Monday 22nd, July 2024
canara news

ಮಹಾರಾಷ್ಟ್ರದ ಪ್ರಸಿದ್ಧ ವಕೀಲ ಎಂ.ವಿ ಕಿಣಿ ನಿಧನ

Published On : 29 Jun 2023   |  Reported By : Rons Bantwal


ಮುಂಬಯಿ, ಜೂ.29: ಬೃಹನ್ಮುಂಯಿಯಲ್ಲಿನ ಹಿರಿಯ ತಜ್ಞ, ಕಾನೂನು ಸಂಸ್ಥೆಯ ಸಂಸ್ಥಾಪಕ ವಕೀಲ, ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಇಲ್ಲಿನ ನ್ಯಾಯವಾದಿ ಎಂ.ವಿ ಕಿಣಿ ಪ್ರಸಿದ್ಧಿಯ ಮಣಿಪುರ ವಸಂತ ಕಿಣಿ (80.) ಅವರು ಅಲ್ಪಕಾಲ್ದ ಅನಾರೋಗ್ಯದಿಂದ ಕಳೆದ ಬುಧವಾರ (ಜೂ.28) ಬೆಳಿಗ್ಗೆ ಮಾಹಿಮ್ ಇಲ್ಲಿನ ಹಿಂದೂಜಾ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಜನಮಾನಸದಲ್ಲಿ ಎಂ.ವಿ ಕಿಣಿ ಎಂದೇ ಪ್ರಸಿದ್ಧರಾಗಿದ್ದ ಅವರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ವಕೀಲರ ಸಮಿತಿ ಸದಸ್ಯರಾಗಿ ಪ್ರತಿನಿಧಿಸುತ್ತಿದ್ದರು.

ಕಾನೂನು ಕ್ಷೇತ್ರದಲ್ಲಿ ಹಲವಾರು ಹೆಗ್ಗುರುತು ಪ್ರಕರಣಗಳ ವೈಯುಕ್ತಿಕವಾಗಿ ಪ್ರತಿನಿಧಿಸಿದ್ದ ಇವರು ರಾಷ್ಟ್ರದ ವಾಯುಯಾನ ಕಾನೂನಿನಲ್ಲಿ ಅಗ್ರಗಣ್ಯ ಮೇಧಾವಿಯಾಗಿ ಗುರುತಿಸಿದ್ದರು.

ಸಂಸ್ಥೆಯು 35 ವರ್ಷಗಳಿಗೂ ಹೆಚ್ಚು ಕಾಲ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದು, ಕಿಣಿ ಅವರು ವೈಟ್ ಕಾಲರ್ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸುವಲ್ಲಿ ಪರಿಣಿತರಾಗಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಸಾಮಾನ್ಯವಾಗಿ ಹಣಕಾಸು ವಲಯದಲ್ಲಿನ ಹಗರಣಗಳ ಮುಚ್ಚಿಡುವಿಕೆ ಸೇರಿದಂತೆ ರಾಷ್ಟ್ರೀಕೃತ ಮತ್ತು ಖಾಸಗಿ ಎರಡೂ ಬ್ಯಾಂಕ್‍ಗಳಲ್ಲಿನ ವಂಚನೆ ಪ್ರಕರಣಗಳಲ್ಲಿ ಹಲವಾರು ಉನ್ನತ ಮಟ್ಟದ ಕಾನೂನು ಕ್ರಮಗಳನ್ನು ಮುನ್ನಡೆಸಿದ್ದಾರೆ. ಅವರು ಅನೇಕ ಗ್ರಾಹಕರು ರಾಷ್ಟ್ರದ ಪರಿವರ್ತನೆಯಲ್ಲಿ ಪ್ರಮುಖ ಆಟಗಾರರಾಗಿದ್ದಾರೆ ಮತ್ತು ಭಾರತದಲ್ಲಿ ಮತ್ತು ಅಂತರಾಷ್ಟ್ರೀಯವಾಗಿ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳ ಅಗತ್ಯಗಳನ್ನು ಪೂರೈಸಲು ಸಂಸ್ಥೆಯು ವಿಕಸನಗೊಂಡಿದೆ.

