Monday 29th, May 2023
canara news

ಮಂಗಳೂರು ವಿವಿ ಕುಲಪತಿಯವರಿಗೆ ಅಭಿನಂದನಾ ಕಾರ್ಯಕ್ರಮ

Published On : 21 May 2023


ಶಿಕ್ಷಣ ಕ್ಷೇತ್ರಕ್ಕೆ ಪೆÇ್ರ.ಯಡಪಡಿತ್ತಾಯ ಅವರ ಕೊಡುಗೆ ಅಪಾರ: ಪೆÇ್ರ.ಬಿ.ಎಸ್.ಶೇರಿಗಾರ

ಮುಂಬಯಿ (ಆರ್‍ಬಿಐ), ಮೇ.20: ಕೊಣಾಜೆ ಇಲ್ಲಿನ ಮಂಗಳೂರು ವಿವಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾನಿಲಯವಾಗಿದ್ದು, ಗುಣಮಟ್ಟದ ಶಿಕ್ಷಣದೊಂದಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿರುವ ಇಂತಹ ವಿಶ್ವವಿದ್ಯಾಲಯದಲ್ಲಿ ಪೆÇ್ರ| ಯಡಪಡಿತ್ತಾಯ ಅವರು ವಿದ್ಯಾಥಿರ್sಯಾಗಿ, ಅಧ್ಯಾಪಕನಾಗಿ, ಕುಲಸಚಿವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸುವುದರೊಂದಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಾದರಿ ಶಿಕ್ಷಣ ತಜ್ಞರಾಗಿದ್ದಾರೆ ಎಂದು ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪೆÇ್ರ| ಬಿ.ಎಸ್.ಶೇರಿಗಾರ ಅವರು ಹೇಳಿದರು.

ಮಂಗಳಾ ಅಲುಮ್ನಿ ಅಸೋಸಿಯೇಷನ್(ಒಂಂ) ಹಾಗೂ ಅಸೋಸಿಯೇಷನ್ ಆಫ್ ಮಂಗಳೂರು ಯುನಿವರ್ಸಿಟಿ ಕಾಮರ್ಸ್ ಅಲುಮ್ನಿ (ಂಒUಅಂ) ಇದರ ವತಿಯಿಂದ ಮಂಗಳೂರು ವಿವಿ ಕುಲಪತಿ ಪೆÇ್ರ| ಪಿ.ಎಸ್ .ಯಡಪಡಿತ್ತಾಯ ಅವರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾಥಿರ್sಗಳ ಮಂಗಳಾ ಅಲುಮ್ನಿ ಅಸೋಸಿಯೇಷನ್‍ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ವಿದ್ಯಾಥಿರ್sಗಳಿಗೆ ಹೊರ ಜಿಲ್ಲೆಗಳಲ್ಲಿ, ಹೊರ ರಾಜ್ಯಗಳಲ್ಲಿ ವಿಶೇಷ ಮನ್ನಣೆ ಇದೆ. ಮಂಗಳೂರು ವಿವಿಯಲ್ಲಿ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಮಹತ್ತರವಾದ ಕೊಡುಗೆ ನೀಡಿದವರು ಯಡಪಡಿತ್ತಾಯರು. ಕೊರೊನಾ ಸಂದರ್ಭದಲ್ಲಿಯೂ ಜನಪಯೋಗಿ ಕಾರ್ಯದ ಮೂಲಕ ಗಮನಸೆಳೆದಿದ್ದಾರೆ. ಅವರ ಪ್ರತಿಭೆ ಹಾಗೂ ಸಾಧನೆಯ ಮೂಲಕ ಧ್ರುವ ನಕ್ಷತ್ರದಂತೆ ಅವರ ಹೆಸರು ಕಂಗೊಳಿಸಲಿದೆ ಎಂದರು.

