Friday 9th, June 2023
canara news

ಅಬ್ಬಕ್ಕ ವಿಹಾರ ನೌಕೆಯಲ್ಲಿ ಜರುಗಿದ 38ನೇ ಅಂತರಾಷ್ಟ್ರೀಯ ಸಾಂಸ್ಕೃಕ ಸೌರಭ ಸಂಭ್ರಮ

Published On : 05 May 2023   |  Reported By : Rons Bantwal


ತಾಳ್ಮೆಯಿಂದಲೇ ಸಂಘಟನೆಗಳ ಕ್ರಿಯಾಶೀಲತೆ : ಪ್ರಭಾ ಎನ್.ಪಿ ಸುವರ್ಣ

ಮುಂಬಯಿ (ಆರ್‍ಬಿಐ), ಮೇ.03: ಸಂಘಟನೆ ಮತ್ತು ಸಾಧನೆಗೆ ಅಗಾಧ ಪರಿಶ್ರಮದ ಅವಶ್ಯಕತೆ ಇದೆ. ಅತ್ಯಂತ ತಾಳ್ಮೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆಗಳು ನಿರಂತರವಾಗಿ, ಕ್ರಿಯಾಶೀಲತೆಯ ನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಿಸ್ಸೆಸ್ ಇಂಡಿಯಾ ಕ್ಲಾಸಿಕ್ - ರನ್ನರ್ ಅಪ್ ವಿಜೇತೆ ಮುಂಬಯಿಯ ಪ್ರಭಾ ಎನ್.ಪಿ ಸುವರ್ಣ ಅಭಿಪ್ರಾಯಪಟ್ಟರು.

ಕಳೆದ ಸೋಮವಾರ (ಮೇ.1) ಮಂಗಳೂರು ಅಬ್ಬಕ್ಕ ವಿಹಾರ ನೌಕೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಐ) ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ), ಮಂಗಳೂರು ಸಂಯುಕ್ತವಾಗಿ. ಸಮಾರಂಭವನ್ನು ಆಯೋಸಿದ್ದ ಆಯೋಜಿಸಲಾಗಿದ್ದ 38ನೇ ಅಂತರಾಷ್ಟ್ರೀಯ ಸಾಂಸ್ಕೃಕ ಸೌರಭ ಸಂಭ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪ್ರಭಾ ಸುವರ್ಣ ಮಾತನಾಡಿದರು.

ಐಸಿಎಫ್‍ಸಿಐ ಅಧ್ಯಕ್ಷ ಇಂ| ಕೆ.ಪಿ. ಮಂಜುನಾಥ್ ಸಾಗರ್ ಅವರು ಮಾತನಾಡಿ ನಾವು 30ಕ್ಕೂ ಹೆಚ್ಚು ದೇಶಗಳಲ್ಲಿ ಆಯೋಜಿಸಿರುವ. ಸಾಂಸ್ಕೃತಿಕ ಸೌರಭಗಳು ಸೌಹಾರ್ದತೆ, ಸ್ನೇಹ ಮತ್ತು ಸಹೋದರತೆಯ ಸಂದೇಶವನ್ನು ಸಾರುವ ಪ್ರಯತ್ನವನ್ನು 15 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಅದು " ನಾವು ವಿಶ್ವ ಸೌಹಾರ್ದ ಪ್ರಿಯರು" ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ ಎಂದರು.

ದುಬಾಯಿಯ ತುಳುಕೂಟದ ಮಾಜಿ ಸಂಚಲಕರಾದ ಶೇಕಬ್ಬ ಕೋಟೆ ಹೆಜಮಾಡಿ ಅವರು ಮಾತನಾಡಿ ತಂದೆ ತಾಯಿಯವರು ಕೂಡುವ ಸಂಸ್ಕಾರ ಅಮೂಲ್ಯವಾದದು. ಅದು ಜೀವನ ಪರ್ಯಂತ ನಮ್ಮೊಂದಿಗೆ ಉಳಿಯುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ತೋರುವ ಮನೋಧರ್ಮ ಸರ್ವ ಶ್ರೇಷ್ಠವಾದದ್ದು ಎಂದರು.

ಮಂಗಳೂರು ಫಿಶರೀಸ್ ಕಾಲೇಜಿನ ನಿವೃತ್ತ ಡೀನ್ ಡಾ| ಎಸ್.ಎಂ ಶಿವಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ದೇಶದ ಪ್ರತಿಯೊಂದು ರಾಜ್ಯವು ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿವೆ ಆದರೆ ಅವುಗಳೆಲ್ಲದರ ಸಾರ ಸಮುದಾಯಗಳ ನಡುವೆ ಸಾಮರಸ್ಯವನ್ನು ಬೆಸುವುದೇ ಆಗಿದೆ. ಎಂದರು.

ವೇದಿಕೆಯಲ್ಲಿ ಗಣ್ಯರಾದ ಬೆಂಗಳೂರಿನ ಸ್ವಾಮಿ ಎಂಟರ್ಪ್ರೈಸಸ್ ಆಡಳಿತ ನಿರ್ದೇಶಕ ಗೋ.ನಾ.ಸ್ವಾಮಿ, ಮೈಸೂರಿನ ನಿವೃತ್ತ ಡಿವೈಎಸ್ಪಿ ಕೆ.ಎಸ್ ಕೃಷ್ಣಮೂರ್ತಿ ಮತ್ತು ಮನೋಶಾಸ್ತ್ರಜ್ಞ ಹಾಗೂ ಆಪ್ತ ಸಮಾಲೋಚಕರಾದ ಡಾ| ಗುರುರಾಜ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿವಿಧ ಕ್ಷೇತ್ರದ ಸಾಧಕರಾದ ಡಾ| ವಸಂತ ಮುರಳಿ ಬೆಂಗಳೂರು, ಪ್ರತಿಭಾ ಸಾಲಿಯಾನ್ ಮಂಗಳೂರು, ವಾಮನ ಕುದ್ರೊಳಿ ಮತ್ತು ಡಾ ಸಂಗೀತಾ ಹೊಳ್ಳ ಅವರಿಗೆ ಗೌರವ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸಾಲ್ಯಾನ್, ಪ್ರತೀಕ್ಷಾ ಪ್ರಭು ಮತ್ತು ತಂಡವು ವಿವಿಧ ನೃತ್ಯಗಳನ್ನು ಹಾಗೂ ಗಾಯಕರಾದ ಗೋ.ನಾ ಸ್ವಾಮಿ, ಡಾ| ಶಿವಪ್ರಕಾಶ್, ಶಿವರಾಜ್ ಪಾಂಡೇಶ್ವರ, ಚಂದ್ರಕಾಂತ್ ಮತ್ತು ಎನ್.ನಾಗೇಂದ್ರ ಇವರು ಕನ್ನಡ ತುಳು ಮತ್ತು ಹಿಂದಿ ಗೀತೆಗಳನ್ನ ಹಾಡಿ ರಂಜಿಸಿದರು.

 
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here