Monday 11th, December 2023
canara news

ಕಾರ್ಕಳ ಬೈಲೂರು ; ಪರಶುರಾಮ್ ಥಿೀಮ್ ಪಾರ್ಕ್‍ಗೆ ಸಂಸದ ಗೋಪಾಲ ಸಿ.ಶೆಟ್ಟಿ ಭೇಟಿ

Published On : 27 Apr 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.26: ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಕಾರ್ಕಳ ಬೈಲೂರು ಇಲ್ಲಿನ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪಿತ ಪರಶುರಾಮ್ ಥಿüೀಮ್ ಪಾರ್ಕ್‍ಗೆ ಬೃಹನ್ಮುಂಬಯಿಯಲ್ಲಿನ ಉತ್ತರ ಮುಂಬಯಿ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಇಂದಿಲ್ಲಿ ಬುಧವಾರ ಭೇಟಿ ನೀಡಿದರು.

ಕಾರ್ಕಳ ಶಾಸಕ ಸಚಿವ ವಿ.ಸುನೀಲ್ ಕುಮಾರ್ ಮುಂದಾಳುತ್ವದಲ್ಲಿ ಪರಶುರಾಮ್ ಥಿüೀಮ್ ಪಾರ್ಕ್ ನಿರ್ಮಾಣದ ಮೂಲಕ ಕರಾವಳಿ ಕರ್ನಾಟಕದಲ್ಲಿ ಸಂಸ್ಕೃತಿ ಮತ್ತು ದೇವಾಲಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಸ್ಟರ್ ಪ್ಲಾನ್ ರೂಪಿಸಿರುವುದು ಅಭಿನಂದನೀಯ. ನಮ್ಮ ಹುಟ್ಟೂರು ಕರಾವಳಿ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಲು ಅಪಾರ ಸಾಮರ್ಥ್ಯ ಹೊಂದಿದ್ದು, ಇಂತಹ ಯೋಜನೆಗಳ ಮೂಲಕÀ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಬಳಿಕ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯಥಿರ್üಗಳಾದ ವಿ.ಸುನೀಲ್‍ಕುಮಾರ್ (ಕಾರ್ಕಳ), ಗುರ್ಮೆ ಸುರೇಶ್ ಶೆಟ್ಟಿ (ಕಾಪು), ಯಶಪಾಲ್ ಸುವರ್ಣ (ಉಡುಪಿ), ಹರೀಶ್ ಪೂಂಜಾ (ಬೆಳ್ತಂಗಡಿ), ಉಮಾನಾಥ ಕೋಟ್ಯಾನ್ (ಮೂಡಬಿದ್ರೆ), ಉಳೆಪಾಡಿ ರಾಜೇಶ್ ನಾೈಕ್ (ಬಂಟ್ವಾಳ) ಮತ್ತಿತರ ಅಭ್ಯಥಿರ್üಗಳ ಪರ ಮತಯಾಚನೆ ನಡೆಸಿದರು.

ಸಂಸದರ ಜೊತೆ ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಎರ್ಮಾಳ್ ರೋಹಿತ್ ಹೆಗ್ಡೆ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಭುವನಾಭಿರಾಮ ಉಡುಪ, ಸುಭಾಷ್ ಶೆಟ್ಟಿ, ಕೇಶವ ಕರ್ಕೇರ, ಸತೀಶ್ ಅಂಚನ್, ರಂಗನಾಥ್ ಶೆಟ್ಟಿ, ದಿವಾಕರ್ ಸಾಮಾನಿ, ವಿನೋದ್ ಸಾಲಿಯಾನ್ ಬೆಳ್ಳಾಯರು, ವಿನೋದ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.

 

 
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here