1978ರಲ್ಲಿ ಮುಂಬಯಿಯಲ್ಲಿ ಎಂ.ವಿ ಕಿಣಿ ಲಾ ಫರ್ಮ್ ಕಚೇರಿಯನ್ನು ಆರಂಭಿಸಿದ ಇವರು ಸದ್ಯ ಸುಮಾರು 150ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ ರಾಷ್ಟ್ರವ್ಯಾಪಿ ಸೇವಾನಿರತರಾಗಿದ್ದರು. ಮುಂಬಯಿ (ವಿಟಿ) ಫೆÇೀರ್ಟ್‍ನಲ್ಲಿ ಕಿಣಿ ಅಸೋಸಿಯೇಟ್ಸ್ ಹೆಸರಲ್ಲಿ ಕೇಂದ್ರ್ರ ಕಚೇರಿ ಹೊಂದಿದ್ದರು. ಸಮಾಜ ಸೇವಕರಾಗಿದ್ದ ಕಿಣಿ ಅವರು ಜಿಎಸ್‍ಬಿ ಸಮಾಜ ಮುಂಬಯಿ ಇದರ ಪಶ್ಚಿಮ ವಿಭಾಗದ ಉಪಾಧ್ಯಕ್ಷರಾಗಿ, ಮಾಜಿ ಅಧ್ಯಕ್ಷರಾಗಿ ಶ್ರಮಿಸಿದ್ದರು. ಜಿಎಸ್‍ಬಿ ಸೇವಾ ಮಂಡಲದ ಗಣೇಶೋತ್ಸವ ಸಮಿತಿಯ ಜಂಟಿ ಸಮನ್ವಯಕ ಸೇರಿದಂತೆ ದಕ್ಷಿಣ ಭಾರತ ಹಾಗೂ ಮುಂಬಯಿಯ ಅನೇಕ ದೈವ-ದೇವಸ್ಥಾನಗಳಿಗೆ ಕೊಡುಗೈದಾನಿದ್ದು ಧಾರ್ಮಿಕ ಧುರೀಣರಾಗಿ ಜನಾನುರೆಣಿಸಿದ್ದ ರು.

ಆಸಕ್ತರ ಮದುವೆ ಮತ್ತು ಶಿಕ್ಷಣ, ಅನಾರೋಗ್ಯಕ್ಕೆ ಸ್ಪಂದಿಸುತ್ತಿದ್ದ ಇವರು ಕರ್ಜತ್ ಪ್ರದೇಶದ ಹಿಂದುಳಿದ ಮತ್ತು ಆದಿವಾಸಿ ಮಕ್ಕಳ ಶೈಕ್ಷಣಿಕ ಸಹಾಯವನ್ನು ಒದಗಿಸುತ್ತಿದ್ದರು.

ಮೃತರು ಓರ್ವ ಪುತ್ರ ರವಿಚಂದ್ರ ವಿ.ಕಿಣಿ, ಪುತ್ರಿ ವಿನಿತ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದು, ಕಿಣಿ ಅವರ ಅಂತ್ಯಕ್ರಿಯೆಯು ಇಂದು (ಜೂ.30) ಗುರುವಾರ ಪೂರ್ವಾಹ್ನ ವಿಲೇಪಾರ್ಲೆ ಪೂರ್ವದಲ್ಲಿನ ನಮನ್ ಅಪಾರ್ಟ್‍ಮೆಂಟ್‍ನ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂಧೇರಿ ಪೂರ್ವದಲ್ಲಿರುವ ಪಾರ್ಸಿವಾಡಾ ಸ್ಮಶಾನ ಭೂಮಿಯಲ್ಲಿ ನಡೆಸಲಾಯಿತು.

 
More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here