Thursday 2nd, May 2024
canara news

ಜೀವನ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ: ವೀರೇಶಾನಂದ ಸರಸ್ವತಿ ಸ್ವಾಮೀಜಿ

Published On : 02 Jul 2023   |  Reported By : media release


ಗೋಕರ್ಣ: ಶೈಕ್ಷಣಿಕ ಪರೀಕ್ಷೆಗಿಂತ ಬದುಕಿನ ಪರೀಕ್ಷೆಯಲ್ಲಿ ತೇರ್ಗಡೆಯಾಗುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ತುಮಕೂರು ಶ್ರೀ ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಲಹೆ ಮಾಡಿದರು.

ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾತೃಭೂಮಿ ಕ್ಯಾಂಪಸ್‍ಗೆ ಭೇಟಿ ನೀಡಿ, ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, "ಶೈಕ್ಷಣಿಕ ಪರೀಕ್ಷೆಗಳಲ್ಲಿ 35 ಅಂಕ ಪಡೆದರೂ ತೇರ್ಗಡೆಯಾಗಬಹುದು. ಆದರೆ ಜೀವನ ಪರೀಕ್ಷೆಯಲ್ಲಿ ಗೆಲ್ಲಬೇಕಾದರೆ ನೂರಕ್ಕೆ ನೂರು ಅಂಕ ಬೇಕು. ಒಂದು ಅಂಕದ ಕೊರತೆಯೂ ಬದುಕಲ್ಲಿ ಸೋಲಾಗಿ ಪರಿಣಮಿಸುತ್ತದೆ ಎಂದು ವಿಶ್ಲೇಷಿಸಿದರು.

ವಿದ್ಯಾರ್ಥಿ ಜೀವನ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ ಶ್ರೀಗಳು, ವಿದ್ಯಾರ್ಥಿಗಳ ಯಶಸ್ಸಿಗೆ ಪರಿಶ್ರಮ ಹಾಗೂ ಸತತ ಪ್ರಯತ್ನ ಅವಶ್ಯಕ ಎಂದರು.

ಚಿಂತನೆ, ಕ್ರಿಯೆ, ಹವ್ಯಾಸ, ವ್ಯಕ್ತಿತ್ವ ಹಾಗೂ ಧ್ಯೇಯ ಎಂಬ ಐದು ಸೂತ್ರಗಳು ಬದುಕನ್ನು ಕೆಟ್ಟ ಅಥವಾ ಒಳ್ಳೆಯ ದಾರಿಯಲ್ಲಿ ನಿಮ್ಮನ್ನು ಮುನ್ನಡೆಸಲು ಮತ್ತು ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಅಂಶಗಳು. ಆದ್ದರಿಂದ ಎಲ್ಲರೂ ನಿಮ್ಮ ಆಸೆ, ಭಾವನೆಗಳನ್ನು ಸರಿಯಾಗಿ ಕಾಯ್ದುಕೊಳ್ಳಿ ಮತ್ತು ಸರಿಯಾದ ಮಾರ್ಗದಲ್ಲಿ ಚಿಂತನಾತ್ಮಕ ನಿರ್ಧಾರ ಕೈಗೊಂಡು ಬದುಕು ಕಟ್ಟಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಆಶ್ರಮದ, ವಿದ್ಯಾರ್ಥಿ ಜೀವನಕ್ಕೆ ಉಪಯುಕ್ತವಾದ 'ವಿವೇಕ ವಿದ್ಯಾರ್ಥಿ' ಪರೀಕ್ಷೆಯ ಕುರಿತು ಮಾಹಿತಿ ನೀಡಿದರು. ಮತ್ತು ಪರೀಕ್ಷೆಯಲ್ಲಿ ಭಾಗಿಗಳಾಗಿ ಮೌಲ್ಯಯುತ ಜೀವನ ಪಾಠಗಳಿಂದ ಲಾಭ ಪಡೆಯುವಂತೆ ಮಕ್ಕಳಿಗೆ ಕರೆ ನೀಡಿದರು.

ಬಳಿಕ ವಿದ್ಯಾರ್ಥಿಗಳ ಜತೆ ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಸಿದರು. ಮಕ್ಕಳ ಸ್ತೋತ್ರ ಪಠಣ, ಗುರುಗೀತೆಯ ಭಾವಪೂರ್ವ ಗಾಯನವನ್ನು ಶ್ರೀಗಳು ಮನತುಂಬಿ ಶ್ಲಾಘಿಸಿದರು.

ಸಭೆಯಲ್ಲಿ ಶ್ರೀ ರಾಮಕೃಷ್ಣಾಶ್ರಮದ ಪರಮಾನಂದ ಸ್ವಾಮೀಜಿ, ವಿವಿವಿ ವರಿಷ್ಠಾಚಾರ್ಯರಾದ ವಿದ್ವಾನ್ ಪ್ರೊ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಧಾನ ಆಚಾರ್ಯರಾದ ವಿದ್ವಾನ್ ನರಸಿಂಹ ಭಟ್, ವಿವಿವಿ ಸಂಯೋಜಕರಾದ ಅಶ್ವಿನಿ ಉಡುಚೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅಶೋಕೆ ಪುಣ್ಯ ಪರಿಸರದಲ್ಲಿ ವಿವಿವಿ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಶ್ರೀಗಳು, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಜತೆ ಚರ್ಚಿಸಿ, ಪಾರಂಪರಿಕ- ನವಯುಗ ಶಿಕ್ಷಣ ಸಮನ್ವಯದ ಬಗ್ಗೆ ಮಾಹಿತಿ ಪಡೆದರು. ಶ್ರೀ ಮಠದ ಸಮಾಜ ಪುನರ್ ನಿರ್ಮಾಣ ಕಾರ್ಯಗಳಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here