ನಿಟ್ಟೆ ವಿವಿಯ ಸಹ ಕುಲಾಧಿಪತಿ ಡಾ| ಎಂ.ಎಸ್ .ಮೂಡಿತ್ತಾಯ ಅವರು ಅಭಿನಂದನಾ ಭಾಷಣ ಮಾಡಿ, ಬಡತನದಿಂದ ಹುಟ್ಟಿ ಜೀವನ ಸಾಧನೆ ಮಾಡಿದವರು ಪೆÇ್ರ| ಪಿ.ಎಸ್.ಯಡಪಡಿತ್ತಾಯ. ಅವರು ತಮ್ಮ ಪ್ರಯತ್ನ, ಪರಿಶ್ರಮ, ವೃತ್ತಿ ಪ್ರೇಮದ ಮೂಲಕ ತನ್ನ ಕನಸನ್ನು ಹಂತ ಹಂತವಾಗಿ ಈಡೇರಿಸಿದ್ದಾರೆ. ದೇಶವು ಬಲಿಷ್ಠವಾಗಬೇಕಾದರೆ ಅಲ್ಲಿಯ ಉನ್ನತ ಶಿಕ್ಷಣದ ವ್ಯವಸ್ಥೆಯು ಉನ್ನತವಾಗಿರಬೇಕು. ಇಂತಹ ಉನ್ನತ ಶಿಕ್ಷಣಕ್ಕೆ ಅರ್ಥಪೂರ್ಣತೆಯನ್ನು ಕೊಟ್ಟ ಪೆÇ್ರ.ಯಡಪಡಿತ್ತಾಯ ಅವರಂತಹ ಪ್ರತಿಭೆಗಳು ಇನ್ನಷ್ಡು ಮೂಡಿಬರಲಿ ಎಂದು ಹೇಳಿದರು.

ಮಾ' ಗೌರವಾಧ್ಯಕ್ಷ ದಿನೇಶ್ ಕುಮಾರ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪೆÇ್ರ.ಯಡಪಡಿತ್ತಾಯ ಅವರಲ್ಲಿದ್ದ ಜ್ಞಾನ, ಬುದ್ದಿವಂತಿಕೆ, ಪ್ರಯತ್ನ, ಪರಿಶ್ರಮದ ಕಾರಣ ಅವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಉನ್ನತ ಮಟ್ಟದ ಕುಲಪತಿ ಹುದ್ದೆಯನ್ನು ಅಲಂಕರಿಸಲು ಕಾರಣವಾಯಿತು. ಮಾ ವತಿಯಿಂದ ಮುಂದಿನ ಕೆಲವೇ ದಿನಗಳಲ್ಲಿ ವಿವಿ ಕ್ಯಾಂಪಸ್ ನಲ್ಲಿ ಮಾ ಭವನ ನಿರ್ಮಿಸಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದರು.

ಕುಲಪತಿ ಪೆÇ್ರ| ಯಡಪಡಿತ್ತಾಯ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ಏನಾದರೂ ಜೀವನದಲ್ಲಿ ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ಮಂಗಳೂರು ವಿಶ್ವವಿದ್ಯಾಲಯ. ಕುಲಪತಿಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಕೋವಿಡ್ ಸಂದರ್ಭ ನನಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಸಿಕ್ಕಿತು. ನನ್ನನ್ನು ಅಭಿನಂದಿಸಿದ ಮಂಗಳಾ ಅಲುಮ್ನಿ ಅಸೋಸಿಯೇಷನ್ ಹಾಗೂ ಅಸೋಸಿಯೇಷನ್ ಆಫ್ ಮಂಗಳೂರು ಯುನಿವರ್ಸಿಟಿ ಕಾಮರ್ಸ್ ಅಲುಮ್ನಿ ಸಂಘಟನೆಯು ಮಂಗಳೂರು ವಿವಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಮುಖ್ಯ ಅತಿಥಿsಯಾಗಿ ಪೆÇ್ರ| ಅನುರಾಧಾ, ಮಂಗಳೂರು ವಿವಿ ಕಾಮರ್ಸ್ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ ಪೆÇ್ರ| ರಾಜಶೇಖರ್ ಹೆಬ್ಬಾರ್, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ಮೊದಲಾದವರು ಉಪಸ್ಥಿತರಿದ್ದರು. ಮಂಗಳಾ ಅಲುಮ್ನಿ ಅಸೋಸಿಯೇಶನ್‍ನ ಮಧುಸೂದನ್ , ಡಾ.ಸುಭಾಷಿಣಿ, ಅಸೋಸಿಯೇಷನ್ ಆಫ್ ಮಂಗಳೂರು ಯುನಿವರ್ಸಿಟಿ ಕಾಮರ್ಸ್ ಅಲುಮ್ನಿಯ ಪೆÇ್ರ.ರಾಜಶೇಖರ ಹೆಬ್ಬಾರ್ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮಂಗಳಾ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷರಾದ ಪೆÇ್ರ| ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಪ್ಪ ಪೂಜಾರಿ ವಂದಿಸಿದರು. ದೇವಿಪ್ರಭಾ ಅವರು ಕಾರ್ಯಕ್ರಮ ನಿರೂಪಿಸಿದರು.

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here