಜಾಹೀರಾತು ಜಗತ್ತಿನಲ್ಲಿ ಮಹಿಳೆ ಕುರಿತು ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಮಕ್ಕಳ ಪಾಲನೆಯಲ್ಲಿ ಪಾಲಕರ ಪಾತ್ರದ ಕುರಿತು ಕುಮುದಾ ಆಳ್ವ, ಪುರಾಣ ಕಾಲದ ಮಹಿಳೆ ಕುರಿತು ಲಕ್ಷ್ಮೀ ಹೆರೂರು, ತವರು ಮನೆ ಬಾಂಧವ್ಯ ಕುರಿತು ಡಾ| ಜಿ.ಪಿ ಕುಸುಮ ವರ್ತಮಾನದಲ್ಲಿ ವಿದ್ಯಾವಂತ ಮಹಿಳೆ ಕುರಿತು ವಾಣಿ ಶೆಟ್ಟಿ, ಇತಿಹಾಸ ಕಾಲದ ಮಹಿಳೆ ಕುರಿತು ಲಲಿತಾ ಅಂಗಡಿ, ಆಧುನಿಕ ಕಾಲದ ಮಹಿಳೆ ಕುರಿತು ಸುಜಾತಾ ಶೆಟ್ಟಿ ತಮ್ಮ ವಿಚಾರಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಸಿಂಧೂರ ರಾಜೇಶ್ ಗೌಡ, ಗೌರವ ಕೋಶಾಧಿಕಾರಿ ಜೊತೆ ಕಾರ್ಯದರ್ಶಿ ಪದ್ಮನಾಭ ಸಪಳಿಗ, ಕು| ಸುಧುಘ ದೊಡ್ಮನೆ, ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ, ಶಾಂತಾ ಎಸ್.ಶೆಟ್ಟಿ ನಂದಳಿಕೆ, ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದÀರು.

ಮಾಲತಿ ಪುತ್ರನ್ ಮತ್ತು ಸಂಗಡಿಗರು ಪ್ರಾರ್ಥನೆಯನ್ನಾಡಿ ಸ್ವಾಗತಿಸಿದರು. ಮಯೂರವರ್ಮ ಪ್ರತಿಷ್ಠ್ಠಾನದ ಪ್ರ| ಕಾರ್ಯದರ್ಶಿ ವಿಶ್ವನಾಥ್ ದೊಡ್ಮಣೆ ಪ್ರಸ್ತಾವನೆಗೈದರು. ಶಾಂತಿಲಕ್ಷಿ ್ಮೀ ಉಡುಪ ಮತ್ತು ಬಳಗವು ಗೀತಾಗಾಯನ ಕಾರ್ಯಕ್ರಮ ಸಾದರ ಪಡಿಸಿದರು. ಸುರೇಶ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರೂಪಿಸಿ ಆಭಾರ ಮನ್ನಿಸಿದರು.
More News

ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್
ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ವಿಶೇಷ ಹಿಂದಿ ವ್ಯಾಕರಣ ತರಗತಿ
ವಿಶೇಷ ಹಿಂದಿ ವ್ಯಾಕರಣ ತರಗತಿ

Comment Here