Thursday 28th, March 2024
canara news

ರಾಷ್ಟ್ರೀಯ ಚಿಂತಕ ದಿ| ರಾಧಾಕೃಷ್ಣ ಡಿ.ಭಕ್ತ ಅವರಿಗೆ ಶ್ರದ್ಧಾಂಜಲಿ ಸಭೆ

Published On : 06 May 2023   |  Reported By : Rons Bantwal


ಜಗತ್ತಿನಲ್ಲೇ ಭಾರತ ಬಲಶಾಲಿಯಾಗಿದೆ : ಸಂಸದ ಗೋಪಾಲ್ ಶೆಟ್ಟಿ

ಮುಂಬಯಿ (ಆರ್‍ಬಿಐ), ಎ.06: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದ ಕಾಲಾವಧಿಯಲ್ಲಿ ರಾಷ್ಟ್ರದ ಚಿತ್ರಣಬದಲಾಗಿದೆ. ವಿಶ್ವದ ನಾಯಕರು ಇಂದು ಮೋದಿ ಅವರ ವಿಶ್ವಾಸ ಪಡೆಯದೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಲಾಗದ ಮಟ್ಟಕ್ಕೆ ನಮ್ಮ ರಾಷ್ಟ್ರ ಬೆಳೆದಿದೆ. ಸಂಘ ಪರಿವಾರದ ಹಾಗೂ ಸ್ವಾಮಿ ವಿವೇಕಾನಂದರ ವಿಚಾರದಿಂದ ಮುನ್ನಡೆಯುತ್ತಿರುವ ಭಾರತ ಜಗತ್ತಿನಲ್ಲೇ ಬಲಶಾಲಿಯಾಗಿದ್ದು ಇದು ದೇಶದಲ್ಲಿನ ಕ್ರಾಂತಿಯಾಗಿದೆ. ಆದ್ದರಿಂದ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು. ಉಪನ್ಯಾಸಕರು ನವ ಭಾರತದ ಸೃಷ್ಟಿಕರ್ತರು ಆದ್ದರಿಂದ ಪ್ರಾಧ್ಯಾಪಕರು ಯುವಪೀಳಿಗೆಯಲ್ಲಿ ಭವಿಷ್ಯರೂಪಿಸುವ ಕ್ರಾಂತಿ ಮಾಡುವ ಅಗತ್ಯವಿದೆ. ಇಂತಹ ದೂರದೃಷ್ಠಿತ್ವವನ್ನೇ ರಾಧಾಕೃಷ್ಣ ಭಕ್ತ ಹೊಂದಿದ್ದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಅವಶ್ಯಕತೆವಿದೆ ಎಂದು `ಸಂಸತ್ ರತ್ನ ಪ್ರಶಸ್ತಿ' ಪುರಸ್ಕೃತ ಮುಂಬಯಿ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ವಿವೇಕಾನಂದ ಇಂಜಿನೀಯರಿಂಗ್ ಕಾಲೇಜು ಪುತ್ತೂರು ಇದರ ಸ್ಥಾಪನೆಯ ಪ್ರಧಾನ ರೂವಾರಿ, ಸಂಚಾಲಕ, ಸಾಮಾಜಿಕ, ಧಾರ್ಮಿಕ ಸೇವಾಕರ್ತರಾಗಿದ್ದು ಕಳೆದ ಗುರುವಾರ ನಿಧನರಾದ ರಾಷ್ಟ್ರೀಯ ಚಿಂತಕ ಸ್ವರ್ಗೀಯ ರಾಧಾಕೃಷ್ಣ ದೇವದಾಸ್ ಭಕ್ತ ಅವರಿಗೆ ಕಳೆದ ಶುಕ್ರವಾರ ಸಂಜೆ ವಿವೇಕಾನಂದ ವಿದ್ಯಾವರ್ಧಕ ಸಂಘವು ನಡೆಸಿದ್ದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಗೋಪಾಲ್ ಶೆಟ್ಟಿ ಮಾಡಿದರು.

ವಿವೇಕಾನಂದ ಕಾಲೇಜು ಪುತ್ತೂರು ಇದರ ಸಭಾಗೃಹದಲ್ಲಿ ವಿವೇಕಾನಂದ ಶೈಕ್ಷಣಿಕ ಸಮೂಹದ (ವಿವೇಕಾನಂದ ವಿದ್ಯಾವರ್ಧಕ ಸಂಘ) ಇದರ ಸಂಚಾಲಕ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ವೇದಿಕೆಯಲ್ಲಿ ಸಂಸದ ಗೋಪಾಲ್ ಶೆಟ್ಟಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಕಾರ್ಯದರ್ಶಿ ಡಾ| ಕೆ.ಎಂ ಕೃಷ್ಣ ಭಟ್ ಆಸೀನರಾಗಿದ್ದರು.

ಆಯೋಜಿಸಲಾಗಿದ್ದ ಸಭೆಯಲ್ಲಿ ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಮುಂಬಯಿ (ಬೋರಿವಿಲಿ) ನಗರ ಸೇವಕ ಶಿವಾನಂದ ಶೆಟ್ಟಿ, ಪತ್ರಕರ್ತ ರೋನ್ಸ್ ಬಂಟ್ವಾಳ್, ಮನು ಎಂ.ರೈ, ಮುನ್ನಲಾಯಿಗುತ್ತು ಸಚ್ಚೀದಾನಂದ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ನಿಲೇಶ್ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಸ್ವರ್ಗೀಯ ರಾಧಾಕೃಷ್ಣ ಭಕ್ತ ಅವರ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ನಮಿಸಿದರು. ಡಾ| ಕೆ. ಮನ್‍ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ ನಾಯಕ್ ಶಾಂತಿಮಂತ್ರ ಪಠಿಸಿದರು. ನ್ಯಾಯವಾದಿ ಮುರಳೀಕೃಷ್ಣ ಕೆ.ವಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here