Thursday 8th, May 2025
canara news

ಎನ್‍ಸಿಪಿ ಚುನಾವಣಾಧಿಕಾರಿಯಾಗಿ ಲಕ್ಷ ್ಮಣ ಸಿ.ಪೂಜಾರಿ ಆಯ್ಕೆ

Published On : 26 May 2023   |  Reported By : Rons Bantwal


ಮುಂಬಯಿ, (ಆರ್‍ಬಿಐ) ಮೇ.26: ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ)ನಾಯಕ ಲಕ್ಷ್ಮಣ್ ಪೂಜಾರಿ ಅವರನ್ನು ಉತ್ತರ ಮಧ್ಯಾ ಜಿಲ್ಲಾ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.

ಈ ಕುರಿತಂತೆ ಮುಂಬಯಿ ವಿಭಾಗೀಯ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿಲೀಪ್ ವಲ್ಸೇ ಪಾಟೀಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಸ್ಥಾನೀಯ ಚುನಾವಣೆಗಾಗಿ ಈ ಜವಾಬ್ದಾರಿಯನ್ನು ಲಕ್ಷ್ಮಣ್ ಪೂಜಾರಿ ಅವರಿಗೆ ನೀಡಲಾಗಿದೆ.

ದಕ್ಶಿಣ ಕನ್ನಡ ಜಿಲ್ಲೆಯ ಮಂಗಳೂಋ ಮೂಲ್ಕಿ ಚಿತ್ರಾಪುರ ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಅನುಭವೀ ರಾಜರಣಿ ಆಗಿರುವ ಇವರು ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿಸಿ ಕೊಂಡಿರುವರು. ಮೂಲತಃ ಕಾಂಗ್ರೇಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯಲ್ಲಿ ನಗರ ಸೇವಕ ಸ್ಥಾನಕ್ಕೆ ಅಭ್ಯಥಿರ್ü ಆಗಿದ್ದರು. ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘ (ರಿ.) ಇದರ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ, ಸಾಂತಕ್ರೂಜ್ ಪೂರ್ವದ ಗುರುನಾರಾಯಣ ಮಾರ್ಗದ ನಾಮಕಾರಣಕ್ಕೂ, ಬಿಲ್ಲವರ ಭವನದ ನಿರ್ಮಾಣಕ್ಕೂ ತನ್ನ ಯೋಗದಾನ ನೀಡಿರುವರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here