Friday 29th, March 2024
canara news

ಫಾದರ್ ಮುಲ್ಲರ್ ಚ್ಯಾರಿಟೆಬಲ್ ಸಂಸ್ಥೆಗಳಲ್ಲಿ ಸಂಭ್ರಮದ ಪದವಿ ಪ್ರದಾನ ಸಮಾರಂಭ

Published On : 02 Apr 2023   |  Reported By : Rons Bantwal


ನರ್ಸಿಂಗ್ ಶಿಕ್ಷಣ ಮಾನವೀಯತೆಯ ಪಾಠ ಶಾಲೆ: ಮ್ಯಾಕ್ಸಿಮ್ ನೊರೊನ್ಹಾ

ಮುಂಬಯಿ (ಆರ್‍ಬಿಐ), ಎ.01: ಕೋವಿಡ್ ಚಿಕಿತ್ಸೆಯಲ್ಲಿ ಶುಶ್ರೂಷಾ ಸಿಬ್ಬಂದಿ ಕಾಳಜಿ ಮತ್ತು ಸಹಾನುಭೂತಿ ನಾವೆಲ್ಲರೂ ಕಂಡಿದ್ದೇವೆ. ದಾದಿಯರು ಮಾತೃ ಹೃದಯದ ಜತೆಗೆ ಮಾನವೀಯತೆ ಸೇವೆ ನೀಡಬೇಕು. ಸಂಸ್ಥೆಗಳ ಉನ್ನತಿಗಾಗಿ ಸಮರ್ಪಿಸಿಕೊಂಡಿರುವ ಆಡಳಿತ ಮಂಡಳಿ ಮತ್ತು ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಬೇಕು. ರೋಗಿಗಳು ಮತ್ತು ಜನರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಶ್ರೇಷ್ಠ ಗುರು ವಂ| ಫಾ| ಮ್ಯಾಕ್ಸಿಮ್ ಎಲ್.ನೊರೊನ್ಹಾ ಹೇಳಿದರು.

ಇಂದಿಲ್ಲಿ ಶನಿವಾರ ಮಂಗಳೂರು ಅಲ್ಲಿನ ಮುಲ್ಲರ್ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಚ್ಯಾರಿಟೆಬಲ್ ಸಂಸ್ಥೆಗಳ ಘಟಕಗಳಾದ 62ನೇ ಜಿಎನ್‍ಎಂ, 32ನೇ ಬಿಎಸ್ ಸಿ, 33ನೇ ಪಿಬಿ ಬಿಎಸ್ ಸಿ, ಹಾಗೂ 29ನೇ ಎಂಎಸ್ಸಿ ನರ್ಸಿಂಗ್ ನಿರ್ಗಮನ ಬ್ಯಾಚ್ ನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಫಾ| ನೊರೊನ್ಹಾ ಮಾತನಾಡಿದರು.

ವೈದ್ಯಕೀಯ ಶಿಕ್ಷಣವು ವಿದ್ಯಾಥಿರ್üಗಳಲ್ಲಿ ಮೌಲ್ಯಯುತ ವ್ಯಕ್ತಿಯನ್ನಾಗಿ ಬೆಳೆಸುತ್ತದೆ. ರೋಗಿ ಹಾಗೂ ನರ್ಸಗಳ ಸಂಬಂಧವು ಮಾನವೀಯ ಹಾಗೂ ಶ್ರೇಷ್ಠತೆ ಕಲಿಸಿಕೊಡುತ್ತದೆ. ರೋಗಿಗಳ ಆರೈಕೆ ಒದಗಿಸುವವರ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣ ಮುಗಿಸಿ ವೃತ್ತಿ ಬದುಕಿಗೆ ಹೋಗುವಾಗ ವೃತ್ತಿಯನ್ನು ಪ್ರೀತಿಸುವ ಜತೆಗೆ ಧೈರ್ಯ ಮತ್ತು ಕಾಳಜಿ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪದವೀಧರರನ್ನು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೆÇೀಷಕರು ಅಭಿನಂದಿಸಿದರು. ಪದವಿ ಪ್ರದಾನ ಕಾರ್ಯಕ್ರಮದಲ್ಲಿ 169 ಪದವೀಧರರು ತಮ್ಮ ಪದವಿ ಪ್ರಮಾಣ ಪತ್ರ ಮತ್ತು ಗೌರವವನ್ನು ಪಡೆದರು.

ಪದವೀಧರ ವಿದ್ಯಾಥಿರ್üನಿ ಸ್ನೇಹಾ ಮಯೋಲಾ ನೊರೊನ್ಹಾ ಅವರು ಮಾತನಾಡಿ, ಕ್ಯಾಂಪಸ್‍ನಲ್ಲಿ ಸಾಕಷ್ಟು ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡಿದ್ದೇವೆ. ಸಂಸ್ಥೆಯು ನನ್ನ ಉತ್ತಮ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿü ನರ್ಸ್ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಪೆÇ್ರ ಪ್ರಸನ್ನ ಕುಮಾರ್ತ ರಬೇತಿ ಪಡೆದ ನರ್ಸಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಪೆÇ್ರ. ಕೆ ಜಾರ್ಜ್, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ವಂದನೀಯ ಫಾದರ್ ಅಜಿತ್ ಬಿ. ಮೆನೇಜಸ್ ಮತ್ತು ಮುಖ್ಯ ನರ್ಸಿಂಗ್ ಅಧಿಕಾರಿ ಧನ್ಯಾ ದೇವಾಸಿಯಾ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ| ಫಾ| ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸ್ವಾಗತಿಸಿದರು. ಪ್ರಾಂಶುಪಾಲೆ ಜಸಿಂತಾ ಡಿಸೋಜಾ ಕಾಲೇಜು ಮತ್ತು ಶಾಲಾ ವರದಿ ಮಂಡಿಸಿದರು. ಉಪ ಪ್ರಾಂಶುಪಾಲ ಡಾ.ದೇವಿನಾ ಇ ರೋಡ್ರಿಗಸ್ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here