Thursday 8th, May 2025
canara news

ಶ್ರವಣ ಬೆಳಗೊಳ ಜಗದ್ಗುರು ಪೀಠಕ್ಕೆ ದೀಕ್ಷಿತ ಮದಭಿನವ ಸ್ವಸ್ತಿಶ್ರೀ ಚಾರುಕೀರ್ತಿ

Published On : 29 Mar 2023   |  Reported By : Rons Bantwal


ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಪಟ್ಟಾಲಂಕಾರ

ಮುಂಬಯಿ, ಮಾ.29: ಶ್ರವಣ ಬೆಳಗೊಳ ಜಗದ್ಗುರು ಪೀಠಕ್ಕೆ ವಿಚಾರಪಟ್ಟ ಕ್ಷುಲ್ಲಕ ದೀಕ್ಷಿತ ಮದಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಯಾಗಿ ಇಂದು ಬೆಳಿಗ್ಗೆ ಶ್ರವಣ ಬೆಳಗೊಳ ಧರ್ಮ ಸಿoಹಾಸನ ಪ್ರಾಚೀನ ಪಟ್ಟವೇರಿದರು.

ಇದು ರಾಜ ಗುರು ಪಟ್ಟ ವಾಗಿದ್ದು ಮೌರ್ಯ, ಗಂಗಾ, ಚಾಲುಕ್ಯ, ರಾಷ್ಟ್ರ ಕೂಟ ಪಲ್ಲವ, ಹೊಯ್ಸಳ ರಾಜ ವಂಶ ಗಳಿಗೆ ಚೇರ ಚೋಳ ಪಾಂಡ್ಯ ಕೊಂಗ ತುಳುವ ಹೈಗ ಕೊಂಕಣ ನಾಡಿಗೋರಾಜ ಗುರುವಾಗಿ ಡೆಲ್ಲಿ ಕನಕಗಿರಿ, ಮೂಡುಬಿದಿರೆ, ಸೊಂದಾ ಬೀಳಗಿ, ಹಾಡುವಳ್ಳಿ ತಮಿಳು ನಾಡಿನ ಅರಹಂತ ಗಿರಿ ದೀಪಂಗುಡಿ ಕೇರಳದ ಸುಲ್ತಾನ್ ಬತ್ತೇರಿ ವಯನಾಡ್ ನಾಗರ ಕೊಯಿಲ್ ಪ್ರಾಂತ್ಯಗಳ ಇಲ್ಲಿಯ ಗುರು ಪರಂಪರೆಯ ಸಮಾನ ಪೀಠಗಳು ಧರ್ಮ ಪೀಠಗಳಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿವೆ. ಇಂದು ಬೆಳಿಗ್ಗೆ ಪ.ಪೂ ಸ್ವಸ್ತಿಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳಿಂದ ಸುಮಾರು ತಿಂಗಳ ಹಿಂದೆ ವಿಚಾರ ಪಟ್ಟ ಕ್ಷುಲ್ಲಕರಾಗಿ ದೀಕ್ಷಿತರಾದ ಶಿವಮೊಗ್ಗ ಜಿಲ್ಲೆ ಸಾಗರದ ಕರೂರ್ ಹೋಬಳಿಯ ಆಗಮ ಕೀರ್ತಿ ಗಳಿಗೆ ಮೂಡುಬಿದಿರೆ ಸ್ವಾಮಿಜೀ, ಅರಹಂತ ಗಿರಿ, ಕನಕ ಗಿರಿ, ಹುಂಬುಜದ ಪ.ಪೂ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಪಾವನ ಉಪಸ್ಥಿತಿಯಲ್ಲಿ ಪಟ್ಟದ ಪುರೋಹಿತ ಶ್ರೀ ನಂದ ಕುಮಾರ್ ಪಂಡಿತರು ಪುಣ್ಯ ಹಾವಾಚನ ಮಂತ್ರ ಹೇಳಿ ಮಂಗಲ ಸ್ನಾನ ಮಾಡಿಸಿ ಬೆಳಿಗ್ಗೆ ಬೆಳಗೊಳ ಶ್ರೀ ಮಠದ ಭಗವಾನ್ 1008 ಶ್ರೀ ಶ್ರೀ ಶ್ರೀ ಚಂದ್ರನಾಥ ಸ್ವಾಮಿಗೆ ಅಷ್ಟ ವಿಧಾಅರ್ಚನೆ ಪೂಜೆ ಸಲ್ಲಿಸಿ ಪಂಚ ಅಮೃತ ಅಭಿಷೇಕ ಪಟ್ಟದ ಯಕ್ಷಿ ದೇವಿ ಕೂಶ್ಮಾಂಡೀನಿ ಮಾತೆಗೆ ಷೋಡಶ ಉಪಚಾರ ಪೂಜೆ ಅಭಿಷೇಕ, ಪಂಚ ಕುಮಾರ ಪೂಜೆ ಪೂರ್ವ ಚಾರ್ಯರ ಚರಣಗಳ ಪೂಜೆ ನವ ದೇವತೆ ಪೂಜೆ ನವಗ್ರಹ ಪೂಜೆ ದಿಗ್‍ವಂದನೆ ಸಲ್ಲಿಸಿ ಮುನಿಗಳ ಅಯಿ9ಕಾ ಮಾತಾಜಿ ಸಮಸ್ತ ಭಟ್ಟಾರಕರಿಗೆ ವಂದಿಸಿ ಸಿಂಹಾಸನ ರೋಹಣಗೈದರು.

ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಶ್ರೀ ದಿಗಂಬರ ಮಠ ಮೂಡುಬಿದಿರೆ, ಮಂಗಲ ಅಷ್ಟಕ ಪಠಿಸಿ ಶಾಸ್ತ್ರ ಸುವರ್ಣ ಪಿಂಚಿ ನೀಡಿದರು ಕನಕ ಗಿರಿ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಬಿರುದು ಹಾಗೂ ನೂತನ ಭಟ್ಟಾರಕ ರ ಹೆಸರು ಘೋಷಣೆ ಮಾಡಿದರು. ಅರ್ಚಕರು ಬಾಹುಬಲಿ ಬೆಟ್ಟ ಭದ್ರ ಬಾಹು ಗುಹೆ ಹಾಗೂ ಶ್ರವಣ ಬೆಳಗೊಳ ದ 32 ಬಸದಿ ಗಳ ಪ್ರಸಾದ ನೀಡಿದರು. ಅರಹಂತಗಿರಿ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು. ಸೊಂದಾ ಭಟ್ಟಕಲ oಕ ಸ್ವಾಮೀಜಿ ಸ್ತೋತ್ರ ಪಠಿಸಿದರು. ಹುಂಬುಜ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here