Monday 24th, June 2024
canara news

`ಅಮರ್ಥ' ಕನ್ನಡ ಚಿತ್ರಕ್ಕೆ ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಮುಹೂರ್ತ

Published On : 20 Jul 2023   |  Reported By : Rons Bantwal


ಸಿನೆಮಾದ ಯಶಸ್ವಿ ಕನ್ನಡದ ಕೀರ್ತಿಯಾಗಿದೆ : ಕನ್ಯಾನ ಸದಾಶಿವ ಶೆಟ್ಟಿ

ಮುಂಬಯಿ (ಆರ್‍ಬಿಐ), ಜು.20: ಕರಾವಳಿ ಮೂಲದ ಸಾಕಷ್ಟು ಕಲಾವಿದರು ಸಿನೆಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದು ಜಗತ್ತಿನ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೀಗ ಮಂಗಳೂರು ಮೂಲದ ಮತ್ತೊಂದು ಪ್ರತಿಭಾವಂತರ ತಂಡ ಹೊಸ ಚಿತ್ರಕ್ಕೆ ಕೈಹಾಕಿದೆ. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಾಣದಲ್ಲಿ `ಅಮರ್ಥ' ನೂತನ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ಸಮಾರಂಭ ಸಹಿಹಿತ್ಲು ಭಗವತಿ ಕ್ಷೇತ್ರದಲ್ಲಿ ನಡೆಯಿತು.

ವಿನಯ್ ಪ್ರೀತಮ್ ನಿರ್ದೇಶನದಲ್ಲಿ ಸಿನಿಮಾ ತಯಾರಾಗುತ್ತಿದೆ. ಕ್ಯಾಮರಾಮ್ಯಾನ್ ಗುರುಪ್ರಶಾಂತ್ ರೈ, ನಿರ್ಮಾಣ ವಿನ್ಯಾಸಕರು ಪ್ರಶಾಂತ್ ಆಳ್ವ ಕಲ್ಲಡ್ಕ, ಕಲಾ ನಿರ್ದೇಶಕರು ಸಂತೋಷ್ ವೇಣೂರು, ಸಂಗೀತ ಶಿನೋಯ್ ಜೋಸೆಫ್, ಸಂಕಲನ ಗಣೇಶ್ ನಿರ್ಚಾಲ್ ಕೆಲಸ ಮಾಡಲಿದ್ದಾರೆ.

ತಾರಾಗಣದಲ್ಲಿ ರಾಜ್ ದೀಪಕ್, ಮೇಘನಾ ರಾಜ್, ಕೃತಿ ಶೆಟ್ಟಿ, ರೂಪ ವರ್ಕಾಡಿ, ನಮಿತಾ, ಶೈಲಾಶ್ರೀ ಮಂಜುಭಾಷಿಣಿ, ಗೋಪಿನಾಥ ಭಟ್, ರಘುಪಾಂಡೇಶ್ವರ್, ಉಷಾ ಭಂಡಾರಿ, ರವಿ ಭಟ್, ಮಂಜುನಾಥ ಹೆಗಡೆ, ಮಧು ಹೆಗಡೆ, ಅಶ್ವಿನಿ ಹಾಸನ್, ಸಂದೀಪ್ ಮೊದಲಾದವರಿದ್ದಾರೆ.

ಅಮರ್ಥ ಕನ್ನಡ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿ ಮಾತನಾಡಿ ಸಾಮಾಜಿಕವಾಗಿ ವಿವಿಧ ಕ್ಷೇತ್ರದಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ಸಿನೆಮಾ ರಂಗದಲ್ಲಿ ಕೈ ಹಾಕುವ ಪ್ರಯತ್ನ ಮಾಡುತ್ತಿದ್ದೇನೆ. ಸಿನೆಮಾವನ್ನು ಯಶಸ್ವಿಗೊಳಿಸುವುದು ಎಲ್ಲರ ಕೈಯಲ್ಲಿದೆ ಎಂದು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ತಮ್ಮಣ್ಣ ಶೆಟ್ಟಿ ಕ್ಲಾಪ್ ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಚಿತ್ರನಟ ಶಿವಧ್ವಜ್ ಶೆಟ್ಟಿ ಮಾತನಾಡಿ ಚಿತ್ರದ ನಿರ್ಮಾಪಕರು, ಚಿತ್ರತಂಡದಲ್ಲಿರುವ ಹೆಚ್ಚಿನವರು ನನ್ನ ಆತ್ಮೀಯರು. ಹೀಗಾಗಿ ನನಗೆ ಈ ಸಿನೆಮಾದ ಬಗ್ಗೆ ಹೆಚ್ಚು ಆಸಕ್ತಿ. `ಅಮರ್ಥ' ಸಿನೆಮಾ ಕನ್ನಡ ಚಿತ್ರರಂಗದ ಸಮರ್ಥ ಚಿತ್ರವಾಗಲಿ ಎಂದು ಶುಭ ಹಾರೈಸಿದರು.

ಧಾರಾವಾಹಿ ಕಲಾವಿದ ಗುರು ಹೆಗ್ಡೆಯವರು ಈ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ಚಿತ್ರಕಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುಹೆಗ್ಡೆ ರಂಗಭುಮಿಯಲ್ಲಿ ಪಳಗಿ ಧಾರಾವಾಹಿ, ಸಿನಿಮಾಗಳಲ್ಲಿ ತನ್ನ ಪ್ರತಿಭೆಯನ್ನು ಸಾಭೀತು ಪಡಿಸಿದವರು. ಸಿನಿಮಾ ನಿರ್ಮಾಣ ಅವರ ಕನಸ್ಸಾಗಿತ್ತು. ಈಗ ಅದು ತನ್ನ ಸಂಬಂಧಿ ಕನ್ಯಾನ ಸದಾಶಿವ ಶೆಟ್ಟಿಯವರ ಮೂಲಕ ನನಸಾಗುತ್ತಿದೆ. ಗುರುಹೆಗ್ಡೆಯವರ ಕತೆಯನ್ನು ಮೆಚ್ಚಿ ಸದಾಶಿವ ಶೆಟ್ಟಿ ಅವರು ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.

ನಿರ್ದೇಶಕ ವಿನಯ್ ಪ್ರೀತಂ, ಸುನಿಲ್ ನೆಲ್ಲಿಗುಡ್ಡೆ, ಪ್ರಕಾಶ್ ಶೆಟ್ಟಿ ಧರ್ಮನಗರ, ರಘು ಪಾಂಡೇಶ್ವರ, ರೂಪ ವರ್ಕಾಡಿ, ಶೈಲಶ್ರೀ ಸಿನೆಮಾದ ಕಲಾವಿದರು, ತಂತ್ರಜ್ಞರು, ದೇವಸ್ಥಾನದ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 
More News

ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Comment Here