Friday 9th, June 2023
canara news

ವಡಾಲ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ-ಬ್ರಹ್ಮರಥೋತ್ಸವ

Published On : 30 Mar 2023   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.30: ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ಗುರುವಾರ 59ನೇ ವಾರ್ಷಿಕ ಶ್ರೀ ರಾಮ ನವಮಿಯನ್ನು ಸಾಂಪ್ರದಾಯಿಕÀವಾಗಿ ನೆರವೇರಿಸಲ್ಪಟ್ಟಿತು.

ರಾಮನಾಮ ಸಂಕೀರ್ತನೆಯೊಂದಿಗೆ ಎಂದಿನಂತೆ ಪೂರ್ವಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವಸರಳವಾಗಿ ಸಂಭ್ರಮಿಸಲಾಗಿದ್ದು ರಾಮ ನವಮಿ ಪ್ರಯುಕ್ತ ಮುಂಜಾನೆಯಿಂದ ಪ್ರಧಾನ ಆರ್ಚಕ ವೆ| ಮೂ| ಗೋವಿಂದ ಆಚಾರ್ಯ ತನ್ನ ವೈದಿಕತ್ವದಲ್ಲಿ ದೇವತಾ ಪ್ರಾರ್ಥನೆ, ರಥಾರೋಹಣ, ರಥ ವಾಸ್ತು ಹವನ, ರಥ ಶೋಭಯಾತ್ರೆ, ಮಹಾ ಮಂಗಳಾರತಿ, ರಾತ್ರಿ ಪೂಜೆ, ಸಮಾರಾಧನೆ ಇತ್ಯಾದಿ ಪೂಜಾಧಿಗಳು ನೆರವೇರಿಸಲ್ಪಟ್ಟವು.

ಮಹಿಳಾ ವೃಂದವು ಶ್ರೀರಾಮನ ಉತ್ಸವಮೂರ್ತಿಯನ್ನು ತೊಟ್ಟಿಲ್ಲರಿಸಿ ಶ್ರದ್ಧಾಪೂರ್ವಕವಾಗಿ ನಾಮಕರಣೋ ತ್ಸವ ನಡೆಸಿ ಶ್ರೀ ರಾಮ ಜನ್ಮೋತ್ಸವ ಸಂಭ್ರಮಿಸಿದ್ದು, ಮಧ್ಯಾಹ್ನ ಬ್ರಹ್ಮರಥ ಶೋಭಾಯಾತ್ರೆ, ರಥೋರೋಹಣ ನಡೆಸಲಾಗಿ ರಾತ್ರಿ ಪೂಜೆಯೊಂದಿಗೆ ವಾರ್ಷಿಕ ಉತ್ಸವ ಸಂಪನ್ನ ಗೊಂಡಿತು.

ವೇ| ಮೂ| ಸುಧಾಮ ಎ.ಭಟ್, ವೇ| ಮೂ| ಅನಂತ ಭಟ್ ದಾದರ್, ವೇ| ಮೂ| ಮೋಹನ್‍ದಾಸ್ ಅಚಾರ್ಯ, ವೇ| ಮೂ| ಶಿವಂ ಭಟ್, ವೇ| ಮೂ| ಅನಂತ ಭಟ್ ಥಾಣೆ ವಿದ್ವಾನರುಗಳಾದ ರಾಘವೇಂದ್ರ ಎ.ಭಟ್, ತ್ರಿವಿಕ್ರಮ ಆಚಾರ್ಯ, ಪ್ರಕಾಶ್ ಭಟ್, ಮತ್ತಿತರ ಪುರೋಹಿತರು ವಿವಿಧ ಪೂಜಾಧಿಗಳನ್ನು ನೆರವೇರಿಸಿದ್ದು, ಮಂದಿರದ ವೈಧಿಕರು ನಾನಾ ಪೂಜೆಗಳನ್ನು ನೆರವೇರಿಸಿ ನೆರೆದ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಅಧ್ಯಕ್ಷ ಮುಕುಂದ್ ವೈ.ಕಾಮತ್, ಉಪಾಧ್ಯಕ್ಷ ಅನಂತ್ ಪಿ.ಪೈ, ಗೌರವ ಕಾರ್ಯದರ್ಶಿ ಉಲ್ಲಾಸ್ ಕಾಮತ್, ಕೋಶಾಧಿಕಾರಿ ಪ್ರವೀಣ್ ಕಾಮತ್, ಕಿರಣ್ ಕಾಮತ್, ಸಚಿನ್ ಕಾಮತ್, ಸಂತೋಷ್ ಬಾಳ್ಗಿ, ವಿನಾಯಕ ಶ್ಯಾನ್‍ಭಾಗ್, ಕಮಲಾಕ್ಷ ಜಿ.ಸರಾಫ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ವಿವಿಧ ಸೇವೆಗಳನ್ನು ಪೂರೈಸಿ ಶ್ರೀ ರಾಮೋತ್ಸವ ಆಚರಿಸಿದರು. ಅರುಣ್ ನಾಯಕ್ ಮತ್ತು ತಂಡವು ಸಂಗೀತ ಕಚೇರಿ ಹಾಗೂ ರುಚಿತಾ ಭಟ್ ನೃತ್ಯ ವೈಭವ ಪ್ರದರ್ಶಿಸಿದರು.




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here