Thursday 28th, September 2023
canara news

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು

Published On : 28 May 2023   |  Reported By : Rons Bantwal


ಮುಂಬಯಿ, (ಆರ್‍ಬಿಐ) ಮೇ.28: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ sಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಇಂದಿಲ್ಲಿ ಮಂಜೇಶ್ವರ ತಾಲೂಕಿನ ಕೆದುಂಬಾಡಿ ಕಂಚಿಲಕಟ್ಟೆಯ 13 ಮನೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ (ವಯರಿಂಗ್ ಸಹಿತ) ಮತ್ತು 3 ಮನೆಗಳಿಗೆ ಶೌಚಾಲಯಗಳನ್ನು ಕೊಡುಗೈ ದಾನಿ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಒಂದು ಮನೆಯಲ್ಲಿ ಸ್ವಿಚ್ ಒತ್ತಿ ದೀಪ ಬೆಳಗಿಸುವುದರ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ತರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಲೋನಿಯ ಮಕ್ಕಳಿಂದ ಪ್ರಾರ್ಥನೆ ಬಳಿಕ ಪರಮಪೂಜ್ಯರು ಸದಾಶಿವ ಶೆಟ್ಟಿ ಮತ್ತು ಅತಿಥಿಗಳೊಂದಿಗೆ ದೀಪ ಪ್ರಜ್ವಲನೆಗೈದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸದಾಶಿವ ಶೆಟ್ಟಿಯವರಂತಹ ಬಡವರ ಬಂಧು, ಕೊಡುಗೈ ದಾನಿಗಳ ಸಹಕಾರದಿಂದ ನಾವು ಆತ್ಮನಿರ್ಭರರಾಗಿ ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣಎಂದು ಕರೆ ನೀಡಿದರು. ಬಳಿಕ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ ನಮ್ಮ ಧರ್ಮ ಸಂಸ್ಕøತಿಯನ್ನು ಉಳಿಸಿ, ಮೂಲಭೂತ ವ್ಯವಸ್ಥೆಗಳಿಗೆ ಬೇಕಾದ ಅವಶ್ಯಕತೆಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ಸರ್ವ ರೀತಿಯ ಸಹಕಾರವನ್ನು ನೀಡುವೆಎಂದು ನುಡಿದರು.

ಈ ಸಂದರ್ಭದಲ್ಲಿ ಮಂಜೇಶ್ವರ ಗ್ರಾ.ಪಂ. ಸದಸ್ಯ ಶ್ರೀ ರಾಜೇಶ್, ಮಲರಾಯಿ ಕ್ಷೇತ್ರದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ, ರವಿ ಮುಡಿಮಾರ್, ರವಿ ಮಂಜನಾಡಿ ಮತ್ತು ಉಮಾನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿ ಮುಡಿಮಾರ್ ಸ್ವಾಗತಿಸಿ, ಉಮಾನಾಥ್ ವಂದನಾರ್ಪಣೆಗೈದ ಕಾರ್ಯಕ್ರಮದ ನಿರೂಪಣೆಯನ್ನು ಗಂಗಾಧರ ಕೊಂಡೆವೂರು ನಿರ್ವಹಿಸಿದರು.

 




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here